ಬಡಗನ್ನೂರು: ಪಡುಮಲೆ ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದ ದ್ವಿತೀಯ ವರ್ಷದ ಪ್ರತಿಷ್ಟಾ ವರ್ಧಂತುತ್ಸವ ಕಾರ್ಯಕ್ರಮವು ಮಾ.1 ಮತ್ತು 2ರಂದು ವಿವಿಧ ವೈದಿಕ, ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದ್ದು, ಆ ಪ್ರಯುಕ್ತ ಆಮಂತ್ರಣ ಪತ್ರಿಕೆಯ ಬಿಡುಗಡೆ ಕಾರ್ಯಕ್ರಮ ಫೆ.20ರಂದು ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ನಡೆಯಿತು.

ಪ್ರಾರಂಭದಲ್ಲಿ ಆಮಂತ್ರಣ ಪತ್ರಿಕೆಯನ್ನು ಶ್ರೀ ದೇವರ ಸನ್ನಿಧಿಯಲ್ಲಿಟ್ಟು ದೇವಸ್ಥಾನ ಪ್ರಧಾನ ಅರ್ಚಕ ಮಹಾಲಿಂಗ ಭಟ್ ನೇತೃತ್ವದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ ಬಳಿಕ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಲಾಯಿತು. ಈ ಸಂದರ್ಭದಲ್ಲಿ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ನಿಕಟಪೂರ್ವ ಅಧ್ಯಕ್ಷ ಮನೋಜ್ ರೈ ಪೇರಾಲು, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಶ್ರೀನಿವಾಸ್ ಭಟ್ ಚಂದುಕೂಡ್ಲು, ಜಾತ್ರೋತ್ಸವ ಸಮಿತಿ ಅಧ್ಯಕ್ಷ ಸತೀಶ್ ರೈ ಕಟ್ಟಾವು, ಶ್ರೀ ಪೂಮಾಣಿ ಕಿನ್ನಿಮಾಣಿ ದೇವಸ್ಥಾನದಲ್ಲಿ ವ್ಯವಸ್ಥಾಪನಾ ಸಮಿತಿ ಸದಸ್ಯ ರವಿರಾಜ ರೈ ಸಜಂಕಾಡಿ, ಪಡುಮಲೆ ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರುಗಳಾದ ಚಂದ್ರಶೇಖರ ಆಳ್ವ ಗಿರಿಮನೆ, ಪ್ರಭಾಕರ ಗೌಡ ಕನ್ನಯ, ಪ್ರತಿಷ್ಟಾ ವರ್ಧಂತ್ಯುತ್ಸವ ಸಮಿತಿ ಅಧ್ಯಕ್ಷ ಚಂದ್ರಶೇಖರ ಭಂಡಾರಿ ಕಂಬಳ ನಲಿಕೆಮಜಲು, ಪ್ರಧಾನ ಕಾರ್ಯದರ್ಶಿ ಬಾಲಕೃಷ್ಣ ಪಾಟಾಳಿ ಅಣಿಲೆ, ಕೋಶಾಧಿಕಾರಿ ಹರಿಶ್ಚಂದ್ರ ಗೌಡ ಕನ್ನಡ್ಕ ಜಾತ್ರೋತ್ಸವ ಸಮಿತಿ ಜತೆ ಕಾರ್ಯದರ್ಶಿ ಸುರೇಶ್ ಪಳ್ಳತ್ತಾರು, ಕೋಶಾಧಿಕಾರಿ ರಾಜೇಶ್ ರೈ ಮೇಗಿನಮನೆ ಪಡುಮಲೆ ಶ್ರೀ ಕಟೀಲು ಯಕ್ಷಗಾನ ಬಯಲಾಟ ಸಮಿತಿ ಅಧ್ಯಕ್ಷ ಉದಯ ಕಮಾರ ರತ್ನಮಾನಸ ಪಡುಮಲೆ, ಶ್ರೀ ಶಾಸ್ತಾರ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಗಂಗಾಧರ ರೈ ಮೇಗಿನಮನೆ, ಉತ್ಸವ ಸಮಿತಿ ಸದಸ್ಯರುಗಳಾದ ಪುರಂದರ ರೈ ಕುದ್ಕಾಡಿ, ಶ್ರೀನಿವಾಸ್ ಗೌಡ ಕನ್ನಯ, ರಘುರಾಮ ಪಾಟಾಳಿ ಶರವು, ಅನಂದ ಪಾಟಾಳಿ ಏರಜೆ, ಕಿರಣ್ ಕುಮಾರ್ ಮೈಂದನಡ್ಕ, ಪುರಂದರ ರೈ ಸೇನರಮಜಲು, ನವೀನ್ ಪಕ್ಕಳ ಕೈೂಲ, ಮೋನಪ್ಪ ನಾಯ್ಕ ಪಟ್ಲಡ್ಕ, ಪುಷ್ಪರಾಜ ಆಳ್ವ ಗಿರಿಮನೆ, ಶ್ರೀಧರ ನಾಯ್ಕ ಮೈಂದನಡ್ಕ, ಪಕೀರ ಮೈಂದನಡ್ಕ, ವಸಂತ ಗೌಡ ಪಕ್ಯೋಡ್ ರಮೇಶ್ ರೈ ಕೈೂಲ, ವಿಶ್ವನಾಥ ಗೌಡ ಅಳಂತಡ್ಕ, ಉದಯ ಕುಮಾರ್ ಶರವು, ಹರೀಶ್ ನೆರೋಳ್ತಡ್ಕ, ಲಿಂಗಪ್ಪ ಗೌಡ ಮೋಡಿಕೆ, ಶಶಿಧರ ಪಟ್ಟೆ, ಸುಲೋಚನ ನೇರ್ಲಪ್ಪಾಡಿ, ವಿದ್ಯಾ ಸೇನರಮಜಲು, ಸತೀಶ್ ಗೌಡ ಉಳಿಗ ಪ್ರಕಾಶ್ ಸಾಲಿಯಾನ್, ಬಾಲಕೃಷ್ಣ ನಾಯ್ಕ ಮೂಂಡೋಳೆ ಪ್ರಜ್ವಲ್ ಅಣಿಲೆ, ಸತೀಶ್ ಕುಲಾಲ್ ಪೈರುಪುಣಿ, ಕೃಷ್ಣ ಕುಲಾಲ್ ಪೈರುಪುಣಿ, ಈಶ್ವರ ಆಚಾರ್ಯ ಮೈಂದನಡ್ಕ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ಬಳಿಕ ಪೂರ್ವಭಾವಿ ಸಭೆಯು ಪ್ರತಿಷ್ಟಾ ವರ್ಧಂತುತ್ಸವ ಸಮಿತಿ ಅಧ್ಯಕ್ಷ ಚಂದ್ರಶೇಖರ ಭಂಡಾರಿ ಕಂಬಳ ರವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಶ್ರೀನಿವಾಸ್ ಭಟ್ ಚಂದುಕೂಡ್ಲು ಮಾತನಾಡಿ ಉತ್ಸವ ಎರಡು ದಿವಸ ನಡೆಯಲಿದೆ. ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ವಿತರಣೆ ಹಾಗೂ ಇತರ ವ್ಯವಸ್ಥೆಗಳ ಬಗ್ಗೆ ಚರ್ಚಿಸಲಾಯಿತು.