ಅ.ಭಾ.ಸಾ.ಪ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾಗಿ ಪಿ.ಬಿ.ಹರೀಶ್ ರೈ ಆಯ್ಕೆ

0

ಮಂಗಳೂರು : ಭಾರತದ ಎಲ್ಲ ಭಾಷೆಗಳ ಸಾಹಿತ್ಯ ಕ್ಷೇತ್ರದ ರಾಷ್ಟ್ರೀಯ ಸಂಘಟನೆ ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಇದರ ದ.ಕ.ಜಿಲ್ಲಾ ಘಟಕದ ಅಧ್ಯಕ್ಷರಾಗಿ ಪತ್ರಕರ್ತ ಪಿ.ಬಿ.ಹರೀಶ್ ರೈ ಪುನರಾಯ್ಕೆಯಾಗಿದ್ದಾರೆ.


ಗೌರವಾಧ್ಯಕ್ಷರಾಗಿ ಡಾ. ಎಂ.ಮೋಹನ ಆಳ್ವ , ಕಾರ್ಯದರ್ಶಿಯಾಗಿ ಸುಮಂಗಲ ರತ್ನಾಕರ ರಾವ್, ಉಪಾಧ್ಯಕ್ಷೆಯಾಗಿ ವೀಣಾ .ಟಿ .ಶೆಟ್ಟಿ, ಜತೆ ಕಾರ್ಯದರ್ಶಿಗಳಾಗಿ ಲತೇಶ್ ಬಾಕ್ರಬೈಲ್, ಶ್ರೀಲಕ್ಷ್ಮಿ ಮಠದಮೂಲೆ, ಖಜಾಂಜಿಯಾಗಿ ಭಾಸ್ಕರ ರೈ ಕಟ್ಟ ಹಾಗೂ ಚಂದ್ರಶೇಖರ ಕುಳಮರ್ವ (ಮಾಧ್ಯಮ ಪ್ರಮುಖ), ಪ್ರಕಾಶ ನಾರಾಯಣ ಚಾರ್ಮಾಡಿ ( ಸಂಪರ್ಕ ಪ್ರಮುಖ), ಗೀತಾ ಲಕ್ಷ್ಮೀಶ( ಸಾಹಿತ್ಯ ಕೂಟ ಪ್ರಮುಖ), ರಮೇಶ ಮಯ್ಯ , ಡಾ. ಸುರೇಶ ನೆಗಳಗುಳಿ, ರವೀಂದ್ರ ಶೆಟ್ಟಿ ಬಳೆಂಜ ( ಸಮಿತಿ ಸದಸ್ಯರು ) ಆಯ್ಕೆಯಾಗಿದ್ದಾರೆ.
ಪಿ.ಬಿ.ಹರೀಶ್ ರೈ ಕಡಬ ತಾಲೂಕಿನ ಕುಕ್ಕೆ ಸುಬ್ರಹ್ಮಣ್ಯದವರಾಗಿದ್ದು, ಮಂಗಳೂರು ಪ್ರೆಸ್ ಕ್ಲಬ್ ನ ಅಧ್ಯಕ್ಷರಾಗಿದ್ದಾರೆ.

LEAVE A REPLY

Please enter your comment!
Please enter your name here