ಆಧ್ಯಾತ್ಮಿಕ ಮಜ್ಲಿಸ್‌ಗಳಿಂದ ಹೃದಯ ಶುದ್ದಿಗೊಳಿಸಲು ಸಾಧ್ಯ-ಲತೀಫ್ ಸಖಾಫಿ
ಪುತ್ತೂರು: ಆಧ್ಯಾತ್ಮಿಕ ಮಜ್ಲಿಸ್‌ಗಳು ಮನುಷ್ಯನ ಮಾನಸಿಕ, ಶಾರೀರಿಕವಾದ ಅನೇಕ ಸಮಸ್ಯೆಗಳಿಗೆ ಪರಿಹಾರವನ್ನು ಒದಗಿಸುವ ಸ್ಥಳವಾಗಿದ್ದು ಆತ್ಮೀಯ ಮಜ್ಲಿಸ್‌ಗಳಲ್ಲಿ ಭಾಗವಹಿಸುವುದರಿಂದ ಮಾನಸಿಕ ನೆಮ್ಮದಿಯೂ ಲಭಿಸುತ್ತದೆ, ಹಾಗಾಗಿ ಅಂತಹ ಮಜ್ಲಿಸ್‌ಗಳಲ್ಲಿ ಹೆಚ್ಚು ಭಾಗವಹಿಸಲು ಪ್ರತಿಯೊಬ್ಬರೂ ಶ್ರಮಿಸಬೇಕೆಂದು ಅಬ್ದುಲ್ ಲತೀಫ್ ಸಖಾಫಿ ಕಾಂತಪುರಂ ಹೇಳಿದರು. ಕೆ.ಕೆ ಮಸ್ಜಿದ್ ಡೆಮ್ಮಂಗರ ಬೆಟ್ಟಂಪಾಡಿ ಇದರ ಆಶ್ರಯದಲ್ಲಿ ಫೆ.19ರಂದು ನಡೆದ ಮದನೀಯಂ ಆತ್ಮೀಯ ಮಜ್ಲಿಸ್‌ಗೆ ನೇತೃತ್ವ ನೀಡಿ ಅವರು ಮಾತನಾಡಿದರು.
ನಮ್ಮ ಹೃದಯವನ್ನು ಸದಾ ಪರಿಶುದ್ದತೆಯಲ್ಲಿ ಇರುವಂತೆ ನೋಡಿಕೊಳ್ಳಬೇಕು, ಒಳಿತನ್ನು ಮಾತ್ರ ಮೈಗೂಡಿಸಿಕೊಳ್ಳಬೇಕು, ಅಲ್ಲಾಹು ಆಜ್ಞಾಪಿಸದ, ಇಷ್ಟಪಡದ ಯಾವ ಕ್ಷೇತ್ರಗಳಲ್ಲೂ ನಾವು ತೊಡಗಿಸಿಕೊಳ್ಳಬಾರದು, ದಿಕ್ರ್ ಸ್ವಲಾತ್‌ಗಳನ್ನು ಸಾಧ್ಯವಾದಷ್ಟು ಹೆಚ್ಚಿಸುವ ಮೂಲಕ ಪರಿಶುದ್ದ ಮತ್ತು ಸಾರ್ಥಕ ಜೀವನ ನಡೆಸಲು ಪ್ರಯತ್ನಿಸಬೇಕು ಎಂದು ಅವರು ಹೇಳಿದರು.
ಅಸ್ಸಯ್ಯಿದ್ ಶಿಹಾಬುದ್ದೀನ್ ಅಲ್ ಅಹ್ದಲ್ ಮುತ್ತನ್ನೂರು ತಂಙಳ್ ಮಲಪ್ಪುರಂ ಕುಟು ಪ್ರಾರ್ಥನೆಗೆ ನೇತೃತ್ವ ನೀಡಿದರು.
ಸ್ವಲಾತ್ ಮಜ್ಲಿಸ್:
ಅಸರ್ ನಮಾಜಿನ ಬಳಿಕ ಸಯ್ಯಿದ್ ಶಂಸುದ್ದೀನ್ ತಂಙಳ್ ಅಲ್‌ಅಝ್ಹರಿ ಬನ್ಪುತ್ತಡ್ಕ ನೇತೃತ್ವದಲ್ಲಿ ಸ್ವಲಾತ್ ವಾರ್ಷಿಕ ಮಜ್ಲಿಸ್ ನಡೆಯಿತು. ಬಳಿಕ ನಡೆದ ಸಭಾ ಕಾರ್ಯಕ್ರಮವನ್ನು ಆನೆಕಲ್ಲು ತಾಜುಶ್ಶರೀಯ ಸುನ್ನೀ ಸೆಂಟರ್‌ನ ಮುದರ್ರಿಸ್ ಅಬೂ ಹಾಮಿದ್ ಝಕರಿಯ್ಯ ಫೈಝಿ ಉದ್ಘಾಟಿಸಿದರು. ಕೆ.ಪಿ ಮೂಸಲ್ ಮದನಿ ಕಕ್ಕೂರು ದುವಾ ನೆರವೇರಿಸಿದರು. ಕೊರಿಂಗಿಲ ಮಸೀದಿಯ ಅಧ್ಯಕ್ಷ ಮುಹಮ್ಮದ್ ಹಾಜಿ ಅಧ್ಯಕ್ಷತೆ ವಹಿಸಿದ್ದರು. ಡೆಮ್ಮಂಗರ ಕೆ.ಕೆ ಮಸ್ಜಿದ್‌ನ ಮುದರ್ರಿಸ್ ಎಂ.ಎ ಅಬ್ಬಾಸ್ ಸಅದಿ ಸ್ವಾಗತಿಸಿದರು.
ವೇದಿಕೆಯಲ್ಲಿ ಅಬ್ದುಲ್ ನಾಸಿರ್ ಹಾಜಿ ಪಳ್ಳಂಗೋಡು, ಸಾರ್ಯ ಅಲ್ ಅಮಲ್ ಜುಮಾ ಮಸೀದಿ ಅಧ್ಯಕ್ಷ ಯೂಸುಫ್ ಗೌಸಿಯಾ ಸಾಜ, ರೆಂಜ ಎಫ್‌ಜೆಎಂ ಅಧ್ಯಕ್ಷ ಅಬ್ಬಾಸ್ ಹಾಜಿ ಮಣ್ಣಾಪು, ಉದ್ಯಮಿ ಯೂಸುಫ್ ಹಾಜಿ ಕೈಕಾರ, ಗುತ್ತಿಗೆದಾರ ಉಸ್ಮಾನ್ ಹಾಜಿ ಚೆನ್ನಾರ್, ಮನ್ಸೂರ್ ಆರ್ಲಪದವು, ಡಿ.ಎಂ ಮಹಮ್ಮದ್ ಹಾಜಿ ಕೃಷ್ಣಾಪುರ, ಇಂಜಿನಿಯರ್ ಹಾಜಿ ಆಲಿಕುಂಞಿ ಕೊರಿಂಗಿಲ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ಸುಳ್ಯ ತಾಲೂಕು ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆ, ತಂಬುತ್ತಡ್ಕ ಮಸೀದಿಯ ಪ್ರ.ಕಾರ್ಯದರ್ಶಿ ಮಹಮ್ಮದ್ ಕುಂಞಿ ಹಾಜಿ ಕೂಟತ್ತಾನ, ಪಾಣಾಜೆ ಸುನ್ನೀನಗರ ಮಸೀದಿಯ ಅಧ್ಯಕ್ಷ ಅಬ್ದುಲ್ಲ ಕುಂಞಿ ಜಾಲಗದ್ದೆ, ಆರ್ಲಪದವು ಬಿಜೆಎಂ ಅದ್ಯಕ್ಷ ಯೂಸುಫ್ ನೆಲ್ಲಿತ್ತಿಮಾರು, ಆರ್ಲಪದವು ಅಫ್ರಾ ಮಸೀದಿಯ ಅಧ್ಯಕ್ಷ ಅಬೂಬಕ್ಕರ್ ಶಾಫಿ ಕಾನ, ತಂಬುತ್ತಡ್ಕ ಬಿಜೆಎಂ ಅಧ್ಯಕ್ಷ ರಫೀಕ್ ಎನ್‌ಆರ್‌ಕೆ, ಪೇರಲ್ತಡ್ಕ ಬಿಜೆಎಂ ಅಧ್ಯಕ್ಷ ಮಹಮ್ಮದ್ ಹಾಜಿ ನವಾಝ್, ಉಮರ್ ಹಾಜಿ ಜಾಲಗದ್ದೆ, ಆಲಿಕುಂಞಿ ಹಾಜಿ ತಂಬುತ್ತಡ್ಕ, ಕೊರಿಂಗಿಲ ಮಸೀದಿಯ ಮಾಜಿ ಕಾರ್ಯದರ್ಶಿ ಶಾಹುಲ್ ಹಮೀದ್ ಕೆಎಂಕೆ, ಉದ್ಯಮಿ ಕೆ.ಎಂ ಅಲಿ ಆರ್ಲಪದವು, ಬೆಟ್ಟಂಪಾಡಿ ಗ್ರಾ.ಪಂ ಸದಸ್ಯ ಮೊದುಕುಂಞಿ ಕೋನಡ್ಕ, ಕೊರಿಂಗಿಲ ಮಸೀದಿಯ ಪ್ರ.ಕಾರ್ಯದರ್ಶಿ ಮೂಸಾಕುಂಞಿ ಬೆಟ್ಟಂಪಾಡಿ ಮತ್ತಿತರ ಹಲವಾರು ಮಂದಿ ಉಪಸ್ಥಿತರಿದ್ದರು.

ಸ್ವಾಗತ ಸಮಿತಿಯ ಚೇರ್‌ಮೆನ್ ಮೂಸಾಕುಂಞಿ ಕೀಲಂಪಾಡಿ, ಕನ್ವೀನರ್ ಅಶ್ರಫ್ ಆನಡ್ಕ, ಉಪಾಧ್ಯಕ್ಷ ಅಶ್ರಫ್ ಕುಕ್ಕುವಳ್ಳಿ, ಕಾರ್ಯದರ್ಶಿ ಮೂಸಾಕುಂಞಿ ಚೆಲ್ಯಡ್ಕ, ಸಂಘಟನಾ ಕಾರ್ಯದರ್ಶಿಗಳಾದ ಅಬ್ದುಲ್ ರಹಿಮಾನ್ ಎಂಪೆಕಲ್ಲು, ಅಬ್ದುಲ್ ರಹಿಮಾನ್ ಕೈಕಾರ ಹಾಗೂ ಪದಾಧಿಕಾರಿಗಳು ಮತ್ತು ಸದಸ್ಯರು, ಡೆಮ್ಮಂಗರ ನುಸ್ರತುಲ್ ಮಸಾಕೀನ್ ಯೂತ್ ಫೆಡರೇಶನ್‌ನ ಅಧ್ಯಕ್ಷ ರಫೀಕ್ ಡಮ್ಮಂಗರ ಹಾಗೂ ಪದಾಧಿಕಾರಿಗಳು ಮತ್ತು ಸದಸ್ಯರು, ಕೆ.ಕೆ ಮಸ್ಜಿದ್ ಕಮಿಟಿಯ ಪದಾಧಿಕಾರಿಗಳು ಮತ್ತು ಸದಸ್ಯರು ವಿವಿಧ ಕಾರ್ಯಕ್ರಮ ನಿರ್ವಹಿಸಿ ಸಹಕರಿಸಿದರು. ಕಾರ್ಯಕ್ರಮದಲ್ಲಿ ನೂರಾರು ಮಂದಿ ಭಾಗವಹಿಸಿದ್ದರು.