ಪುತ್ತೂರು:ಕೊಡಿಪ್ಪಾಡಿ ಎಂಬಲ್ಲಿ ಮನೆಯೊಂದಕ್ಕೆ ನುಗ್ಗಿ ಮಹಿಳೆಯೊಬ್ಬರಿಗೆ ಹಲ್ಲೆ ನಡೆಸಿ ಕೊಲೆ ಬೆದರಿಕೆಯೊಡ್ಡಿದ್ದ ಆರೋಪದಲ್ಲಿ ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೊಡಿಪ್ಪಾಡಿ ನಿವಾಸಿ ಹೆಚ್.ಅಮೀನಾ (43ವ) ಎಂಬವರು ದೂರು ನೀಡಿದವರು.‘ನಾನು ಕೆ.ಎಂ.ಅಬ್ದುಲ್ಲ ಎಂಬವರನ್ನು 2019ರಲ್ಲಿ ವಿವಾಹವಾಗಿದ್ದೇನೆ.ಆದರೆ ನನ್ನ ಪತಿ ಈ ಹಿಂದೆ ಝಾರ ಎಂಬವರನ್ನು ವಿವಾಹ ಆಗಿರುವ ವಿಚಾರ ತಿಳಿಸದೆ ನನ್ನನ್ನು ಮದುವೆಯಾಗಿದ್ದಾರೆ.ಫೆ.19ರಂದು ನನ್ನ ಪತಿ ಕೆ.ಎಂ.ಅಬ್ದುಲ್ಲಾ, ಝಾರ ಮತ್ತು ಗಝಾಲಿ ಹಾಗು ರೈಸ ಎಂಬವರು ಮನೆಗೆ ಪ್ರವೇಶಿಸಿ ನನ್ನನ್ನು ಮನೆಯಿಂದ ಹೊರಗೆ ಹೋಗುವಂತೆ ಒತ್ತಾಯಿಸಿ ಕೊಲೆ ಬೆದರಿಕೆಯೊಡ್ಡಿದ್ದಾರೆ.ಈ ನಡುವೆ ಮನೆಯ ಗೃಹೋಪಯೋಗಿ ಸಾಮಾಗ್ರಿಗಳನ್ನು ಬಿಸಾಡಿ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ’ ಎಂದು ದೂರಿನಲ್ಲಿ ಅವರು ಆರೋಪಿಸಿದ್ದಾರೆ.ಘಟನೆಗೆ ಸಂಬಂಧಿಸಿ ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ