ಪುತ್ತೂರು: ಪುತ್ತೂರಿನ ಶಿವರಾಮ ಕಾರಂತ ಬಾಲವನದಲ್ಲಿ ಭಾರತ್ ಸ್ಕೌಟ್ ಮತ್ತು ಗೈಡ್ಸ್ ಸಂಸ್ಥಾಪಕರಾದ ಲಾರ್ಡ್ ಬೇಡನ್ ಪಾವೆಲ್ ರವರ ಹುಟ್ಟು ಹಬ್ಬವನ್ನು ಫೆ.22ರಂದು ಆಚರಿಸಿದರು.
ಬಾಲವನದ ಈಜು ಕೊಳದಲ್ಲಿ ಸ್ಕೌಟ್ ಮತ್ತು ಗೈಡ್ಸ್ ವಿದ್ಯಾರ್ಥಿಗಳಿಗೆ ಪ್ರಥಮ ಚಿಕಿತ್ಸೆ, ನೀರಿಗೆ ಬಿದ್ದ ವ್ಯಕ್ತಿಯನ್ನು ಸುರಕ್ಷಿತವಾಗಿ ಕಾಪಾಡಿಕೊಳ್ಳುವುದು ಹೇಗೆ? ಹಾವು ಕಚ್ಚಿದಾಗ, ಮತ್ತು ಕರೆಂಟ್ ಶಾಕ್ ಹೊಡೆದಾಗ ಕೈಗೊಳ್ಳುವ ಕ್ರಮಗಳನ್ನು ಪ್ರಾತ್ಯಕ್ಷಿಕೆಯಾಗಿ ಪ್ರಮುಖ ಈಜು ತರಬೇತುದಾರರಾದ ದೀಕ್ಷಿತ್ , ಸೀತಾರಾಮ, ಸಚಿನ್, ಎನ್ಸನ್, ಪ್ರಜ್ವಲ್ ಹಾಗೂ ಅಂತಾರಾಷ್ಟ್ರೀಯ ಈಜುಗಾರರಾದ ತ್ರಿಶೂಲ್ 120 ವಿದ್ಯಾರ್ಥಿಗಳಿಗೆ ತರಬೇತಿಯನ್ನು ನೀಡಿದರು. ಜೀವರಕ್ಷಕರಾಗಿ ಶಿವಣ್ಣ ಸಹಕರಿಸಿದರು.

ಖ್ಯಾತ ವೈದ್ಯ ಡಾ. ಸುರೇಶ್ ನೆಗಲಗುಳಿ, ಪ್ರಖ್ಯಾತ ಜಾದುಗಾರ, ಮುಬೀನಾ ಪರ್ವೀನ್ ತಾಜ್ ಮತ್ತು ಶಮ ಪರ್ವೀನ್ ತಾಜ್ ಚಾಂದ್ ಮಾರ್ಗದರ್ಶನ ನೀಡಿದರು.
ಕಾರ್ಯಕ್ರಮದಲ್ಲಿ ಸಹ ಕಾರ್ಯದರ್ಶಿಗಳಾದ ಸುನೀತ LT, ಪಾಪೆಮಜಲು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಬುಶ್ರಾಶಾಲೆ ಕಾವು, ಅಂಬಿಕಾ ಶಾಲೆ ಬಪ್ಪಳಿಗೆ , ಬೆಥನಿ ಆಂಗ್ಲ ಮಾಧ್ಯಮ ಪ್ರೌಢಶಾಲೆ, ದರ್ಬೆ ಶಾಲೆಯ ಶಿಕ್ಷಕರಾದ ಮೇಬಲ್ ಡಿಸೋಜ ,ರಜನಿ, ಹೇಮಲತಾ, ಚಂದ್ರಕಲಾ, ಮೈತ್ರೇಯಿ, ಪ್ರದೀಪ್, ರೇಂಜರ್ ಭಾಗವಹಿಸಿದರು. ವಿದ್ಯಾರ್ಥಿಗಳಾದ ಆಕಾಂಕ್ಷ ಕಜೆಗದ್ದೆ ಮತ್ತು ವಿಷ್ಣು ಪ್ರೀಯಾ ಭಾಗವಹಿಸಿದರು.