ಕಾಣಿಯೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಬೊಬ್ಬೆಕೇರಿ ಸ.ಹಿ.ಪ್ರಾ ಶಾಲೆಗೆ ಮಂಜೂರುಗೊಂಡ ಬೆಂಚು ಡೆಸ್ಕ್ ಗಳ ಹಸ್ತಾಂತರ ಕಾರ್ಯಕ್ರಮವು ನಡೆಯಿತು. ಈ ಸಂದರ್ಭದಲ್ಲಿ ಶ್ರೀ ಕ್ಷೇ. ಧ. ಗ್ರಾ. ಯೋಜನೆಯ ಸವಣೂರು ವಲಯದ ಮೇಲ್ವಿಚಾರಕಿ ವೀಣಾ, ಶಾಲಾ ಮುಖ್ಯಗುರು ಶಶಿಕಲಾ, ಎಸ್ ಡಿ ಎಂ ಸಿ ಅಧ್ಯಕ್ಷೆ ಸುನೀತಾ ಗಣೇಶ್, ಉಪಾಧ್ಯಕ್ಷ ರಮೇಶ್ ಉಪ್ಪಡ್ಕ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಹರೀಶ್ ಪೈಕ, ಸೇವಾ ಪ್ರತಿನಿಧಿ ಮನೋರಮಾ, ಶಿಕ್ಷಕಿಯರಾದ ಶೋಭಿತಾ, ಗೀತಾ ಕುಮಾರಿ, ಸುರೇಖಾ, ಶೃತಿ, ದಿವ್ಯಾ, ಜಯಲತಾ, ಸುಶ್ಮಿತಾ, ಅಡುಗೆ ಸಿಬ್ಬಂದಿಗಳಾದ ಶಶಿಕಲಾ, ಮಹಾಲಕ್ಷ್ಮಿ,ಲತಾ ಮತ್ತು ಪೋಷಕರು, ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.