ಕಾಣಿಯೂರು: ಶ್ರೀ ಜಗದ್ಗುರು ಶ್ರೀಮನ್ಮದ್ವಾಚಾರ್ಯ ಮೂಲ ಸಂಸ್ಥಾನಂ ಉಡುಪಿ ಕಾಣಿಯೂರು ರಾಮತೀರ್ಥ ಮಠದ ಜಾತ್ರೋತ್ಸವವು ಫೆ 28 ರಿಂದ ಮಾ 4ರವರೆಗೆ ನಡೆಯಲಿದ್ದು, ಜಾತ್ರೋತ್ಸವದ ಪ್ರಯುಕ್ತ ಶ್ರಮದಾನ, ಸ್ವಚ್ಛತಾ ಕಾರ್ಯಕ್ರಮವು ಫೆ 23ರಂದು ನಡೆಯಿತು.
ಕಾಣಿಯೂರು ಶ್ರೀ ಅಮ್ಮನವರ ದೇವಸ್ಥಾನ ಮತ್ತು ದೈವಸ್ಥಾನದ ಸುತ್ತ ಮುತ್ತ, ಜಾತ್ರಾ ಗದ್ದೆಯಲ್ಲಿ ಶ್ರಮದಾನ ನಡೆಸಲಾಯಿತು. ಈ ಸಂದರ್ಭದಲ್ಲಿ ಕಾಣಿಯೂರು ಮಠದ ವ್ಯವಸ್ಥಾಪಕರಾದ ಶ್ರೀನಿಧಿ ಆಚಾರ್ಯ, ಕೂಡುಕಟ್ಟಿನವರು, ಗ್ರಾಮಸ್ಥರು, ವಿವಿಧ ಸಂಘ ಸಂಸ್ಥೆಯವರು ಭಾಗವಹಿಸಿದ್ದರು.