ಉದನೆ: ಬಿಷಪ್ ಪೋಳಿಕಾರ್ಪೋಸ್ ಕಿಂಡರ್ ಗಾರ್ಡನ್ ಸ್ಕೂಲ್‌ನಲ್ಲಿ ‘ಫ್ರೂಟ್ಸ್ ಡೇ’ ಆಚರಣೆ

0

ನೆಲ್ಯಾಡಿ: ಉದನೆ ಸೈಂಟ್ ಆಂಟನೀಸ್ ವಿದ್ಯಾಸಂಸ್ಥೆಯ ಬಿಷಪ್ ಪೋಳಿಕಾರ್ಪೋಸ್ ಕಿಂಡರ್ ಗಾರ್ಡನ್‌ನಲ್ಲಿ ಫ್ರೂಟ್ಸ್ ಡೇ(ಹಣ್ಣುಗಳ ದಿನ) ಆಚರಿಸಲಾಯಿತು.


ಆರೋಗ್ಯ ವೃದ್ಧಿಸುವಲ್ಲಿ ಹಣ್ಣುಗಳ ಮಹತ್ವ ಹಾಗೂ ಬಗೆ ಬಗೆಯ ಹಣ್ಣುಗಳನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವ ಉದ್ದೇಶದಿಂದ ಈ ವಿನೂತನ ಕಾರ್ಯಕ್ರಮವನ್ನು ಸಂಸ್ಥೆ ಪ್ರತೀ ವರ್ಷ ಹಮ್ಮಿಕೊಳ್ಳುತ್ತಾ ಬಂದಿದೆ. ಪುಟಾಣಿಗಳು ಬಗೆ ಬಗೆಯ ಹಣ್ಣುಗಳನ್ನು ತಂದು ಪ್ರದರ್ಶನ ಮಾಡಿದರು. ಶಿಕ್ಷಕರು ಹಣ್ಣುಗಳ ಹೆಸರು ಹಾಗೂ ಅದರ ಮಹತ್ವವನ್ನು ತಿಳಿಸಿದರು. ಬಳಿಕ ವಿದ್ಯಾರ್ಥಿಗಳು ಎಲ್ಲಾ ಬಗೆಯ ಹಣ್ಣುಗಳನ್ನು ಸವಿದರು. ಸಂಸ್ಥೆಯ ಸಂಚಾಲಕರಾದ ರೆ.ಫಾ ಹನಿ ಜೇಕಬ್ ಶುಭ ಹಾರೈಸಿದರು. ಕಿಂಡರ್ ಗಾರ್ಡನ್‌ನ ವಿದ್ಯಾರ್ಥಿಗಳು ಹಾಗೂ ಸಂಸ್ಥೆಯ ಶಿಕ್ಷಕ ವೃಂದದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here