*12 ಸ್ಥಾನಕ್ಕೆ 44 ಮಂದಿ ನಾಮಪತ್ರ ಸಲ್ಲಿಕೆ,20 ಮಂದಿ ನಾಮಪತ್ರ ವಾಪಸ್ಸು
*24 ಮಂದಿ ಅಭ್ಯರ್ಥಿಗಳು ಅಂತಿಮ ಕಣದಲ್ಲಿ
*ಮಾ.2 ರಂದು ಚುನಾವಣೆ
ಆಲಂಕಾರು: ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ಮಾ.2 ರಂದು ಚುನಾವಣೆ ನಡೆಯಲಿದ್ದು, 12 ಸ್ಥಾನಕ್ಕೆ 44 ಮಂದಿ ನಾಮಪತ್ರ ಸಲ್ಲಿಸಿದ್ದು,ಎಲ್ಲಾ ನಾಮಪತ್ರಗಳು ಕ್ರಮಬದ್ದವಾಗಿದ್ದು.ಫೆ.24 ರಂದು 20 ಮಂದಿ ನಾಮಪತ್ರ ವಾಪಸ್ಸು ಪಡೆದಿದ್ದು , 24 ಮಂದಿ ಅಭ್ಯರ್ಥಿಗಳು ಅಂತಿಮ ಕಣದಲ್ಲಿ ಇದ್ದಾರೆ. ಸಾಮಾನ್ಯ ಸ್ಥಾನಕ್ಕೆ ಅಶೋಕ ಗೋಕುಲನಗರ,ಉದಯ ಸಾಲಿಯಾನ್ ಮಾಯಿಲ್ಗ, ಕೇಶವ ಗೌಡ ಆಲಡ್ಕ, ಜನಾರ್ಧನಾ ಪೂಜಾರಿ ಕದ್ರ, ದಯಾನಂದ ರೈ ಮನವಳಿಕೆ, ಪ್ರಶಾಂತ ಆರ್.ಕೆ ಕಾಜರುಕ್ಕು, ರಘುರಾಮ ಕೆ ನವಕೇವಳ, ರಮೇಶ ಯು ಉಪ್ಪಂಗಳ, ಶೇಖರ ಗೌಡ ಹಿರಿಂಜ, ಸುಭಾನು ರೈ ಮರುವಂತಿಲ, ಹಿಂದುಳಿದ ವರ್ಗ ಎ ಮೀಸಲು ಸ್ಥಾನದಿಂದ ಜಯಕರ ಪೂಜಾರಿ ಕಲ್ಲೇರಿ, ವಿಜಯ ಎಸ್ ಅಂಬಾ, ಹಿಂದುಳಿದ ವರ್ಗ ಬಿ ಮೀಸಲು ಸ್ಥಾನದಿಂದ ದಯಾನಂದ ಎನ್ ಆಲಡ್ಕ,ಪದ್ಮಪ್ಪ ಗೌಡ ಕೆದುಂಬಾಡಿ, ಪರಿಶಿಷ್ಟ ಜಾತಿ ಮೀಸಲು ಸ್ಥಾನದಿಂದ ಕುಂಞ ಮುಗೇರ, ಮಾಧವ ಶಾಂತಿಗುರಿ, ಪರಿಶಿಷ್ಟ ಪಂಗಡ ಮೀಸಲು ಸ್ಥಾನದಿಂದ ಅಶೋಕ ಪೆರಾಬೆ, ನಿರಂಜನ ಎನ್ ಏಣಿತ್ತಡ್ಕ, ಮಹಿಳಾ ಮೀಸಲು ಸ್ಥಾನದಿಂದ ಗಾಯತ್ರಿ ಚಾಮೆತ್ತಡ್ಕ, ಮೇನ್ಸಿ ಸಜನ್ ಆಗತ್ತಾಡಿ, ರತ್ನಾ ಬಿ.ಕೆ ಕೊಂಡಾಡಿಕೊಪ್ಪ, ಸುಂದರಿ ಬರೆಂಬಾಡಿ,ಸಾಲಗಾರರಲ್ಲದ ಕ್ಷೇತ್ರದಲ್ಲಿ ಲೋಕೇಶ ಕಮ್ಮಿತ್ತಿಲು, ಸುದೀಶ ಪಟ್ಟೆ ಯವರು ಅಂತಿಮ ಕಣದಲ್ಲಿ ಇದ್ದಾರೆ.

ನಾಮಪತ್ರ ವಾಪಸ್ಸು ಪಡೆದವರು ಸಾಮಾನ್ಯ ಸ್ಥಾನದಿಂದ ಸುಬ್ರಹ್ಮಣ್ಯ ಭಟ್ ಬರೆಂಪಾಡಿ, ಮೈಕಲ್ ಒ.ಜೆ,ಪ್ರಕಾಶ್ ಕೆ.ಆರ್, ಮುರಳೀದರ ಬಿ, ನೀರಜ್ ಕುಮಾರ್ ಎ, ವಿಜಯ ಕುಮಾರ್ ಕೆದಿಲ, ರಾಧಾಕೃಷ್ಣ ರೈ ಪರಾರಿ, ತೋಮಸ್ ವಿ.ಎಮ್, ಹಮೀದ್ ಪಿ.ಎ ಗುರುರಾಜ್ ಕೇವಳ, ಮಹೇಶ ಪಿ, ರಮೇಶ ಎನ್.ಸಿ ತಾವೂರು, ಜನಾರ್ಧನಾ ಗೌಡ ಕಯ್ಯಪೆ, ಹರೀಶ ಗೌಡ ಎಂತಡ್ಕ, ಮಹಿಳಾ ಮೀಸಲು ಸ್ಥಾನದಿಂದ ಪ್ರೇಮ ಇಡಾಲ, ಹಿಂದುಳಿದ ವರ್ಗ ಬಿ.ಯಿಂದ ಪದ್ಮನಾಭ ಗೌಡ ಆಲಡ್ಕ, ಹಿಂದುಳಿದ ವರ್ಗ ಎ ಸ್ಥಾನದಿಂದ ಆಬೂಬಕ್ಕರ್ ನೆಕ್ಕರೆ, ಹಿಂದುಳಿದ ವರ್ಗ ಬಿ ಸ್ಥಾನದಿಂದ ಗುರುಪ್ರಸಾದ್ ಕೆ, ಆಲೆಕ್ಕಿ, ಸಾಲಗಾರರಲ್ಲದಕ್ಷೇತ್ರ ಶೀನ ಮೂಳೆತಮಜಲು, ಮಹಿಳಾ ಮೀಸಲು ಸ್ಥಾನದಿಂದ ನೂಜಿ ಸೇಲಿಕಾತ್ ರವರು ನಾಮಪತ್ರ ವಾಪಸ್ಸು ಪಡೆದಿದ್ದು, ಅಂತಿಮವಾಗಿ ಮಾ.2 ರಂದು ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮುಂದಿನ 5 ವರ್ಷದ ಅಡಳಿತ ಮಂಡಳಿಗೆ ಚುನಾವಣೆ ನಡೆಯಲಿದೆ ಎಂದು ಚುನಾವಣಾ ಅಧಿಕಾರಿ ಶಿವಲಿಂಗಯ್ಯ ರವರು ತಿಳಿಸಿದ್ದಾರೆ.