ಪುತ್ತೂರು: ಕೆದಿಲ ಗ್ರಾಮದ ಲಕ್ಷ್ಮೀ ವಿಶ್ವನಾಥ ಮಡಿವಾಳ ಕುಕ್ಕಾಜೆ ಮತ್ತು ಕುಸುಮಾವತಿ ಚೆನ್ನಪ್ಪ ಗೌಡ ಮುದ್ರಾಜೆ ಇವರುಗಳು ಅಸೌಖ್ಯದಿಂದಿದ್ದು ಇವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಕ್ರಿಟಿಕಲ್ ಇನ್ಲೆಸ್ ಫಂಡ್ ಅನ್ನು ಫೆ.24 ರಂದು ವಿಟ್ಲ ತಾಲೂಕು ಕೃಷಿ ಅಧಿಕಾರಿ ಚಿದಾನಂದ ಮತ್ತು ಪೆರ್ನೆ ವಲಯ ಮೇಲ್ವಿಚಾರಕರಾದ ಶಾರದಾರವರು ವಿತರಿಸಿದರು. ಈ ಸಂದರ್ಭದಲ್ಲಿ ಕೆದಿಲ ಎ ಒಕ್ಕೂಟದ ಸೇವಾಪ್ರತಿನಿಧಿ ಶಾರದಾ ಮತ್ತು ಬಿ ಒಕ್ಕೂಟದ ಸೇವಾಪ್ರತಿನಿಧಿಜಯಂತಿ, ಪೆರ್ನೆ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸದಸ್ಯರಾದ ಕೆದಿಲದ ಜಗದೀಶ, ವೆಂಕಪ್ಪ, ಶೀನಪ್ಪ, ಗಿರೀಶರವರು ಉಪಸ್ಥಿತರಿದ್ದರು.