





ಪುತ್ತೂರು: ದಕ್ಷಿಣ ಕನ್ನಡ ಹಾಗೂ ಕೊಡಗು ಜಿಲ್ಲೆಯ ಗೌಡ ಸಮಾಜದ ಆಶ್ರಯದಲ್ಲಿ ಗೌಡ ಸಮಾಜ ಬಾಂಧವರ ’ಸ್ನೇಹಸಮ್ಮಿಲನ-2025’ ಕಾರ್ಯಕ್ರಮ ನ.16ರಂದು ದುಬೈಯ ಆಶೀಯಾನ ಫಾರ್ಮ್ ಹೌಸ್ ಸಭಾಂಗಣದಲ್ಲಿ ಜರಗಿತು.


ಬೆಳಿಗ್ಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ದೇಶ ಹಾಗೂ ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ ಮಕ್ಕಳಿಗೆ ಹಾಗೂ ಉದ್ಯಮಿಗಳಿಗೆ ಸನ್ಮಾನ ಮಾಡಿ ಗೌರವಿಸಲಾಯಿತು. ಮಧ್ಯಾಹ್ನ ಭೋಜನ ನಂತರ ಗೌಡ ಸಮಾಜದ ಸದಸ್ಯರಿಗೆ ವಾಲಿಬಾಲ್ ಹಾಗೂ ತ್ರೋಬಾಲ್ ಪಂದ್ಯಾಟ ನಡೆಯಿತು. ಸಮ್ಮೇಳನದ ಮುಖ್ಯ ಆಯೋಜಕರಾಗಿ ಹರೀಶ್ ಕೋಡಿ, ಸುರೇಶ್ ಕುಂಪಲ, ಸುನಿಲ್ ಮೊಟ್ಟೆಮನೆ, ತೇಜ ಕುಮಾರ್ ಕೊರಂಬಡ್ಕ, ಮೋಹನ್ ಕಡಂಬಳ, ದಿಲೀಪ್ ಉಳುವಾರ, ಶರತ್ ಚೋಕ್ಕಾಡಿ, ರೋಶನ್ ಕಂಪ, ಸುಪ್ರೀತ್ ಕುಂಡಡ್ಕ, ಜೀವನ್ ಗೌಡ ಕುಂಜತಾಡಿ, ಯತೀಶ್ ಗೌಡ, ರತೀಶ್ ಬಗ್ಗನ ಮನೆ, ಆಶೀಶ್ ಕೋಡಿ, ಮೀನಾ ಹರೀಶ್ ಕೋಡಿ, ಪುಲೋಮ ಮಹೇಂದ್ರ ಕೊಳಂಬೆ ಹಾಗೂ ಇತರ ಸದಸ್ಯರು ಸಹಕರಿಸಿದರು.






ಯುಎಇಯ ವಿವಿಧ ಎಮಿರೇಟ್ನಲ್ಲಿ ನೆಲೆಸಿರುವ 300ಕ್ಕೂ ಹೆಚ್ಚು ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಗೌಡ ಬಾಂಧವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸಮಾರಂಭದ ಅಧ್ಯಕ್ಷತೆಯನ್ನು ಹೊದ್ದೆಟ್ಟಿ ರಾಮಚಂದ್ರ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಮುಕ್ಕಾಟಿ ಕಿಶೋರ್ ಭಾಗವಹಿಸಿದ್ದರು. ಕಾರ್ಯಕ್ರಮದ ನಿರ್ವಹಣೆಯನ್ನು ನಿತಿನ್ ಧೋರ್ತೋಡಿ ಮಾರ್ಗದರ್ಶನದಲ್ಲಿ ಶ್ರಾವ್ಯ ಗೌಡ ಹಾಗೂ ರಕ್ಷಿತಾ ಸುಪ್ರೀತ್ ನೆರವೇರಿಸಿದರು.









