ಕಡಬ: ಸರಕಾರಿ ನೌಕರರ ಸಂಘ ಕಡಬ ತಾಲೂಕು ಸಮಿತಿಯ ಪದಾಧಿಕಾರಿಗಳ ಪದಗ್ರಹಣ ಮತ್ತು ಆರೋಗ್ಯ ತಪಾಸಣಾ ಶಿಬಿರ ಕಡಬ ಮೆಡಿಕಲ್ ಹೆಲ್ತ್ ಸೆಂಟರ್ ನಲ್ಲಿ ನಡೆಯಿತು.

ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ನವೀನಕುಮಾರ್‌ರವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕಡಬ ತಾಲೂಕು ಸರಕಾರಿ ನೌಕರರ ಸಂಘದ ಕಾರ್ಯದರ್ಶಿಯಾಗಿ ನೇಮಕಗೊಂಡು ಪದಗ್ರಹಣವಾಗುವ ಮೊದಲೇ ಅಕಾಲಿಕ ಮರಣ ಹೊಂದಿದ ದಿ. ಪ್ರದೀಪ್ ಬಾಕಿಲ ರವರ ಸ್ಮರಣಾರ್ಥ ಸರಕಾರಿ ನೌಕರರಿಗೆ ಆರೋಗ್ಯ ತಪಾಸಣಾ ಕಾರ್ಯಕ್ರಮ ನಡೆಯುತ್ತಿರುವುದು ಶ್ಲಾಘನಿಯ ಎಂದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲತೇಶ್‌ರವರು ಮಾತನಾಡಿ, ಪ್ರದೀಪ್ ರವರ ಬದುಕು ನಮಗೆಲ್ಲ ಮಾದರಿ ಎಂದು ಹೇಳಿದರು. ಜಿಲ್ಲಾ ರಾಜ್ಯ ಪರಿಷತ್ ಸದಸ್ಯರಾದ ಅಂಬರೀಶ್ ಹಾಗೂ ಕಡಬ ಮೆಡಿಕಲ್ ಹೆಲ್ತ್ ಸೆಂಟರ್‌ನ ಮುಖ್ಯಸ್ಥರಾದ ಲಿನ್ಸಿ ಹಾಗೂ ವೈದ್ಯಧಿಕಾರಿ ಡಾ.ರಕ್ಷಿತ್, ಕಡಬ ತಾಲೂಕು ಸರಕಾರಿ ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯರಾದ ಯಸರಾಜ್, ಪ್ರಕಾಶ್ ಬಾಕಿಲ ಅವರುಗಳು ವೇದಿಕೆಯಲ್ಲಿದ್ದರು. ಕಡಬ ತಾಲೂಕ್ ಸರಕಾರಿ ನೌಕರರ ಸಂಘದ ಅಧ್ಯಕ್ಷ ವಿಮಲ್ ನೆಲ್ಯಾಡಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಡಬ ತಾಲೂಕು ಸರಕಾರಿ ನೌಕರರ ಸಂಘ ಪ್ರದೀಪ್‌ರವರ ಸ್ಮರಣಾರ್ಥ ಒಂದು ವಾರಗಳ ಕಾಲ ಎಲ್ಲಾ ಇಲಾಖೆಯ ನೌಕರ ಬಂಧುಗಳಿಗೆ ಆರೋಗ್ಯ ತಪಾಷಣೆ ನಡೆಯುತ್ತಿದೆ ಇದರ ಪ್ರಯೋಜನ ಎಲ್ಲಾ ನೌಕರರು ಪಡೆದುಕೊಳ್ಳಬೇಕು ಎಂದು ಹೇಳಿದರು. ಈ ಸಂದರ್ಭದಲ್ಲಿ ಜಿಲ್ಲಾ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು. ರಾಜ್ಯ ಪರಿಷತ್ ಸದಸ್ಯರಾದ ಯಶ್ ರಾಜ್ ಸ್ವಾಗತಿಸಿ, ಸಂಘದ ಉಪಾಧ್ಯಕ್ಷೆ ಶ್ರೀಲತಾ ವಂದಿಸಿದರು. ತಾಲೂಕು ಸಂಘದ ಕಾರ್ಯದರ್ಶಿ ಗೋವಿಂದನಾಯಕ್ ರವರು ಕಾರ್ಯಕ್ರಮ ನಿರೂಪಿಸಿದರು.
ಸಮಾರೋಪ ಸಮಾರಂಭ
ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಕಡಬ ತಾಲೂಕು ಶಾಖೆ ಇದರ ವತಿಯಿಂದ ದಿ ಪ್ರದೀಪ್ ಬಾಕಿಲ ಅವರ ಸ್ಮರಣಾರ್ಥ ನಡೆದ ಫೆ.16ರಿಂದ ಫೆ.23ರವರೆಗೆ ನಡೆದ ಸರಕಾರಿ ನೌಕರರಿಗೆ ಅರೋಗ್ಯ ತಪಾಸಣೆ ಕಾರ್ಯಕ್ರಮ ಫೆ.23ರಂದು ಮುಕ್ತಾಯಗೊಂಡಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸರಕಾರಿ ನೌಕರರ ಸಂಘದ ಕಡಬ ತಾಲೂಕು ಅಧ್ಯಕ್ಷ ವಿಮಲ್ ನೆಲ್ಯಾಡಿ ವಹಿಸಿದ್ದರು. ಕಡಬ ಮೆಡಿಕಲ್ ಸೆಂಟರ್‌ನ ಮುಖ್ಯಸ್ಥೆ ಲಿನ್ಸಿ ಹಾಗೂ ಸಂಘದ ಉಪಾಧ್ಯಕ್ಷರು ಯೋಗೀಶ್, ಪ್ರದೀಪ್ ಬಾಕಿಲ ರವರ ಪತ್ನಿ ಹೇಮಲತಾ ಪ್ರದೀಪ್, ಕಾರ್ಯದರ್ಶಿ ಗೋವಿಂದನಾಯ್ಕ್ ವೇದಿಕೆಯಲ್ಲಿದ್ದರು. ಸಹಕಾರ ನೀಡಿದ ಲಿನ್ಸಿ, ಶೈಲಾ, ಪರಹಾನ್, ಕವಿತ, ನಶಿಬ, ದಿಸ್ವಿತಾ ಇವರನ್ನು ಸಂಘದ ಪರವಾಗಿ ಸನ್ಮಾನ ಮಾಡಲಾಯಿತು. ಉಪಾಧ್ಯಕ್ಷ ಯೋಗೀಶ್ ಸ್ವಾಗತಿಸಿ, ಸಂಘದ ಕ್ರೀಡಾ ಕಾರ್ಯದರ್ಶಿ ಕುಶಾಲಪ್ಪ ವಂದಿಸಿದರು. ಸಂಘದ ಕಾಯದರ್ಶಿ ಗೋವಿಂದನಾಯ್ಕ್ ಕಾರ್ಯಕ್ರಮ ನಿರೂಪಿಸಿದರು.