ಉಪ್ಪಿನಂಗಡಿ: ಅವಿವಾಹಿತ ಯುವಕನ ಮೃತದೇಹ ಕೆರೆಯಲ್ಲಿ ಪತ್ತೆಯಾದ ಘಟನೆ ಪೆರಿಯಡ್ಕ ಸಮೀಪದ ಕಿಂಡೋವು ಎಂಬಲ್ಲಿ ನಡೆದಿದೆ. ಕೆರೆಗೆ ಹಾರಿ ಈತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಶಂಕಿಸಲಾಗಿದೆ.
ಕಿಂಡೋವು ದರ್ಖಾಸ್ ಮನೆ ನಿವಾಸಿ ಜಿನ್ನಪ್ಪ ಗೌಡರ ಪುತ್ರ ಶ್ರೀನಿವಾಸ (28) ಮೃತ ಯುವಕ.
ಮೇಸ್ತ್ರೀ ಕೆಲಸಕ್ಕೆ ಹೋಗುತ್ತಿದ್ದ ಶ್ರೀನಿವಾಸ ಕೆಲದಿನಗಳಿಂದ ಕೆಲಸಕ್ಕೆ ಹೋಗದೇ ಮನೆಯಲ್ಲಿದ್ದು ಸೋಮವಾರ ಸಂಜೆಯಿಂದ ನಾಪತ್ತೆಯಾಗಿದ್ದರು. ಮಂಗಳವಾರ ಬೆಳಗ್ಗೆ ತೋಟದ ಕೆರೆಯಲ್ಲಿ ಮೃತದೇಹ ಪತ್ತೆಯಾಗಿದೆ. ಉಪ್ಪಿನಂಗಡಿ ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸಿದ್ದಾರೆ.
ಮೃತರು ತಂದೆ ತಾಯಿ, ಸಹೋದರಿ ಹಾಗೂ ಸಹೋದರನನ್ನು ಅಗಲಿದ್ದಾರೆ.