ಅಧ್ಯಕ್ಷರಾಗಿ ಕೊಗ್ಗು ಮಣಿಯಾಣಿ ಮುಂಡೂರು, ಕಾರ್ಯದರ್ಶಿ ಗಿರೀಶ್ ಕುಲಾಲ್ ಗುರಿ, ಕೋಶಾಧಿಕಾರಿ ಅಶ್ವಥ ಪೂಜಾರಿ ಕರ್ನಪ್ಪಾಡಿ.
ನಿಡ್ಪಳ್ಳಿ; ಶ್ರೀ ಗೋಪಾಲಕೃಷ್ಣ ಭಜನಾ ಮಂದಿರ ಮಂದಾರಗಿರಿ ನಿಡ್ಪಳ್ಳಿ ಇದರ ನೂತನ ಅಧ್ಯಕ್ಷರಾಗಿ ಕೊಗ್ಗು ಮಣಿಯಾಣಿ ಮುಂಡೂರು, ಕಾರ್ಯದರ್ಶಿಯಾಗಿ ಗಿರೀಶ್ ಕುಲಾಲ್ ಗುರಿ ಹಾಗೂ ಕೋಶಾಧಿಕಾರಿಯಾಗಿ ಅಶ್ವಥ ಪೂಜಾರಿ ಕರ್ನಪ್ಪಾಡಿ ಇವರು ಆಯ್ಕೆಯಾದರು.
ಜತೆ ಕಾರ್ಯದರ್ಶಿಯಾಗಿ ಸುರೇಶ್ ಕಾನ, ಸದಸ್ಯರುಗಳಾಗಿ ರಮೇಶ್ ಪೂಜಾರಿ ಕರ್ನಪ್ಪಾಡಿ, ಕೊಗ್ಗು ಮಣಿಯಾಣಿ ಗೋಳಿತ್ತಡಿ, ಬಾಲಕೃಷ್ಣ ದೇವಸ್ಯ, ದಯಾನಂದ ಕುಲಾಲ್ ಮಾರ್ಲಕುಮೇರು, ಸಂತೋಷ ಕುಮಾರ್ ತಂಬುತ್ತಡ್ಕ, ಶೀನಪ್ಪ ಪೂಜಾರಿ ದೇವಸ್ಯ, ಸಂತೋಷ ಕುಮಾರ್ ಕುಕ್ಕುಪುಣಿ,ಸಂತೋಷ ಕುಮಾರ್ ಕರ್ನಪ್ಪಾಡಿ, ರಾಮಚಂದ್ರ ಮಣಿಯಾಣಿ ಗೋಳಿತ್ತಡಿ ಇವರನ್ನು ಆರಿಸಲಾಯಿತು.
ಫೆ.16 ರಂದು ನಡೆದ ವಾರ್ಷಿಕ ಮಹಾಸಭೆಯಲ್ಲಿ ಮುಂದಿನ ಮೂರು ವರ್ಷದ ಅವಧಿಗೆ ಈ ನೂತನ ಸಮಿತಿಯನ್ನು ರಚಿಸಲಾಯಿತು.