ಪುತ್ತೂರು: ಸವಣೂರು ವಿದ್ಯಾರಶ್ಮಿ ವಿದ್ಯಾಲಯದಲ್ಲಿ ಫೆ.28ರಂದು ’ರಾಷ್ಟ್ರೀಯ ವಿಜ್ಞಾನ ದಿನಾಚರಣೆ’ಯ ಅಂಗವಾಗಿ ’ವಿಜ್ಞಾನ ರಶ್ಮಿ’ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿದ ಪುತ್ತೂರು ವಿವೇಕಾನಂದ ಪದವಿಪೂರ್ವ ಕಾಲೇಜಿನ ಭೌತಶಾಸ್ತ್ರ ವಿಭಾಗದ ಉಪನ್ಯಾಸಕ ಹರೀಶ್ ಶಾಸ್ತ್ರಿ ಇವರು ಮಾನವನ ಮತ್ತು ವಿಜ್ಞಾನದ ನಡುವಿನ ಸಂಬಂಧ ದಿನನಿತ್ಯ ಜೀವನದಲ್ಲಿ ವಿಜ್ಞಾನದ ಪ್ರಾಮುಖ್ಯತೆ, ಗಣಿತದ ಅಗತ್ಯತೆಯ ಬಗ್ಗೆ ಪ್ರಾಯೋಗಿಕವಾಗಿ ವಿವರಿಸಿದರು. ಕಾರ್ಯಕ್ರಮದ ಅಧ್ಯಕ್ಷ ಸಂಸ್ಥೆಯ ಆಡಳಿತಾಧಿಕಾರಿ ಅಶ್ವಿನ್ ಎಲ್ ಶೆಟ್ಟಿ ಅವರು ವಿಜ್ಞಾನವು ಬರೀ ಕಲಿಕೆಯ ವಿಷಯವಾಗದೆ ವಿದ್ಯಾರ್ಥಿಯ ಕ್ರಿಯಾತ್ಮಕ ಅಲೋಚನೆಗಳನ್ನು ಪ್ರಬಲಗೊಳಿಸುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಸೀತಾರಾಮ ಕೇವಳ, ವಿದ್ಯಾರಶ್ಮಿ ವಿದ್ಯಾಲಯದ ಪ್ರಾಂಶುಪಾಲೆ ಶಶಿಕಲಾ ಎಸ್ ಆಳ್ವ, ತಾಂತ್ರಿಕ ತರಬೇತುರಾದರಾದ ಕು. ಶ್ರಾವ್ಯ, ವಿಜ್ಞಾನ ಶಿಕ್ಷಕಿ ಲಿಖಿತ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ 8ನೇ ತರಗತಿಯ ಶಂತನುಕೃಷ್ಣ ಮತ್ತು ಜಶ್ವಿತ್ ಪ್ರಾರ್ಥಿಸಿ, 7ನೇತರಗತಿಯ ಮಹಮ್ಮದ್ ಶಯಾನ್ ಸಂವಿಧಾನದ ಪೀಠಿಕೆ ವಾಚಿಸಿದರು, 8ನೇ ತರಗತಿಯ ಲಿಬಾಫಾತಿಮ ಸ್ವಾಗತಿಸಿ, 9ನೇ ತರಗತಿಯ ಸಜಾ ವಂದಿಸಿದರು. ಆಯಿಷತ್ ಜಸ್ನ ಕಾರ್ಯಕ್ರಮ ನಿರೂಪಿಸಿದರು.