





ಪುತ್ತೂರು: ಎಪಿಎಂಸಿ ರಸ್ತೆಯ ಸಾಲ್ಮರದಲ್ಲಿರುವ ಕಾರಣಿಕ ಕ್ಷೇತ್ರ ಶ್ರೀ ಮಹಿಷಮರ್ಧಿನಿ ದುರ್ಗಾಚಾಮುಂಡೇಶ್ವರಿ ಕ್ಷೇತ್ರದಲ್ಲಿ ವರ್ಷಾವಧಿ ಉತ್ಸವ, ದೈವಗಳ ನೇಮೋತ್ಸವ ಹಾಗೂ ಸತ್ಯನಾರಾಯಣ ಪೂಜೆ ಮಾ.1ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಬೆಳಿಗ್ಗೆ ಶ್ರೀ ಸತ್ಯನಾರಾಯಣ ಪೂಜೆ, ಮಧ್ಯಾಹ್ನ ಮಹಾಪೂಜೆ, ದರ್ಶಬ ಬಲಿ, ಪ್ರಸಾದ ವಿತರಣೆ ನಡೆದು ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ಮಹಾ ಮಂಗಳಾರತಿ ನಡೆದು ದೈವಗಳ ಭಂಡಾರ ತೆಗೆದು ಸಾರ್ವಜನಿಕ ಅನ್ನಸಂತರ್ಪಣೆ, ಬಳಿಕ ಕ್ಷೇತ್ರದ ದೈವಗಳಾದ ರುದ್ರಚಾಮುಂಡಿ, ಚಾಮುಂಡಿ, ಗುಳಿಗ, ಮಹಾಕಾಳಿ ಹಾಗೂ ಕಲ್ಲುರ್ಟಿ ದೈವಗಳ ನೇಮ ನಡೆಯಲಿದೆ ಎಂದು ಧರ್ಮದರ್ಶಿ ತನಿಯ ತಿಳಿಸಿದ್ದಾರೆ.










