ಇಂದಿನ ಕಾರ್ಯಕ್ರಮ(01/03/2025)

0

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಎದುರಿನ ದೇವಮಾರು ಗದ್ದೆಯಲ್ಲಿ ಬೆಳಿಗ್ಗೆ ೧೦.೧೫ಕ್ಕೆ ೩೨ನೇ ವರ್ಷದ ಹೊನಲು ಬೆಳಕಿನ ಪುತ್ತೂರು ಕೋಟಿ-ಚೆನ್ನಯ ಜೋಡು ಕರೆ ಕಂಬಳದ ಉದ್ಘಾಟನೆ, ಮಧ್ಯಾಹ್ನ ೧೨ಕ್ಕೆ ರಾಜ್ಯಮಟ್ಟದ ಕೆಸರುಗದ್ದೆ ಓಟದ ಸ್ಪರ್ಧೆಯ ಉದ್ಘಾಟನೆ, ಸಂಜೆ ೬ರಿಂದ ಸಭಾ ಕಾರ್ಯಕ್ರಮ
ಕೊಂಬೆಟ್ಟು ಎಂ. ಸುಂದರರಾಮ್ ಶೆಟ್ಟಿ ಸ್ಮಾರಕ ಬಂಟರ ಭವನದಲ್ಲಿ ಪುತ್ತೂರು ಉಪವಿಭಾಗದ ಸಹಕಾರಿ ಬಂಧುಗಳ ವತಿಯಿಂದ ಬೆಳಿಗ್ಗೆ ೧೦.೩೦ರಿಂದ ನ್ಯಾಷನಲ್ ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ ಎಸ್‌ಸಿಆರ್ ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆಗೊಂಡಿರುವ ಸಹಕಾರ ರತ್ನ ಡಾ| ಎಂ. ಎನ್. ರಾಜೇಂದ್ರಕುಮಾರ್, ದ.ಕ. ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷರಾಗಿ ಆಯ್ಕೆಗೊಂಡಿರುವ ಶಶಿಕುಮಾರ್ ರೈ ಬಾಲ್ಯೊಟ್ಟುರವರಿಗೆ ಅಭಿವಂದನಾ ಕಾರ್ಯಕ್ರಮ
ಪುತ್ತೂರು ತಾಲೂಕು ಮಿನಿ ವಿಧಾನ ಸೌಧದ ಮುಂಭಾಗದಲ್ಲಿ ಬೆಳಿಗ್ಗೆ ೧೦ರಿಂದ ದ.ಕ. ಜಿಲ್ಲಾ ಮುಸ್ಲಿಂ ಯುವಜನ ಪರಿಷತ್ತು, ಪುತ್ತೂರು ತಾಲೂಕು ಮುಸ್ಲಿಂ ಒಕ್ಕೂಟದಿಂದ ವಕ್ಫ್ ತಿದ್ದುಪಡಿ ಮಸೂದೆ ವಿರುದ್ಧ ಪ್ರತಿಭಟನೆ
ಪುತ್ತೂರು ದರ್ಬೆ ಸಂತ ಫಿಲೋಮಿನಾ ಕಾಲೇಜು(ಸ್ವಾಯತ್ತ) ಸಿಲ್ವರ್ ಜ್ಯುಬಿಲಿ ಮೆಮೋರಿಯಲ್ ಹಾಲ್‌ನಲ್ಲಿ ಬೆಳಿಗ್ಗೆ ೧೦ರಿಂದ ಐಎಎಸ್, ಕೆಎಎಸ್ ಮತ್ತಿತರ ಸ್ಪರ್ಧಾತ್ಮಕ ಪರೀಕ್ಷೆಯ ಉಚಿತ ತರಬೇತಿ
ಸಾಲ್ಮರ ಎ.ಪಿ.ಎಂ.ಸಿ ರಸ್ತೆ ಶ್ರೀ ಮಹಿಷಮರ್ಧಿನಿ ದುರ್ಗಾಚಾಮುಂಡೇಶ್ವರಿ ದೇವಸ್ಥಾನದಲ್ಲಿ ಬೆಳಿಗ್ಗೆ ೯ಕ್ಕೆ ಶ್ರೀ ಸತ್ಯನಾರಾಯಣ ಪೂಜೆ, ಮಧ್ಯಾಹ್ನ ೧೨ಕ್ಕೆ ಮಹಾಪೂಜೆ, ದರ್ಶನ ಬಲಿ, ಅನ್ನಸಂತರ್ಪಣೆ, ರಾತ್ರಿ ೮ಕ್ಕೆ ಬಲಿ ಉತ್ಸವ, ೯ಕ್ಕೆ ರುದ್ರಚಾಮುಂಡಿ, ಚಾಮುಂಡಿಗುಳಿಗ ದೈವಗಳ ನೇಮ, ೧ಕ್ಕೆ ಶ್ರೀ ಮಹಾಕಾಳಿ, ಕಲ್ಲುರ್ಟಿ ದೈವಗಳ ನೇಮೋತ್ಸವ
ಈಶ್ವರಮಂಗಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಬೆಳಿಗ್ಗೆ ೯ಕ್ಕೆ ಮಹಾದರ್ಶನಬಲಿ, ಬಟ್ಟಲು ಕಾಣಿಕೆ, ಮಧ್ಯಾಹ್ನ ೧ಕ್ಕೆ ಅನ್ನಸಂರ್ತಣೆ, ೧.೩೦ಕ್ಕೆ ಯಕ್ಷಗಾನ ತಾಳಮದ್ದಳೆ-ಇಂದ್ರಜಿತು, ಸಂಜೆ ೬.೩೦ರಿಂದ ಶ್ರೀ ದೇವರ ಸವಾರಿ, ಕಟ್ಟೆಪೂಜೆ, ಶಯನೋತ್ಸವ, ರಾತ್ರಿ ೯ರಿಂದ ಪಿರಬನ್ನಗ ತುಳು ನಾಟಕ
ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಸ್ಥಾನದಲ್ಲಿ ರಾತ್ರಿ ೬ರಿಂದ ಉಬಾರ್ ಉತ್ಸವ
ನರಿಮೊಗರು ಗ್ರಾಮದ ಮುಗೇರಡ್ಕ ಪೊಸಮೆನ್ಪದವು ಶ್ರೀ ಕಲ್ಕುಡ-ಕಲ್ಲುರ್ಟಿ ದೈವಸ್ಥಾನದಲ್ಲಿ ಬೆಳಿಗ್ಗೆ ೭ರಿಂದ ಗಣಹೋಮ, ೮ಕ್ಕೆ ನಾಗತಂಬಿಲ, ಪರಿವಾರ ದೈವಗಳಿಗೆ ತಂಬಿಲ, ೧೦.೩೦ರಿಂದ ಶ್ರೀ ಸತ್ಯನಾರಾಯಣ ಪೂಜೆ, ಮಧ್ಯಾಹ್ನ ೧ರಿಂದ ಅನ್ನಸಂತರ್ಪಣೆ, ಸಂಜೆ ೬.೩೦ರಿಂದ ಕಲ್ಕುಡ, ಕಲ್ಲುರ್ಟಿ ದೈವಗಳ ನೇಮೋತ್ಸವ, ರಾತ್ರಿ ೧೦ರಿಂದ ಮಾರ್ನೆಮಿ-ತುಳು ನಾಟಕ
ಕುಕ್ಕಿನಡ್ಕ ಸುಬ್ರಾಯ ದೇವಸ್ಥಾನದಲ್ಲಿ ಬೆಳಿಗ್ಗೆ ೧೦ಕ್ಕೆ ಜಾತ್ರೋತ್ಸವದ ಗೊನೆ ಕಡಿಯುವುದು
ಕಾಣಿಯೂರು ಶ್ರೀ ಜಗದ್ಗುರು ಶ್ರೀ ಮನ್ಮಧ್ವಾಚಾರ್ಯ ಮೂಲ ಮಹಾಸಂಸ್ಥಾನಮ್ ಉಡುಪಿ, ಶ್ರೀ ಕಾಣಿಯೂರು ಮಠದಲ್ಲಿ ಬೆಳಿಗ್ಗೆ ೭ರಿಂದ ಮಾಡದಲ್ಲಿ ಹಸಿರು ಕಾಣಿಕೆ ಸಮರ್ಪಣೆ, ವಿಶೇಷ ಪೂಜೆ, ನವಕ ಕಲಶಾಭಿಷೇಕ, ಶ್ರೀ ಉಳ್ಳಾಕುಲು ದೈವದ ಸನ್ನಿಧಿಯಲ್ಲಿ ಗಣಹೋಮ, ನವಕ ಕಲಶಾಭಿಷೇಕ, ಮಹಾಪೂಜೆ, ರಾತ್ರಿ ೭ರಿಂದ ಜಾತಾ ಗದ್ದೆಯಲ್ಲಿ ನಿರೆಲ್ ತುಳು ನಾಟಕ
ಶಾಂತಿನಗರ ಶ್ರೀ ಸತ್ಯನಾರಾಯಣ ಪೂಜಾ ಮೈದಾನದ ಕಟ್ಟೆಯಲ್ಲಿ ಸಂಜೆ ೬.೦೧ರಿಂದ ಶಾಂತಿನಗರ ಶ್ರೀ ಸತ್ಯನಾರಾಯಣ ಪೂಜಾ ಸಮಿತಿಯಿಂದ ೩೭ನೇ ವರ್ಷದ ಸಾರ್ವಜನಿಕ ಶ್ರೀ ಸತ್ಯನಾರಾಯಣ ವ್ರತ ಪೂಜೆ, ರಾತ್ರಿ ೧೦ರಿಂದ ಸಾಂಸ್ಕೃತಿಕ ಕಾರ್ಯಕ್ರಮ, ನಾಗ ಮಾಣಿಕ ತುಳು ನಾಟಕ
ಆಲಡ್ಕ ಶ್ರೀ ಸದಾಶಿವ ದೇವಸ್ಥಾನದಲ್ಲಿ ಸಂಜೆ ಹಸಿರು ಹೊರೆಕಾಣಿಕೆ ಸಮರ್ಪಣೆ, ಶ್ರೀ ಸತ್ಯನಾರಾಯಣ ಪೂಜೆ, ೬.೩೦ಕ್ಕೆ ರಂಗಪೂಜೆ, ಧಾರ್ಮಿಕ ಸಭೆ, ರಾತ್ರಿ ೧೦ರಿಂದ ಯಕ್ಷಗಾನ ವೈಭವ
ಬಡಗನ್ನೂರು ಶ್ರೀ ಕ್ಷೇತ್ರ ಗೆಜ್ಜೆಗಿರಿ ದೇಯಿ ಬೈದೆತಿ, ಕೋಟಿ ಚೆನ್ನಯ ಮೂಲಸ್ಥಾನದಲ್ಲಿ ಸಂಜೆ ೫.೩೦ರಿಂದ ಸ್ವಸ್ತಿ ಪುಣ್ಯಾಹ ಸ್ಥಳಶುದ್ಧಿ, ಸಾಮೂಹಿಕ ಪ್ರಾರ್ಥನೆ, ಉಗ್ರಾಣ ಮುಹೂರ್ತ, ಅನ್ನಸಂತರ್ಪಣೆ
ಪಡುಮಲೆ ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಪ್ರತಿಷ್ಠಾ ವರ್ಧಂತ್ಯುತ್ಸವ
ಅರಿಯಡ್ಕ ಗ್ರಾಮ ಮಡ್ಯಂಗಳ ಕರ್ಕೇರ ಕುಟುಂಬಸ್ಥರ ತರವಾಡು ಮನೆಯಲ್ಲಿ ಬೆಳಿಗ್ಗೆ ೭ಕ್ಕೆ ಗಣಪತಿ ಹೋಮ, ಶುದ್ಧಿ ಕಲಶ, ನಾಗತಂಬಿಲ, ಶ್ರೀ ಸತ್ಯನಾರಾಯಣ ಪೂಜೆ, ವೆಂಕಟರಮಣ ದೇವರಿಗೆ ಹರಿ ಸೇವೆ, ಮುಡಿಪು ಕಾಣಿಕೆ, ಮಧ್ಯಾಹ್ನ ೧ಕ್ಕೆ ಅನ್ನಸಂತರ್ಪಣೆ, ಸಂಜೆ ೪ಕ್ಕೆ ರಾಹು ಗುಳಿಗನಿಗೆ ತಂಬಿಲ, ರಾತ್ರಿ ೮.೩೦ಕ್ಕೆ ದೈವಗಳ ನೇಮೋತ್ಸವ, ಗುಳಿಗ ದೈವ, ಸತ್ಯದೇವತೆ ಕಲ್ಲುರ್ಟಿ ದೈವ, ಕುಪ್ಪೆ ಪಂಜುರ್ಲಿ ನೇಮ
೩೪ ನೆಕ್ಕಿಲಾಡಿ ಗ್ರಾ.ಪಂ ಸಭಾಂಗಣದಲ್ಲಿ ಬೆಳಿಗ್ಗೆ ೧೦.೩೦ರಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ
ಉಳ್ಳಾಲ ಕುರಿಯ ಶ್ರೀ ಮಹಾ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಬಲಿವಾಡು ಸೇವೆ
ಮುರ ಶಿವಸದನ ಶ್ರೀ ಸುಬ್ರಹ್ಮಣ್ಯ ಸಭಾ ಚಾರಿಟೇಬಲ್ ಟ್ರಸ್ಟ್‌ನಿಂದ ಸಂಜೆ ೪ಕ್ಕೆ ಹಿರಿಯ ನಾಗರಿಕರ, ವಿಶೇಷ ಚೇತನರ ವಸತಿ ನಿಲಯದ ಮೇಲಿನ ಅಂತಸ್ತಿನ ಉದ್ಘಾಟನೆ
ಸವಣೂರು ಗ್ರಾಮ ಆರೇಲ್ತಡಿ ಉಳ್ಳಾಕ್ಲು,ಕೆಡೆಂಜೋಡಿತ್ತಾಯ, ಪರಿವಾರ ದೈವಗಳ ದೈವಸ್ಥಾನದಲ್ಲಿ ಬೆಳಿಗ್ಗೆ ೧೦ಕ್ಕೆ ಜೀರ್ಣೋದ್ಧಾರ ಕಾರ್ಯಗಳ ಪ್ರಯುಕ್ತ ದಾರಂದ ಮುಹೂರ್ತ


ಶುಭಾರಂಭ
ಪುತ್ತೂರು ಕೆಎಸ್‌ಆರ್‌ಟಿಸಿ ಬಸ್‌ಸ್ಟ್ಯಾಂಡ್ ಎ.ಎಂ ಶಾಲಿಮಾರ್ ಕಾಂಪ್ಲೆಕ್ಸ್‌ನ ೨ನೇ ಮಳಿಗೆಯಲ್ಲಿ ಬೆಳಿಗ್ಗೆ ೮.೩೦ಕ್ಕೆ ನ್ಯೂ ಕ್ವೀನ್ಝ್ ಅಬಯ ಫ್ಯಾಷನ್ ಶುಭಾರಂಭ
ಪುತ್ತೂರು ಮೈನ್‌ರೋಡ್ ರೂಬಿ ಟವರ್‍ಸ್‌ನಲ್ಲಿ ಬೆಳಿಗ್ಗೆ ೯ಕ್ಕೆ ನೀಲಮ್ ವೆಡ್ಡಿಂಗ್ ಶೋರೂಂ ಶುಭಾರಂಭ


ಉತ್ತರಕ್ರಿಯೆ
ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದ ನೇತ್ರಾವತಿ ಸಭಾಭವನದಲ್ಲಿ ಮಧ್ಯಾಹ್ನ ಉಬರಡ್ಕ ಮೊಡಪ್ಪಾಡಿಗುತ್ತು ತಿಮ್ಮಪ್ಪ ರೈ ಸೂಂತೋಡುರವರ ಉತ್ತರಕ್ರಿಯೆ

LEAVE A REPLY

Please enter your comment!
Please enter your name here