





ಪುತ್ತೂರು: 2025 ರ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಮೋಹನ್ ರೈ ನರಿಮೊಗರು ಹಾಗೂ ರಂಗಭೂಮಿ ಮತ್ತು ಚಿತ್ರನಟ ಸುಂದರ ರೈ ಮಂದಾರರವರಿಗೆ ಅಭಿನಂದನಾ ಸನ್ಮಾನವು ನ. 8 ರಂದು ಸಿರಿಕಡಮಜಲು ಕೃಷಿ ಕ್ಷೇತ್ರದಲ್ಲಿ ನಡೆಯಲಿದೆ.


ಸಮಾಜ ಸೇವೆ ಕ್ಷೇತ್ರದಲ್ಲಿ ಮೋಹನ್ ರೈಯವರು ಈ ಬಾರಿಯ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಪುರಸ್ಕೃತರಾಗಿ ನ. 1 ರಂದು ನಡೆದ ಜಿಲ್ಲಾ ಮಟ್ಟದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಸ್ವೀಕರಿಸಿದ್ದರು. ಸುಂದರ್ ರೈ ಮಂದಾರರವರು ರಂಗಭೂಮಿಯಲ್ಲಿ ಬಹುಬೇಡಿಕೆಯ ಕಲಾವಿದರಾಗಿ, ತುಳು ಚಿತ್ರ ರಂಗದಲ್ಲಿಯೂ ತಮ್ಮ ವಿಶಿಷ್ಟ ಶೈಲಿಯ ಅಭಿನಯದ ಮೂಲಕ ತುಳು ಪ್ರೇಕ್ಷಕಾಭಿಮಾನಿಗಳ ಮನಸ್ಸು ಗೆದ್ದ ಕಲಾವಿದರಾಗಿದ್ದಾರೆ.





ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರೂ, ಚಿನ್ನದ ಪದಕ ವಿಜೇತ ಕೃಷಿಕರೂ ಆಗಿರುವ ಕಡಮಜಲು ಸುಭಾಸ್ ರೈಯವರ ಅಧ್ಯಕ್ಷತೆಯಲ್ಲಿ ಸಿರಿಕಡಮಜಲು ಕೃಷಿ ಕ್ಷೇತ್ರದಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಇತ್ತೀಚೆಗೆ ವೈವಾಹಿಕ ರಜತ ಸಂಭ್ರಮವನ್ನು ಆಚರಿಸಿಕೊಂಡ ಅಕ್ಷಯ ಗ್ರೂಪ್ ಸಂಸ್ಥೆಗಳ ಚೇರ್ಮ್ಯಾನ್ ಜಯಂತ ನಡುಬೈಲು ದಂಪತಿ ಸನ್ಮಾನ ನೆರವೇರಿಸಲಿದ್ದಾರೆ. ನಿವೃತ್ತ ಪ್ರಾಂಶುಪಾಲರೂ, ಸಾಹಿತಿಗಳೂ ಆಗಿರುವ ಪ್ರೊ. ಬಿ.ವಿ. ಸೂರ್ಯನಾರಾಯಣ ಎಲಿಯವರು ಶುಭಾಶಂಸನೆ ಮಾಡಲಿದ್ದಾರೆ.
ಇದೇ ವೇಳೆ ಇತ್ತೀಚೆಗೆ ಕೃಷಿ ಅಧ್ಯಯನ ನಿಮಿತ್ತ ವಿಯೆಟ್ನಾಂ, ಮಲೇಷ್ಯಾ ಪ್ರವಾಸ ಕೈಗೊಂಡು ಬಂದಿರುವ ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ವಿಜಯ ಕುಮಾರ್ ರೈ ಕೋರಂಗವರು ತಮ್ಮ ವಿದೇಶ ಪ್ರವಾಸದ ಬಗ್ಗೆ ಅನಿಸಿಕೆ ಮತ್ತು ರೈತರೊಡನೆ ಸಂವಾದ ಮಾಡಲಿದ್ದಾರೆ ಎಂದು ಕಡಮಜಲು ಸುಭಾಸ್ ರೈ ರವರು ತಿಳಿಸಿರುತ್ತಾರೆ.









