ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯಿಂದ 9ನೇ ವರ್ಷದ ನರ್ತನಾವರ್ತನ-2025

0

ಹಿರಿಯ ಪತ್ರಿಕಾ ಛಾಯಾಚಿತ್ರಕಾರ ಯಜ್ಞರಿಗೆ ಕಲಾಶ್ರಯ ಪ್ರಶಸ್ತಿ ಪ್ರದಾನ

*ದೀಪಕ್ ಮಾಡುವ ಕಾರ್ಯಕ್ರಮ ಮೇಲ್ಮಟ್ಟದ ಕಲಾಪೂರ್ಣವಾದದು – ಉಳ್ಳಾಲ ಮೋಹನ್ ಕುಮಾರ್
*ನಾಟ್ಯ ಶಾಸ್ತ್ರಕ್ಕೆ ದಾಖಲೀಕರಣಕ್ಕೆ ಸಹಕಾರ – ಡಾ. ಶ್ರೀಪತಿ ಕಲ್ಲೂರಾಯ
*ಯಜ್ಞ ಆಚಾರ್ಯರವರದ್ದು ಸವಾಲೊಡ್ಡುವ ಚಿತ್ರಗಳು – ವಿದ್ವಾನ್ ಬಿ ದೀಪಕ್ ಕುಮಾರ್

ಪುತ್ತೂರು: ಕಲಾ ಕ್ಷೇತ್ರಕ್ಕೆ ಹಲವು ಕೊಡುಗೆಗಳನ್ನು ನೀಡಿದ ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯಿಂದ ಸಾಂಸ್ಕೃತಿಕ ಸಚಿವಾಲಯದ ಸಹಕಾರದೊಂದಿಗೆ 9ನೇ ವರ್ಷದ ‘ನರ್ತನಾವರ್ತನಾ-2025’ ಮಾ.2ರಂದು ಸಂಜೆ ಬಪ್ಪಳಿಗೆ ಜೈನ ಭವನದಲ್ಲಿ ನಡೆಯಿತು.



ಅಂತರಾಷ್ಟ್ರೀಯ ಖ್ಯಾತಿಯ ಮತ್ತು ಕಲಾಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿರುವ ಕೇರಳ ಗುರುವಾಯುರು ಮೂಲದ ಮುಂಬೈಯ ಮೀರಾ ಶ್ರೀನಾರಾಯಣನ್ ಅವರಿಂದ ಭರತನಾಟ್ಯ ಪ್ರಸ್ತುತಿ ಪ್ರದರ್ಶನಗೊಂಡಿತು. ಪ್ರತಿ ವರ್ಷದಂತೆ ಕಲಾಕ್ಷೇತ್ರದಲ್ಲಿ ಸಾಧನೆ ಮಾಡಿರುವ ಯಶಸ್ವಿ ಛಾಯಾಚಿತ್ರಕಾರ ಯಜ್ಞ ಆಚಾರ್ಯ ಅವರಿಗೆ ಕಲಾಶ್ರಯ ಪ್ರಶಸ್ತಿ ಪ್ರದಾನ ನಡೆಯಿತು.



ದೀಪಕ್ ಮಾಡುವ ಕಾರ್ಯಕ್ರಮ ಮೇಲ್ಮಟ್ಟದ ಕಲಾಪೂರ್ಣವಾದದು:
ಶಾಂತಲಾ ನಾಟ್ಯ ಪ್ರಶಸ್ತಿ ಪುರಸ್ಕೃತ ನೃತ್ಯಗುರು ಉಳ್ಳಾಲ ಮೋಹನ್ ಕುಮಾರ್ ಅವರು ದೀಪ ಪ್ರಜ್ವಲಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನಿನ್ನೆ ಆರೋಗ್ಯದಲ್ಲಿ ತೊಂದರೆ ಆಗಿತ್ತು. ಆದರೆ ನನ್ನ ನೆಚ್ಚಿನ ಆತ್ಮೀಯ ಶಿಷ್ಯನ ಕಾರ್ಯಕ್ರಮದಲ್ಲಿ ಭಾಗವಹಿಸಲೇಬೇಕೆಂದು ಬಂದಿದ್ದೇನೆ. ಯಾಕೆಂದರೆ ದೀಪಕ್ ಮಾಡುವ ಎಲ್ಲಾ ಕಾರ್ಯಕ್ರಮಗಳಿಗೆ ವ್ಯವಸ್ಥಿತ ರೂಪ ಇರುತ್ತದೆ. ಇದೊಂದು ಮೇಲ್ಮಟ್ಟದ ಕಲಾಪುರ್ಣವಾದ ಕಾರ್ಯಕ್ರಮವಾಗಿದೆ ಎಂದರು.



ನಾಟ್ಯ ಶಾಸ್ತ್ರಕ್ಕೆ ದಾಖಲಿಕರಣಕ್ಕೆ ಸಹಕಾರ:
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ವಿವೇಕಾನಂದ ಮಹಾವಿದ್ಯಾಲಯದ ಆಡಳಿತ ಮಂಡಳಿ ಅಧ್ಯಕ್ಷ ಡಾ.ಶ್ರೀಪತಿ ಕಲ್ಲೂರಾಯ ಅವರು ಮಾತನಾಡಿ ಎಲ್ಲಾ ಕಲೆಗಳಲ್ಲೂ ಶಿಸ್ತು ಇರುತ್ತದೆ. ಭರತನಾಟ್ಯ ಕಲೆ ಶಿಸ್ತಿನ ಮೂಲ ಎಂದ ಅವರು ದಕ್ಷಿಣ ಕರಾವಳಿ ಉದ್ದಕ್ಕೂ ಅನೇಕ ನಾಟ್ಯಗುರುಗಳಿದ್ದಾರೆ. ಆದರೆ ಭರತನಾಟ್ಯಕ್ಕೆ ಬರುವಾಗ ನಮಗೆ ಕಾಣುವುದು ಗುರು ಉಳ್ಳಾಲ ಮೋಹನ್ ಕುಮಾರ್ ಅವರು, ದಕ್ಷಿಣ ಭಾರತಕ್ಕೆ ಅವರು ಗುರು ಎನಿಸಿಕೊಂಡವರು. ಇವತ್ತು ಭರತ ನಾಟ್ಯ ಶಾಸ್ತ್ರಕ್ಕೆ ನೀಡುವ ಸೇವೆ ದಾಖಲೀಕರಣ ಆಗಬೇಕು. ಇದಕ್ಕೆ ಸಂಬಂಧಿಸಿ ಬರಹಗಳನ್ನು ಪ್ರಕಟಿಸಲಿದ್ದೇವೆ. ಈ ಕುರಿತು ವಿವೇಕಾನಂದ ಸ್ವಾಯತ್ತ ಸಂಸ್ಥೆ ಪೂರ್ಣ ಸಹಕಾರ ನೀಡಲಿದೆ ಎಂದರು.



ಯಜ್ಞ ಆಚಾರ್ಯರವರದ್ದು ಸವಾಲೊಡ್ಡುವ ಚಿತ್ರಗಳು:
ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯ ನೃತ್ಯ ನಿರ್ದೇಶಕ ವಿದ್ವಾನ್ ಬಿ ದೀಪಕ್ ಕುಮಾರ್ ಅವರು ಮಾತನಾಡಿ ನನ್ನ ಬಾಲ್ಯದಲ್ಲಿ ಯಜ್ಞ ಆಚಾರ್ಯ ಕ್ಲಿಕ್ಕಿಸಿದ ಫೋಟೋ ಇವತ್ತು ಇದೆ. ನನ್ನ ವೃತ್ತಿ ಜೀವನದ ಪ್ರಾರಂಭದ ಸಮಯದಲ್ಲಿ ಅವರು ಕ್ಲಿಕ್ಕಿಸಿದ ಪೊಟೋ ಇವತ್ತಿನ ಕಾಲದಲ್ಲೂ ಸುಂದರವಾಗಿ ಕಾಣಿಸುವ ಮೂಲಕ ಸವಾಲು ಒಡ್ಡುವ ಚಿತ್ರಗಳಾಗಿವೆ ಎಂದರು.

ಯಜ್ಞ ಅವರಿಗೆ ಕಲಾಶ್ರಯ ಪ್ರಶಸ್ತಿ:
ಹಿರಿಯ ಪತ್ರಿಕಾ ಛಾಯಾಗ್ರಾಹಕ ಯಜ್ಞ ಆಚಾರ್ಯ ಅವರಿಗೆ ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯಿಂದ ಕಲಾಶ್ರಯ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಸನ್ಮಾನ ಸ್ವೀಕರಿಸಿದ ಯಜ್ಞ ಆಚಾರ್ಯ ಅವರು ಕೃತಜ್ಞತೆ ಸಲ್ಲಿಸಿದರು. ವಿದುಷಿ ವಸುಧಾ ಜಿ ಎನ್ ಸನ್ಮಾನ ಪತ್ರ ವಾಚಿಸಿದರು. ನೃತ್ಯಗುರು ವಿದ್ವಾನ್ ಬಿ ಗಿರೀಶ್ ಕುಮಾರ್, ಕಲಾ ಶಾಲೆಯ ನಿರ್ದೇಶಕ ವಿದ್ವಾನ್ ಬಿ ದೀಪಕ್ ಕುಮಾರ್, ಸಂಸ್ಥೆಯ ಸಂಚಾಲಕಿ ಶಶಿಪ್ರಭಾ ಅವರು ಅತಿಥಿಗಳನ್ನು ಗೌರವಿಸಿದರು. ನೃತ್ಯಗುರು ವಿದುಷಿ ಪ್ರೀತಿಕಲಾ ಪ್ರಾರ್ಥಿಸಿದರು. ವಿದುಷಿ ಸೌಜನ್ಯ ಪಡುವೆಟ್ನಾಯ ಸ್ವಾಗತಿಸಿದರು. ನೃತ್ಯಗುರು ವಿದುಷಿ ಪ್ರೀತಿಕಲಾ ಪ್ರಾರ್ಥಿಸಿದರು. ವಿದುಷಿ ಅಕ್ಷತಾ ವಂದಿಸಿದರು. ವಿದುಷಿ ತೇಜಸ್ವಿ ಅಂಬೆಕ್ಕಲ್ಲು ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ಮೀರಾ ಶ್ರೀನಾರಾಯಣನ್ ಅವರಿಂದ ಭರತನಾಟ್ಯ ಪ್ರಸ್ತುತಿ ನಡೆಯಿತು. ನಟುವಾಂಗದಲ್ಲಿ ಬೆಂಗಳೂರಿನ ಕೆ.ಎನ್.ನವ್ಯಶ್ರೀ, ಹಾಡುಗಾರಿಕೆಯಲ್ಲಿ ಬಿಜೇಶ್ ಕೃಷ್ಣ, ನಟುವಾಂಗ ಶ್ರೀಲತಾ ಆಚಾರ್ಯ, ಮೃದಂಗ ಚಾರುದತ್ತ್ ವಿ.ವಿ, ಕೊಳಲಿನಲ್ಲಿ ಹರಿಪ್ರಸಾದ್ ಸಹಕರಿಸಿದರು.

ನಮ್ಮ ಸಂಸ್ಥೆ ಆರಂಭಗೊಂಡು 29 ವರ್ಷ ಆಗಿದೆ. 20ನೇ ವರ್ಷಕ್ಕೆ ವರ್ಷದ ವಿಶೇಷ ಕಾರ್ಯಕ್ರಮವಾಗಿ ನರ್ತನಾವರ್ತನವನ್ನು ಆರಂಭಿಸಿದೆವು. ಇವತ್ತು 9ನೇ ವರ್ಷದ ಕಾರ್ಯಕ್ರಮವಾಗಿ ಮೂಡಿ ಬಂದಿದೆ.
ವಿದ್ವಾನ್ ಬಿ ದೀಪಕ್ ಕುಮಾರ್
ನೃತ್ಯ ನಿರ್ದೇಶಕರು ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿ


ನೃತ್ಯ ಕಾರ್ಯಕ್ರಮದಲ್ಲಿ ಸಾಕ್ಷಿಯಾದ ಕರಾವಳಿ ಕರ್ನಾಟಕದ ಕಲಾ ದಿಗ್ಗಜ್ಜರು
ನರ್ತನಾವರ್ತನದಲ್ಲಿ ಚಲನಚಿತ್ರ ನಟಿ ಮೀರಾ ಶ್ರೀನಾರಾಯಣನ್ ಅವರ ನೃತ್ಯ ಕಾರ್ಯಕ್ರಮ ವೀಕ್ಷಣೆಗೆ ಕರಾವಳಿ ಕರ್ನಾಟಕ ಕಲಾ ದಿಗ್ಗಜರು ಸಭೆಯಲ್ಲಿ ಭಾಗವಹಿಸಿದ್ದರು. ಹಿರಿಯರದ ಉಳ್ಳಾಲ ಮೋಹನ್ ಕುಮಾರ್, ಹಿರಿಯ ನೃತ್ಯ ಕಲಾವಿಮರ್ಶಕಿ ವಿದುಷಿ ಪ್ರೇಮ, ಉಡುಪಿಯ ವಿದಷಿ ಲಕ್ಷ್ಮೀ ಗುರುರಾಜ್, ವಿದುಷಿ ರಾಜಶ್ರಿ ಉಳ್ಳಾಲ್, ವಿದುಷಿ ವಿದ್ಯಾಮನೋಜ್, ಮಂಗಳೂರಿನ ನೃತ್ಯ ಕಲಾವಿದೆ ಮತ್ತು ಕಲಾ ಸಂಯೋಜಕಿ ರಾಧಿಕ ಶೆಟ್ಟಿ, ಕಲಾಪೂಷಕಿ ರೂಪಲೇಖಾ, ಕಲಾ ಸಂಘಟಕಿ ವಿದುಷಿ ಉಮಾಶಂಕರಿ, ಪುತ್ತೂರು ನೃತ್ಯೋಪಸನಾ ಕಲಾಕೇಂದ್ರದ ವಿದುಷಿ ಶಾಲಿನಿ ಆತ್ಮಭೂಷನ್, ವಿದ್ವಾನ್ ಚಂದ್ರಶೇಖರ್ ನಾವುಡ, ವಿದುಷಿ ಸುಮಂಗಲ ರತ್ನಾಕರ್, ಹಿರಿಯ ವಿದುಷಿ ನಯನಾ ವಿ ರೈ, ವಿದುಷಿ ಸ್ವಸ್ತಿಕಾ ರೈ, ವಿದುಷಿ ಚಂದ್ರಿಕಾ ರೈ, ವಿದುಷಿ ಕವಿತಾ ಪುಣೆ, ಕಲಾಪೋಷಕರಾದ ದ್ವಾರಕ ಕನ್‌ಸ್ಟ್ರಕ್ಷನ್‌ನ ಗೋಪಾಲಕೃಷ್ಣ ಭಟ್, ಯಕ್ಷಗಾನ ಕಲಾವಿದ ನಾ.ಕಾರಂತ ಪೆರಾಜೆ ಸಹಿತ ಉದಯೋನ್ಮುಕ ಕಲಾವಿದರು ಸಭೆಯಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here