ಕೊಡಿಪಾಡಿ ಶ್ರೀ ಜನಾರ್ದನ ದೇವಸ್ಥಾನದ ವರ್ಷಾವಧಿ ಜಾತ್ರಾಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

0

ಎ.8-ಎ.14 ವರ್ಷಾವಧಿ‌ ಜಾತ್ರಾಮಹೋತ್ಸವ

ಪುತ್ತೂರು: ಕೊಡಿಪಾಡಿ ಶ್ರೀ ಜನಾರ್ದನ‌ದೇವಸ್ಥಾನದಲ್ಲಿ ಎ.8ರಿಂದ ಎ.14ರ ವರೆಗೆ ನಡೆಯಲಿರುವ ವರ್ಷಾವಧಿ‌ ಜಾತ್ರಾಮಹೋತ್ಸವ ಹಾಗೂ ಬ್ರಹ್ಮರಥೋತ್ಸವದ ಆಮಂತ್ರಣ ಪತ್ರಿಕೆಯನ್ನು ಕ್ಷೇತ್ರದಲ್ಲಿ ಬಿಡುಗಡೆ ಮಾಡಲಾಯಿತು‌.

ಕ್ಷೇತ್ರದ‌ ಪ್ರಧಾನ ಅರ್ಚಕರಾದ ಕೃಷ್ಣ ಬಡಿಕಿಲ್ಲಾಯರವರು ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಜನಾರ್ದನ ಎರ್ಕಡಿತ್ತಾಯ, ಸದಸ್ಯರಾದ ಸುಬ್ರಹ್ಮಣ್ಯ ಗೌಡ ಹಣಿಯೂರು, ಧೀರಜ್ ಗೌಡ ಹಿರ್ಕುಡೆಲು, ಸುದೀರ್ ಪ್ರಸಾದ್ ಆನಾಜೆ, ಕೇಶವ ಪೆಲತ್ತಡಿ, ಚಂದ್ರಶೇಖರ ನಾಯ್ಕ್ ಕುದ್ಮಾನ್, ಸರೋಜಿನಿ ಅರ್ಕ, ಯಶೋಧ ಹೊಸೊಕ್ಲು ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here