ಪುತ್ತೂರು: ಬೊಳುವಾರು ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘದ ವತಿಯಿಂದ ಪಾಕ್ಷಿಕ ಯಕ್ಷಗಾನ ತಾಳಮದ್ದಳೆ ” ಭೀಷ್ಮಾರ್ಜುನ ” ಬೊಳುವಾರು ಶ್ರೀ ಆಂಜನೇಯ ಮಂತ್ರಾಲಯದಲ್ಲಿ ಮಾ.1ರಂದು ನಡೆಯಿತು.

ಹಿಮ್ಮೆಳದಲ್ಲಿ ಆನಂದ ಸವಣೂರು, ತಾರಾನಾಥ ಸವಣೂರು, ಪರೀಕ್ಷಿತ್ ಹಂದ್ರಟ್ಟ, ಶರಣ್ಯ ನೆತ್ತರಕೆರೆ ಸಹಕರಿಸಿದರು. ಮುಮ್ಮೇಳದಲ್ಲಿ ಭಾಸ್ಕರ್ ಬಾರ್ಯ ( ಶ್ರೀ ಕೃಷ್ಣ ), ಭೀಷ್ಮ ( ಗುಂಡ್ಯಡ್ಕ ಈಶ್ವರ ಭಟ್ ಮತ್ತು ಗುಡ್ಡಪ್ಪ ಬಲ್ಯ ), ಅರ್ಜುನ ( ಹರಿಣಾಕ್ಷಿ ಜೆ ಶೆಟ್ಟಿ ), ಅಭಿಮನ್ಯು ( ಅಚ್ಯುತ ಪಾಂಗಣ್ಣಾಯ ) ಸಹಕರಿಸಿದರು. ದುಗ್ಗಪ್ಪ ಯನ್ ದಂಪತಿ ಪ್ರಾಯೋಜಿಸಿದ್ದರು.