ಇಂದಿನ ಕಾರ್ಯಕ್ರಮ(04/03/2025)

0

ಪುತ್ತೂರು ಮುಳಿಯ ಕೇಶವ ಭಟ್ & ಸನ್ಸ್ ಜ್ಯುವೆಲ್ಸ್‌ನಲ್ಲಿ ಡೈಮಂಡ್ ಫೆಸ್ಟ್
ಪುತ್ತಿಗೆ ಹಿ.ಪ್ರಾ. ಶಾಲೆಯಲ್ಲಿ ಬೆಳಿಗ್ಗೆ ೧೧ಕ್ಕೆ ಕಡ್ಯ-ಕೊಣಾಜೆ ಗ್ರಾ.ಪಂನ ೧ನೇ ವಾರ್ಡ್, ಕೊಣಾಜೆ ಶ್ರೀ ದುರ್ಗಾಂಬಿಕಾ ಸಭಾಭವನದಲ್ಲಿ ಅಪರಾಹ್ನ ೩ಕ್ಕೆ ೨ನೇ ವಾರ್ಡ್‌ನ ವಾರ್ಡುಸಭೆ
ಮಿತ್ತೂರು ಶಾಲೆಯಲ್ಲಿ ಬೆಳಿಗ್ಗೆ ೧೦.೩೦ಕ್ಕೆ ಇಡ್ಕಿದು ಗ್ರಾ.ಪಂ ೧ನೇ ವಾರ್ಡ್, ಸೂರ್ಯ ಶಾಲೆಯಲ್ಲಿ ಮಧ್ಯಾಹ್ನ ೧೨ಕ್ಕೆ ಇಡ್ಕಿದು ೨ನೇ ವಾರ್ಡ್, ಇಡ್ಕಿದು ಪಂಚಾಯತ್ ಸಭಾಭವನದಲ್ಲಿ ಅಪರಾಹ್ನ ೩ಕ್ಕೆ ಇಡ್ಕಿದು ೩ನೇ ವಾರ್ಡ್, ಕುಳ ೧ನೇ ವಾರ್ಡ್, ವಿಷ್ಣುನಗರ ಅಂಗನವಾಡಿ ಕೇಂದ್ರದಲ್ಲಿ ೪ಕ್ಕೆ ಕುಳ ೨ನೇ ವಾರ್ಡ್‌ನ ವಾರ್ಡುಸಭೆ
ಸಿರಿಕಡಮಜಲು ಕೃಷಿ ಕ್ಷೇತ್ರದಲ್ಲಿ ವೀರ ಯೋಧ ಕೆದಂಬಾಡಿ ಗ್ರಾಮದ ನಿವೃತ್ತಿ ಪಡೆದ ಯೋಧ ಲಕ್ಷೀಶ ಕಡಮಜಲು ರವರಿಗೆ ಅಭಿನಂದನಾ ಸನ್ಮಾನ
ಕಾಣಿಯೂರು ಶ್ರೀ ಜಗದ್ಗುರು ಶ್ರೀ ಮನ್ಮಧ್ವಾಚಾರ್ಯ ಮೂಲ ಮಹಾಸಂಸ್ಥಾನಮ್ ಉಡುಪಿ, ಶ್ರೀ ಕಾಣಿಯೂರು ಮಠದಲ್ಲಿ ಬೆಳಿಗ್ಗೆ ೯ರಿಂದ ಸಾಮೂಹಿಕ ಶ್ರೀ ಸತ್ಯ ನಾರಾಯಣ ಪೂಜೆ, ಮಧ್ಯಾಹ್ನ ಅನ್ನಸಂತರ್ಪಣೆ, ಅಪರಾಹ್ನ ೩ರಿಂದ ಅಮ್ಮನವರ ಪೂಜೆ, ಶಿರಾಡಿ ದೈವದ ನೇಮ
ಈಶ್ವರಮಂಗಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಬೆಳಿಗ್ಗೆ ೯ಕ್ಕೆ ಕಿನ್ನಿಮಾಣಿ ದೈವ ಶ್ರೀಮುಡಿ ಧರಿಸಿ ಹೊರಟು ಮಾಡದಗುಡ್ಡೆ ದೈವಗಳ ಚಾವಡಿಯಲ್ಲಿ ಕಿನ್ನಿಮಾಣಿ, ಪೂಮಾಣಿ, ಪಿಲಿಚಾಮುಂಡಿ ದೈವಗಳ ನೇಮ, ಅನ್ನಸಂತರ್ಪಣೆ, ಮಾಡದಗುಡ್ಡೆಯಿಂದ ಶ್ರೀ ಕ್ಷೇತ್ರಕ್ಕೆ ಭಂಡಾರ ಮರಳಿ ಬರುವುದು, ರಾತ್ರಿ ೭ಕ್ಕೆ ಶ್ರೀ ಕ್ಷೇತ್ರದಲ್ಲಿ ಗುಳಿಗ ಕೋಲ
ರಾಮಕುಂಜ ಗ್ರಾಮದ ನೀರಾಜೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಬೆಳಿಗ್ಗೆ ಶಾಂತಿ ಪ್ರಾಯಶ್ಚಿತ ಹೋಮ, ನವಗ್ರಹ ಹೋಮ, ಕೂಷ್ಮಾಂಡ ಹೋಮ, ಮಹಾಪೂಜೆ, ಸಂಜೆ ವನದುರ್ಗಾ ಮಂತ್ರ ಹೋಮ, ದುರ್ಗಾನಮಸ್ಕಾರ, ಮಹಾಪೂಜೆ
ಬಡಗನ್ನೂರು ಶ್ರೀ ಕ್ಷೇತ್ರ ಗೆಜ್ಜೆಗಿರಿ ದೇಯಿ ಬೈದೆತಿ, ಕೋಟಿ ಚೆನ್ನಯ ಮೂಲಸ್ಥಾನದಲ್ಲಿ ಬೆಳಿಗ್ಗೆ ೬ರಿಂದ ಗಣಪತಿ ಹೋಮ, ಗುರುಪೂಜೆ, ಮೂಲಸ್ಥಾನ ಗರಡಿ, ಬೆಮ್ಮೆರೆ ಗುಂಡ, ಸತ್ಯಧರ್ಮ ಚಾವಡಿಯಲ್ಲಿ ನವಕ ಪ್ರಧಾನ ಹೋಮ, ನವಕ ಕಲಶಾಭಿಷೇಕ, ಅಲಂಕಾರ ಪೂಜೆ, ೧೧.೪೫ಕ್ಕೆ ಗರಡಿಯಲ್ಲಿ ಮಹಾಪೂಜೆ, ಮಧ್ಯಾಹ್ನ ೧೨.೩೦ಕ್ಕೆ ಸತ್ಯಧರ್ಮ ಚಾವಡಿಯಲ್ಲಿ ಮಹಾಪೂಜೆ, ಪಲ್ಲಪೂಜೆ, ಅನ್ನಸಂತರ್ಪಣೆ, ಸಂಜೆ ೩.೩೦ರಿಂದ ಮೂಲಸ್ಥಾನ ಗರಡಿಯಲ್ಲಿ ಶುದ್ಧಹೋಮ ಕಲಶ, ೫ರಿಂದ ಧೂಮಾವತಿ ಬಲಿ ಸೇವೆ, ೬ರಿಂದ ಸತ್ಯಧರ್ಮ ಚಾವಡಿಯಲ್ಲಿ ದೀಪಾರಾಧನೆ, ಮಹಾಪೂಜೆ, ರಾತ್ರಿ ೮ರಿಂದ ದೇಯಿ ಬೈದೆತಿ ನೇಮೋತ್ಸವ, ಮಾತೆ ಮಕ್ಕಳ ಪುನೀತ ಸಮಾಗಮ, ೯ರಿಂದ ದೇಯಿ ಬೈದೆತಿ ಸಮಾಧಿಯಲ್ಲಿ ದೀಪಾರಾಧನೆ, ಬೈದರ್ಕಳ ನೇಮೋತ್ಸವ
ಪಡುಮಲೆ ಕುತ್ಯಾಳ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಬೆಳಿಗ್ಗೆ ೧೦ಕ್ಕೆ ದರ್ಶನ ಬಲಿ, ಬಟ್ಟಲು ಕಾಣಿಕೆ
ಪೆರಾಬೆ ಗ್ರಾಮದ ಮನವಳಿಕೆಗುತ್ತು ಕುಟುಂಬದ ಮನೆಯಲ್ಲಿ ಬೆಳಿಗ್ಗೆ ೮ಕ್ಕೆ ರಕ್ತೇಶ್ವರೀ ಶಿರಾಡಿ ದೈವಗಳ ನೇಮ, ಸಂಜೆ ೬ರಿಂದ ಪಂಜುರ್ಲಿ ಕಲ್ಲುರ್ಟಿ ನೇಮ, ರಾತ್ರಿ ೮.೩೦ಕ್ಕೆ ಸತ್ಯದೇವತೆ ನೇಮ, ರಾತ್ರಿ ೧೦ಕ್ಕೆ ಅನ್ನಸಂತರ್ಪಣೆ
ಪುತ್ತೂರು ಸತ್ಯ ಶಾಂತ ಪ್ರತಿಷ್ಠಾನದಿಂದ ಬದಿಯಡ್ಕ ನೀರ್ಚಾಲು ಸಮೀಪದ ಶ್ರೀ ಮಹಾವಿಷ್ಣು ಕ್ಷೇತ್ರ ಕಾರ್ಮಾರುನಲ್ಲಿ ಮಧ್ಯಾಹ್ನ ೧ರಿಂದ ಸಂಗೀತ ನೃತ್ಯ ವೈಭವ
ಬೆಳ್ಳಿಪ್ಪಾಡಿ ಗ್ರಾಮದ ಮಳುವೇಲು ಜತ್ತಿಬೆಟ್ಟು ಶ್ರೀ ವನಶಾಸ್ತಾರ, ನಾಗ ಸನ್ನಿಧಿಯಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವ, ನೂತನ ಪ್ರಭಾವಳಿ ಸಮರ್ಪಣೆ
ಕೆಯ್ಯೂರು ಗ್ರಾಮ ಮಾಡಾವು ಶ್ರೀ ಸುಬ್ರಹ್ಮಣ್ಯ ದೇವರು ಬೊಳಿಕಲ ಮಠದಲ್ಲಿ ಸಂಜೆ ೫.೩೦ರಿಂದ ದೇವತಾ ಪ್ರಾರ್ಥನೆ, ಆಚಾರ್ಯವರಣ, ರಕ್ಷೆಘ್ನ ಹೋಮ, ವಾಸ್ತುಹೋಮ, ವಾಸ್ತು ಪೂಜಾಬಲಿ, ರಾತ್ರಿ ಮಹಾಪೂಜೆ
ಹನಿಯೂರು ತರವಾಡು ಮನೆಯಲ್ಲಿ ಬೆಳಿಗ್ಗೆ ೮ಕ್ಕೆ ಧರ್ಮದೈವ ರುದ್ರಚಾಮುಂಡಿ, ಗುಳಿಗ ದೈವಗಳ ನೇಮೋತ್ಸವ, ಮಧ್ಯಾಹ್ನ ಅನ್ನಸಂತರ್ಪಣೆ
ಬೆಟ್ಟಂಪಾಡಿ ಗುಮ್ಮಟೆಗದ್ದೆ ಬಬ್ಲಿಮನೆ ಕಲ್ಪಣೆಯಲ್ಲಿ ಬೆಳಿಗ್ಗೆ ೭ರಿಂದ ಗಣಪತಿ ಹೋಮ, ತಂಬಿಲ, ಮಹಾಪೂಜೆ, ಅನ್ನಸಂತರ್ಪಣೆ, ರಾತ್ರಿ ೮ರಿಂದ ದೈವಗಳ ನೇಮೋತ್ಸವ.

LEAVE A REPLY

Please enter your comment!
Please enter your name here