ಬಡಗನ್ನೂರು : ಪಡುಮಲೆ ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವರ ಹಾಗೂ ಪರಿವಾರ ದೇವರ ಪ್ರತಿಷ್ಠಾ ವರ್ಧಂತ್ಯುತ್ಸವ ವೇ. ಮೂ ಕುಂಟಾರು ವಾಸುದೇವ ತಂತ್ರಿಗಳ ಮಾರ್ಗದರ್ಶನದಲ್ಲಿ ವೇ ಮೂ ಕುಂಟಾರು ರವೀಶ ತಂತ್ರಿಗಳ ನೇತೃತ್ವದಲ್ಲಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಮಾ.2 ರಂದು ಜರುಗಿತು.
ಮಾ.2 ರಂದು ಪೂರ್ವಾಹ್ನ ಗಂ 7 ರಿಂದ 12 ತೆಂಗಿನಕಾಯಿ ಗಣಪತಿ ಹೋಮ, ಗಣಪತಿಹೋಮದ ಪೂರ್ಣಾಹುತಿ,ಶ್ರೀ ದೇವರಿಗೆ ನವಕಾಭಿಷೇಕ, ಶ್ರೀ ರಾಜರಾಜೇಶ್ವರಿ ದೇವಿಗೆ ಕಲಶಾಭಿಷೇಕ ಮತ್ತು ವಿಶೇಷ ಪೂಜೆ,ಬಳಿಕ ನಾಗ ತಂಬಿಲ ಮತ್ತು ಗುಳಿಗ ತಂಬಿಲ ನಡೆಯಿತು.
ಬಳಿಕ 9.30 ರಿಂದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ,ಶ್ರೀ ದೇವರಿಗೆ ಮಹಾಪೂಜೆ, ಮಹಾಮಂಗಳಾರತಿ, ಪ್ರಸಾದ ವಿತರಣೆ, ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು. ಸಾಮೂಹಿಕ ಸತ್ಯನಾರಾಯಣ ಪೂಜಾ ಕಾರ್ಯಕ್ರಮವು ಸದಾಶಿವ ಭಟ್ ಪೈರುಪುಣಿ ನೇತೃತ್ವದಲ್ಲಿ ನಡೆಯಿತು.
ರಾತ್ರಿ ಜಿಲ್ಲೆಯ ಸುಪ್ರಸಿದ್ದ ಕಲಾವಿದರಿಂದ ನಾಳ ಶ್ರೀ ದುರ್ಗಾಪರಮೇಶ್ವರಿ ಕೃಪಾಪೋಷಿತ ಯಕ್ಷಗಾನ ಮಂಡಳಿಯ ಸುಸಜ್ಜಿತ ಭವ್ಯ ರಂಗಸ್ಥಳದಲ್ಲಿ “ಹರಿಭಕ್ತ ಮಯೂರಧ್ವಜ ಸುಂದೋಪಸುಂದ” ಯಕ್ಷಗಾನ ಬಯಲಾಟ ನಡೆಯಿತು.

ಈ ಸಂದರ್ಭದಲ್ಲಿ ಕ್ಷೇತ್ರದ ಪವಿತ್ರ ಪಾಣಿ ಕೂವೆತ್ತೋಟ, ವ್ಯವಸ್ಥಾಪನಾ ಸಮಿತಿ ನಿಕಟಪೂರ್ವ ಅಧ್ಯಕ್ಷ ಮನೋಜ್ ರೈ ಪೇರಾಲು, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಶ್ರೀನಿವಾಸ್ ಭಟ್, ಪ್ರತಿಷ್ಥಾ ವರ್ಧಂತುತ್ಸವ ಸಮಿತಿ ಅಧ್ಯಕ್ಷ ಚಂದ್ರಶೇಖರ ಭಂಡಾರಿ ನಲಿಕೆಮಜಲು, ಪ್ರಧಾನ ಕಾರ್ಯದರ್ಶಿ ಬಾಲಕೃಷ್ಣ ಪಾಟಾಳಿ, ಕೋಶಾಧಿಕಾರಿ ಹರಿಶ್ಚಂದ್ರ ಗೌಡ ಕನ್ನಡ್ಕ, ದೇವಸ್ಥಾನ ಪ್ರಧಾನ ಅರ್ಚಕ ಮಹಾಲಿಂಗ ಭಟ್, ಜಾತ್ರೋತ್ಸವ ಸಮಿತಿ ಅಧ್ಯಕ್ಷ ಸತೀಶ್ ರೈ ಕಟ್ಟಾವು, ಪ್ರಧಾನ ಕಾರ್ಯದರ್ಶಿ ಜನಾರ್ದನ ಪೂಜಾರಿ ಪದಡ್ಕ, ಕೋಶಾಧಿಕಾರಿ ರಾಜೇಶ್ ರೈ ಮೇಗಿನಮನೆ ವ್ಯವಸ್ಥಾಪನಾ ಸಮಿತಿ ಸದಸ್ಯ ಚಂದ್ರಶೇಖರ ಆಳ್ವ ಗಿರಿಮನೆ ಹಾಗೂ ವಿವಿಧ ಸಮಿತಿ ಸದಸ್ಯರು ಮತ್ತು ಊರಿನವರು ಉಪಸ್ಥಿತರಿದ್ದರು.