ನೆಲ್ಯಾಡಿ: ಬಜತ್ತೂರು ಗ್ರಾಮದ ಬೆದ್ರೋಡಿ ಸಮೀಪ ಗುಡ್ಡಕ್ಕೆ ಮಾ.4ರಂದು ರಾತ್ರಿ ಬೆಂಕಿ ಬಿದ್ದ ಘಟನೆ ನಡೆದಿದೆ.
ಗೋಳಿತ್ತೊಟ್ಟು ಹಾಗೂ ಸ್ಥಳೀಯ ಯುವಕರು ಮತ್ತು ಅಗ್ನಿಶಾಮಕ ದಳದವರು ಬೆಂಕಿ ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ. ಬೆಂಕಿಯಿಂದಾಗಿ ಗುಡ್ಡದಲ್ಲಿದ್ದ ವಿವಿಧ ಜಾತಿಯ ಮರ, ಗಿಡಗಳು ಬೆಂಕಿಗಾಹುತಿಯಾಗಿವೆ ಎಂದು ವರದಿಯಾಗಿದೆ.
