ಕಡಬ: 13 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಸವಣೂರಿನಲ್ಲಿ ನಡೆದ ಹಲ್ಲೆ ಪ್ರಕರಣವೊಂದರ ಆರೋಪಿಯೊಬ್ಬನನ್ನು ಮಾ.4ರಂದು ಕಡಬ ಪೊಲೀಸರು ಬಂಧಿಸಿದ್ದಾರೆ. ಪುತ್ತೂರು ತಾಲೂಕು ಪಡ್ನೂರು ಗ್ರಾಮದ ನೆಲಪಾಲ ನಿವಾಸಿ ಶಿವಪ್ಪ ಗೌಡ ಎಂಬವರ ಪುತ್ರ ಶ್ರೀಷ ಎಂಬವರು ಬಂಧಿತ ಆರೋಪಿ. ಇವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
2010ರ ಎ.15 ರಂದು ಸವಣೂರು ಪೇಟೆಯಲ್ಲಿ ಅಟ್ಟೋಳೆಯ ಶೇಷಪ್ಪ ಎಂಬವರಿಗೆ ತಂಡವೊಂದು ಹಲ್ಲೆ ಮಾಡಿತ್ತು. ಈ ಪ್ರಕರಣದಲ್ಲಿ ತಲೆಮರೆಸಿಕೊಂಡು ವಾರಂಟ್ ಆರೋಪಿಯಾಗಿದ್ದ ಶ್ರೀಷನ್ನು ಕಡಬ ಪೋಲಿಸರು ಮಂಗಳೂರಿನ ಸುರತ್ಕಲ್ ನಲ್ಲಿ ಕಡಬ ಪೋಲಿಸರು ಬಂಧಿಸಿದ್ದಾರೆ. ಉಪ್ಪಿನಂಗಡಿ ಪೊಲೀಸ್ ವೃತ್ತ ನಿರೀಕ್ಷಕ ರವಿ ಬಿ.ಎಸ್.ರವರ ನಿರ್ದೇಶನದಂತೆ ಹಾಗೂ ಕಡಬ ಠಾಣಾ ಪಿಎಸ್.ಐ. ಅಭಿನಂದನ್ ಹಾಗೂ ತನಿಖಾ ಪಿ.ಎಸ್.ಐ. ಅಕ್ಷಯ್ ರವರ ಆದೇಶದಂತೆ ಸಿಬ್ಬಂದಿಗಳಾದ ರಾಜು ನಾಯಕ್, ಪ್ರವೀಣ್, ಇಸಾಕ್ ವರು ವಾರೆಂಟ್ ಆರೋಪಿಯನ್ನು ದಸ್ತಗಿರಿ ಮಾಡಿದ್ದಾರೆ