ಪುಣಚ: ಪುಣಚ ನೀರುಮಜಲು ಶ್ರೀ ಬ್ರಹ್ಮ ಬೈದರ್ಕಳ ಗರಡಿಯಲ್ಲಿ ವರ್ಷಂಪ್ರತಿ ನಡೆಯುವ ಬ್ರಹ್ಮ ಬೈದರ್ಕಳ ನೇಮೋತ್ಸವ ಮಾ.12ರಂದು ನಡೆಯಲಿದ್ದು ಇದರ ಗೊನೆ ಮುಹೂರ್ತ ಕಾರ್ಯ ಮಾ.5ರಂದು ಗರಡಿಯ ಬಳಿಯಲ್ಲಿ ನಡೆಯಿತು.
ಗರಡಿಯ ಆಡಳಿತ ಮುಖ್ಯಸ್ಥರಾದ ಸೀತಾರಾಮ ಪೂಜಾರಿ ನೀರುಮಜಲು, ನಾರಾಯಣ ಪೂಜಾರಿ ನೀರುಮಜಲು ಹಾಗೂ ಶರತ್ ಕುಮಾರ್ ನೀರುಮಜಲು ಉಪಸ್ಥಿತರಿದ್ದರು.