
ಪುತ್ತೂರು: ಈಶ್ವರಮಂಗಲ ಜಾತ್ರೋತ್ಸವದಲ್ಲಿ ಮಾ.2ರಂದು ರಾತ್ರಿ ಉತ್ಸವ ಬಲಿ ಹೊರಟು ಬಳಿಕ ಅವಭೃತ ಸ್ನಾನಕ್ಕೆ ಸಸ್ಪೆಟ್ಟಿಗೆ ಶ್ರೀದೇವರ ಸವಾರಿ ನಡೆಯಿತು. ದೇವರ ಸವಾರಿಯಲ್ಲಿ ಕಟ್ಟೆಪೂಜೆ ನಡೆದು ಅವಭೃತ ಸ್ನಾನ ನಡೆಯಿತು. ಮಾ.3ರಂದು ಬೆಳಿಗ್ಗೆ 5ಗಂಟೆಗೆ ಬೆಡಿ ಸೇವೆ, ಬಟ್ಟಲು ಕಾಣಿಕೆ, ರಾಜಾಂಗಣ ಪ್ರಸಾದ, ದ್ವಜಾವರೋಹಣ, ಮಂತ್ರಾಕ್ಷತೆ, ಸಂಪ್ರೋಕ್ಷಣೆ ನಡೆಯಿತು. ಪ್ರತಿಷ್ಠಾ ದಿನದ ಪ್ರಯುಕ್ತ ದೇವರಿಗೆ ಬೆಳಿಗ್ಗೆ ಗಣಪತಿ ಹೋಮ, ಬಲಿವಾಡು ಶೇಖರಣೆ, ನವಕ, ಶತರುದ್ರಾಭಿಷೇಕ, ಸೀಯಾಳಾಭಿಷೇಕ ನಡೆಯಿತು.

ಪವಿತ್ರಪಾಣಿ ಗೋಪಾಲಕೃಷ್ಣ ಕುಂಜತ್ತಾಯ, ಉತ್ಸವ ಸಮಿತಿಯ ಅಧ್ಯಕ್ಷ ನಾಗಪ್ಪ ಗೌಡ ಬೊಮ್ಮೆಟ್ಟಿ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಎ. ಮಂಜುನಾಥ ರೈ ಸಾಂತ್ಯ, ಗೌರವಾಧ್ಯಕ್ಷ ರತನ್ ಕುಮಾರ್ ನಾೖಕ್ , ಪ್ರಧಾನ ಕಾರ್ಯದರ್ಶಿ ಎಸ್ ಮೋಹನದಾಸ ಶೆಟ್ಟಿ ನೂಜಿಬೈಲು, ಖಜಾಂಚಿ ದೀಪಕ್ ಕುಮಾರ್ ಮುಂಡ್ಯ, ಉಪಾಧ್ಯಕ್ಷರುಗಳಾದ ಡಾ| ಶ್ರೀಕುಮಾರ್, ಸುರೇಶ್ ಆಳ್ವ ಸಾಂತ್ಯ, ಸದಾಶಿವ ರೈ ನಡುಬೈಲು, ಜತೆ ಕಾರ್ಯದರ್ಶಿ ವಿಕ್ರಂ ರೈ ಸಾಂತ್ಯ, ಉತ್ಸವ ಸಮಿತಿಯ ಕಾರ್ಯದರ್ಶಿ ಪೂರ್ಣಚಂದ್ರ ರೈ ನೆಲ್ಲಿತ್ತಡ್ಕ, ಉಪಾಧ್ಯಕ್ಷ ಸುಭಾಶ್ಚಂದ್ರ ರೈ ಮೈರೋಳು, ಚಿನ್ಮಯ್ ರೈ ನಡುಬೈಲು, ಖಜಾಂಚಿ ಬಿ. ರಾಮಣ್ಣ ನಾಯ್ಕ್ ಸಸಿಹಿತ್ಲು ಕುತ್ಯಾಳ, ವ್ಯವಸ್ಥಾಪನಾ ಸಮಿತಿಯ ನಿಕಟಪೂರ್ವಕ ಸದಸ್ಯ ಜತ್ತಪ್ಪ ಗೌಡ ಕೊಂಕಣಿಗುಂಡಿ, ನೆಟ್ಟಣಿಗೆ ಮುಡ್ನೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷ ರಾಮ ಮೇನಾಲ, ರಾಮ ಪ್ರಸಾದ್ ಆಳ್ವ ಮೇನಾಲ, ಪ್ರವೀಣ್ ರೈ ಮೇನಾಲ, ಅಚ್ಯುತ ಮಣಿಯಾಣಿ, ಜಯಪ್ರಕಾಶ್ ರೈ ನೂಜಿಬೈಲು, ಪ್ರವೀಣ್ ರೈ ಮೇನಾಲ, ಜಯಾನಂದ ಕೋರಿಗದ್ದೆ, ಅಣ್ಣಯ್ಯ ಗೌಡ ಉರಿಕ್ಯಾಡಿ, ಜಯಚಂದ್ರ ಸೇರಾಜೆ, ಆನಂದ ಗೌಡ ಕೆಮ್ಮತ್ತಡ್ಕ, ರಮೇಶ್ ಪೂಜಾರಿ ಮುಂಡ್ಯ, ಶೇಖರ ಪೂಜಾರಿ ಮುಂಡ್ಯ, ಗಣೇಶ್ ವಜ್ರಮೂಲೆ, ಮಧುಕರ ನೆಲ್ಲಿತ್ತಡ್ಕ, ಜಗನ್ನಾಥ ರೈ ನೆಲ್ಲಿತ್ತಡ್ಕ, ಚಂದ್ರಹಾಸ ಚಿಮಿಣಿಗುಡ್ಡೆ, ರಾಮಣ್ಣ ನಾಯ್ಕ ದೇಲಂಪಾಡಿ ಬಸಿರಡ್ಕ, ಕೇಶವ ಕೋರಿಗದ್ದೆ, ನಾರಾಯಣ ಗೌಡ ಈಶ್ವರಮಂಗಲ, ಸತೀಶ್ ಸುರುಳಿಮೂಲೆ, ನಾರಾಯಣ ರೈ ಬೆಡಿಗದ್ದೆ, ಶಂಕರ ಪಟ್ರೋಡಿ, ಹರೀಶ್ ರಾವ್, ಅನೂಪ್ ಕನ್ನಟ್ಟಿಮಾರು, ರಾಜೇಶ್ ಪಂಚೋಡಿ, ಚರಣ್ ರಾಜ್ ಮಡ್ಯಾಲಮಜಲು ಹಾಗೂ ಭಕ್ತಾಧಿಗಳು ಉಪಸ್ಥಿತರಿದ್ದರು.

ಯಕ್ಷಗಾನ ಬಯಲಾಟ: ಜಾತ್ರೋತ್ಸವದ ಪ್ರಯುಕ್ತ ಮಾ.2ರಂದು ರಾತ್ರಿ ಮಲ್ಲ ಶ್ರೀದುರ್ಗಾಪರಮೇಶ್ವರಿ ಯಕ್ಷಗಾನ ಮಂಡಳಿಯವರಿಂದ ಯಕ್ಷಗಾನ ಬಯಲಾಟ ತ್ರಿಜನ್ಮ ಮೋಕ್ಷ ನಡೆಯಿತು. ಈ ಸಂದರ್ಭದಲ್ಲಿ ತೆಂಕುತಿಟ್ಟಿನ ಅಗ್ರಮಾನ್ಯ ಯಕ್ಷಗಾನ ಕಲಾವಿದರಿಗೆ ಸನ್ಮಾನ ಕಾರ್ಯಕ್ರಮ ನಡೆಸಲಾಯಿತು. ಬಣ್ಣದ ವೇಷಧಾರಿ ಜಯರಾಮ ಪಾಟಾಳಿ ಪಡುಮಲೆ, ಬಾಲಕೃಷ್ಣ ದೇಲಂಪಾಡಿ, ಹಾಸ್ಯ ಕಲಾವಿದ ಚನಿಯಪ್ಪ ನಾಯ್ಕರವರನ್ನು ಯಕ್ಷಗಾನ ಕಲಾಸಕ್ತ ಬಳಗ ಈಶ್ವರಮಂಗಲ ಇವರ ವತಿಯಿಂದ ಸನ್ಮಾನಿಸಲಾಯಿತು. ನಿವೃತ್ತ ಮುಖ್ಯಗುರು ಐ.ರುದ್ರಯ್ಯ, ನಿವೃತ್ತ ಮುಖ್ಯಗುರು ಸರೋಜಿನಿ ನಾಗಪ್ಪಯ್ಯ ಮತ್ತು ಮನೆಯವರು, ಗುರುಪ್ರಸಾದ್ ಐ.ಆರ್. ಉದಯ ಪಟ್ಲಡ್ಕ, ಹರೀಶ್ ರಾವ್, ದೇವಾಲಯದ ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ಎಸ್.ಮೋಹನ್ದಾಸ್ ಶೆಟ್ಟಿ ನೂಜಿಬೈಲು, ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಆನಂದ ರೈ ಸಾಂತ್ಯ, ಚಪ್ಪರ ಸಮಿತಿಯ ಸತೀಶ್ ಸುರುಳಿಮೂಲೆ, ಸಾಂಸ್ಕೃತಿಕ ಸಮಿತಿಯ ಕೊರಗಪ್ಪ ಮುಂಡ್ಯ ಉಪಸ್ಥಿತರಿದ್ದರು. ದೈಹಿಕ ಶಿಕ್ಷಣ ಶಿಕ್ಷಕ ದೇವಿಪ್ರಕಾಶ್ ಕುತ್ಯಾಳ ಕಾರ್ಯಕ್ರಮ ನಿರೂಪಿಸಿದರು.