ಪುತ್ತೂರು ಮುಳಿಯ ಕೇಶವ ಭಟ್ & ಸನ್ಸ್ ಜ್ಯುವೆಲ್ಸ್ನಲ್ಲಿ ಡೈಮಂಡ್ ಫೆಸ್ಟ್
ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬೆಳಿಗ್ಗೆ ಮೃತ್ಯುಂಜಯ ಹೋಮ, ಸಂಜೆ ೬ರಿಂದ ಆಘೋರ ಹೋಮ, ಬಾಧೋಚ್ಚಾಟನೆ, ವನದುರ್ಗಾಹೋಮ
ಪುತ್ತೂರು ನ್ಯಾಯಾಲಯದ ಆವರಣದಲ್ಲಿ ಲೋಕ ಅದಾಲತ್
ಪುತ್ತೂರು ಸಂತ ಫಿಲೋಮಿನಾ ಪ.ಪೂ. ಕಾಲೇಜಿನ ಪ್ರಾಂಗಣದಲ್ಲಿ ಸಂಜೆ ೬ರಿಂದ ಹಿರಿಯ ವಿದ್ಯಾರ್ಥಿಗಳ ಸಮಾಗಮ ಫಿಲೋ ಮಿಲನ' ಟಿಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಸಂಜೆ ೬.೩೦ರಿಂದ ಸಾಯಿ ಕಲಾವಿದೆರ್ ಕುಡ್ಲ ವತಿಯಿಂದ
ಮೋಹಿನಿ’ ತುಳು ನಾಟಕ ಸಂಭ್ರಮಾಚರಣೆ-ಉಚಿತ ಪ್ರದರ್ಶನ, ಸಭಾ ಕಾರ್ಯಕ್ರಮ, ಸನ್ಮಾನ
ದರ್ಬೆ ಪ್ರಶಾಂತ್ ಮಹಲ್ ಬಳಿಯ ಮೈದಾನದಿಂದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನಟರಾಜ ವೇದಿಕೆಯ ತನಕ ಬೆಳಿಗ್ಗೆ ೯ಕ್ಕೆ ದ.ಕ. ಜಿಲ್ಲಾ ಮಹಿಳಾ ಮಂಡಲಗಳ ಒಕ್ಕೂಟ, ಮಂಗಳೂರು, ಪುತ್ತೂರು ತಾಲೂಕು ಮಹಿಳಾ ಮಂಡಲಗಳ ಒಕ್ಕೂಟದಿಂದ ವಿಶ್ವ ಮಹಿಳಾ ದಿನಾಚರಣೆಯ ಪ್ರಯುಕ್ತ ಮಹಿಳಾ ವಾಹನ ಜಾಥಾ, ೧೧ರಿಂದ ಸಭಾ ಕಾರ್ಯಕ್ರಮ
ಬೊಳುವಾರು ಶ್ರೀ ವಿಶ್ವಕರ್ಮ ಸಭಾಭವನದಲ್ಲಿ ಅಪರಾಹ್ನ ೩ಕ್ಕೆ ಪುತ್ತೂರು ದ.ಕ ಜಿಲ್ಲಾ ವಿಶ್ವಕರ್ಮ ಹಿತರಕ್ಷಣಾ ಸಂಘದ ವಾರ್ಷಿಕ ಮಹಾಸಭೆ
ಮುಂಡೂರು ಗ್ರಾಮದ ಕುಕ್ಕಿನಡ್ಕ ಸುಬ್ರಾಯ ದೇವಸ್ಥಾನದಲ್ಲಿ ಬೆಳಿಗ್ಗೆ ೮.೩೦ರಿಂದ ದೇವತಾ ಪ್ರಾರ್ಥನೆ, ಆಚಾರ್ಯವರಣ, ಗಣಪತಿಹೋಮ, ಕಲಶ ಪೂಜೆ, ಕಲಶಾಭಿಷೇಕ, ಆಶ್ಲೇಷಬಲಿ ಪೂಜೆ, ನಾಗತಂಬಿಲ, ದೈವಗಳಿಗೆ ತಂಬಿಲ, ಮಧ್ಯಾಹ್ನ ೧೨.೩೦ಕ್ಕೆ ಮಹಾಪೂಜೆ, ಸಂಜೆ ೬.೩೦ರಿಂದ ಶ್ರೀ ದೇವರ ಬಲಿ ಹೊರಟು ಉತ್ಸವ, ವಸಂತ ಕಟ್ಟೆಪೂಜೆ, ಬೆಡಿಮದ್ದು ಪ್ರದರ್ಶನ, ಶ್ರೀ ದೇವರ ದರ್ಶನ ಬಲಿ, ಬಟ್ಟಲು ಕಾಣಿಕೆ, ಉಳ್ಳಾಕುಲು ವ್ಯಾಘ್ರ ಚಾಮುಂಡಿ, ರಕ್ತೇಶ್ವರೀ ವರ್ಣಾರ ಪಂಜುರ್ಲಿ, ಬೊಟ್ಟಿಭೂತ, ಗುಳಿಗ ದೈವಗಳ ನೇಮೋತ್ಸವ
ಬೆದ್ರಾಳ ಶ್ರೀ ನಂದಿಕೇಶ್ವರ ಭಜನಾ ಮಂದಿರದಲ್ಲಿ ಬೆಳಿಗ್ಗೆ ೮ರಿಂದ ಗಣಹೋಮ, ೯ರಿಂದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ, ನಾಗ, ದೈವಗಳಿಗೆ ತಂಬಿಲ ಸೇವೆ, ಮಧ್ಯಾಹ್ನ ೧೨.೩೦ರಿಂದ ಸಾರ್ವಜನಿಕ ಅನ್ನಸಂತರ್ಪಣೆ, ರಾತ್ರಿ ೭ರಿಂದ ಕುಣಿತ ಭಜನೆ, ೧೦ರಿಂದ ಶ್ರೀ ರಕ್ತೇಶ್ವರೀ, ಶ್ರೀ ಕಲ್ಲುರ್ಟಿ, ಶ್ರೀ ಗುಳಿಗ ದೈವಗಳಿಗೆ ನೇಮ ನಡಾವಳಿ
ಪುತ್ತೂರು ಬನ್ನೂರು ಕೆ.ಕೆ. ಕಂಪೌಂಡ್ ಕೆಳಗಿನ ಆನೆಮಜಲುನಲ್ಲಿ ಬೆಳಿಗ್ಗೆ ಗಣಪತಿ ಹೋಮ, ರಾತ್ರಿ ೮ಕ್ಕೆ ಕಲ್ಲುರ್ಟಿ, ಪಂಜುರ್ಲಿ, ಗುಳಿಗ ದೈವಗಳ ನೇಮೋತ್ಸವ
ತೆಂಕಿಲ ಶ್ರೀ ಆದಿನಾಗಬ್ರಹ್ಮ ಮೊಗೇರ್ಕಳ, ಕೊರಗ ತನಿಯ ದೈವಸ್ಥಾನದಲ್ಲಿ ರಾತ್ರಿ ೭.೩೦ಕ್ಕೆ ಭಂಡಾರ ತೆಗೆಯುವುದು, ಅನ್ನಸಂತರ್ಪಣೆ, ೯.೩೦ಕ್ಕೆ ಮೊಗೇರ್ಕಳ ದೈವ ಗರಡಿ ಇಳಿಯುವುದು, ೧೨ಕ್ಕೆ ತನ್ನಿಮಾನಿಗ ದೈವ ಗರಡಿ ಇಳಿಯುವುದು
ಪಡಮಲೆ ವಿಶ್ವನಾಥ ಪೂಜಾರಿಯವರ ಪೂಜಾರಿಮೂಲೆ ಮನೆಯಲ್ಲಿ ಬೆಳಿಗ್ಗೆ ಶ್ರೀ ಗಣಪತಿ ಹೋಮ, ಶ್ರೀ ವೈದ್ಯನಾಥ ಸ್ವಾಮಿಗೆ ತಂಬಿಲ ಸೇವೆ, ಶ್ರೀ ಸತ್ಯನಾರಾಯಣ ಪೂಜೆ
ಚಿಕ್ಕಮುಡ್ನೂರು ಗ್ರಾಮದ ಜಿಡೆಕಲ್ಲು ಜಯರಾಮ ಪೂಜಾರಿಯವರ ಮನೆಯಲ್ಲಿ ಬೆಳಿಗ್ಗೆ ಗಣಪತಿ ಹೋಮ, ಶ್ರೀ ಸತ್ಯನಾರಾಯಣ ಪೂಜೆ, ಸಂಜೆ ೬ಕ್ಕೆ ಭಗವಾನ್ ನಾಮ ಸಂಕೀರ್ತನೆ
ನೆಲ್ಯಾಡಿ ಪಡುಬೆಟ್ಟು ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವ, ಮಧ್ಯಾಹ್ನ ಕಲಶಾಭಿಷೇಕ, ತಂಬಿಲ ಸೇವೆ, ಮಹಾಪೂಜೆ, ರಂಗಪೂಜೆ, ದೈವಗಳ ನೇಮೋತ್ಸವ