ಪುತ್ತೂರು: ಬುರೂಜ್ ಆಂಗ್ಲ ಮಾಧ್ಯಮ ಪ್ರೌಢಶಾಲೆ ರಝಾನಗರದ ಶಾಲಾ ಸ್ಕೌಟ್ಸ್ ಗೈಡ್ಸ್ ವಿದ್ಯಾರ್ಥಿಗಳಿಗೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಪ್ರಶಸ್ತಿ ನೀಡಿ ಗೌರವಿಸಿದರು.
2024-2025ನೇ ಸಾಲಿನಲ್ಲಿ ನಡೆದಂತಹ ತೃತೀಯ ಸೋಪಾನ ಪರೀಕ್ಷಾ ಶಿಬಿರದಲ್ಲಿ ಶಾಲಾ ವಿದ್ಯಾರ್ಥಿಗಳಾದ ಮನ್ಹ ಶೇಖ್, ತನ್ವಿಕಾ, ಫಾತಿಮಾ ವಫಾ, ರೇಷ್ಮಾ ಆರ್, ರಾಬಿಯ ಹಯಾ ಫಾತಿಮಾ, ಫಾತಿಮಾ ರಿಝಾ ಶೇಖ್, ಶಝಾ ಫಾತಿಮಾ, ಮೆಲಿಶಾ ಪಿಂಟೋ, ಮಹಮ್ಮದ್ ಅಯಾನ್, ಮೊಹಮ್ಮದ್ ಫಾರಿಶ್, ಮೊಹಮ್ಮದ್ ರಝಾನ್ ಶೇಖ್, ನವೀಶ್, ಶೇಖ್ ಮೊಹಮ್ಮದ್ ರುವೈಫ್, ಶಿಹಾದ್ ಸಿದ್ದೀಕ್, ನಮನ್ ಕುಮಾರ್ ಶೆಟ್ಟಿ, ಮುಹಮ್ಮದ್ ಸಲೀತ್, ಅಬ್ದುಲ್ ರಹೀಂ ಅಂಕಿತ್, ಧ್ಯಾನ್ ಶೆಟ್ಟಿ, ಫಾತಿಮತ್ ರಿಶಾನ, ಸ್ಪೂರ್ತಿ ಎಂ.ಜಾದರ್, ಮೊಹಮ್ಮದ್ ರಫಾನ್, ಪೂರ್ವಜ್ ಎನ್.ಶೆಟ್ಟಿ, ಪ್ರತೀಕಾ, ಸಮೃದ್ದ್ , ಮೊಹಮ್ಮದ್ ರಫಾನ್ ಪ್ರಶಸ್ತಿ ಪಡೆದರು. ಶಿಕ್ಷಕರಾದ ಜಯಶ್ರೀ ಸಾಲ್ಯಾನ್, ಚೇತನಾ, ಅನ್ನಪೂರ್ಣೇಶ್ವರಿ, ಖುರ್ಷಿದ್ ಮಾರ್ಗದರ್ಶನ ನೀಡಿರುತ್ತಾರೆ.
