ಪುತ್ತೂರು: ದೈಹಿಕ ಶಿಕ್ಷಣ ಶಿಕ್ಷಕರ ಸಂಘ ಪುತ್ತೂರು, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಪುತ್ತೂರು ಇದರ ಸಂಯುಕ್ತ ಆಶ್ರಯದಲ್ಲಿ ದೈಹಿಕ ಶಿಕ್ಷಣ ಶಿಕ್ಷಕರ ಕಾರ್ಯಾಗಾರ ಹಾಗೂ ಅಭಿನಂದನಾ ಕಾರ್ಯಕ್ರಮಗಳು ಮಾ.7ರಂದು ಸಂತ ವಿಕ್ಟರಣ ಬಾಲಿಕಾ ಪ್ರೌಢಶಾಲಾ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಮಾದೇ ದೇವುಸ್ ಚರ್ಚ್‌ನ ಸಹಾಯಕ ಧರ್ಮಗುರು ರೋಹಿತ್ ಅಜೇಯ್ ಮಸ್ಕರೇನಸ್ ಮಾತನಾಡಿ, ಶಿಕ್ಷಣ ಜೀವನದ ಅಂಗ. ಬುದ್ದಿ ಶಕ್ತಿಗೆ ಪಠ್ಯ ಶಿಕ್ಷಣವಾದರೆ ದೇಹ ಮತ್ತು ಹೃದಯ ಉತ್ತಮವಾಗಿರಲು ಕ್ರೀಡೆ ಆವಶ್ಯಕ. ದೈಹಿಕ ಶಿಕ್ಷಣ ಶಿಕ್ಷಕರು ಶಾಲೆಯಲ್ಲಿರುವ ಶಿಸ್ತಿನ ಸಿಪಾಯಿಗಳಾಗಿದ್ದು ವಿದ್ಯಾರ್ಥಿಗಳಿಗೆ ಜೀವನದ ಶಿಸ್ತಿನ ಪಾಠ ಕಳಿಸುವುದೇ ದೈಹಿಕ ಶಿಕ್ಷಣ ಶಿಕ್ಷಕರು ಎಂದರು. ದೈಹಿಕ ಶಿಕ್ಷಣ ಶಿಕ್ಷಕರಿಗೆ ಆಯೋಜಿಸಲಾಗಿರುವ ಕಾರ್ಯಾಗಾರವು ಇನ್ನಷ್ಟು ಅಭಿವೃದ್ಧಿಗೆ ಮಾಹಿತಿ ಪಡೆಯಲು ಸಹಕಾರಿ. ಶಿಕ್ಷಕರ ಜೀವನದ ಗುರಿ ತಲುಪು ಸಹಕಾರಿಯಾಗಲಿದೆ. ಸಂಘದ ಪ್ರಾರಂಭಿಸಿದ ಉದ್ದೇಶವನ್ನು ನೆನಪಿಸಿಕೊಳ್ಳಬೇಕು. ಸಂಘದ ಉದ್ದೇಶ ಅರಿತುಕೊಂಡು ಸಂಘದ ಜೊತೆ ಕೈಜೋಡಿಸಬೇಕು ಎಂದು ಅವರು ತಿಳಿಸಿದರು.
ಲೋಕೇಶ್ ಎಸ್.ಅರ್ ಮಾತನಾಡಿ, ಸಾಧನೆ ಎನ್ನುವುದು ಯಾರ ಸ್ವತ್ತಲ್ಲ. ಜೀವನದಲ್ಲಿ ನಿರ್ದಿಷ್ಠ ಗುರಿಯಿರಬೇಕು. ಅದನ್ನು ತಲುಪಲು ಕಠಿಣ ಪರಿಶ್ರಮವಿರಬೇಕು. ಶಿಕ್ಷಣದ ಕ್ರೀಡೆಯು ದೈಹಿಕ, ಮಾನಸಿಕ ಆರೋಗ್ಯಕ್ಕೆ ಸಹಕಾರಿಯಾಗಲಿದೆ. ಕಳೆದ ಸಾಲಿನ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಪುತ್ತೂರು ತಾಲೂಕು ದಾಖಲೆಯ ಸಮಗ್ರ ಚಾಂಪಿಯನ್ ಪಡೆದುಕೊಂಡಿದೆ. ಮುಂದಿನ ಬಾರಿ ಮತ್ತೆ ಸಾಧನೆ ಮಾಡಬೇಕಾಗಿದ್ದು ಈಗಿಂದಲೇ ವಿದ್ಯಾರ್ಥಿಗಳನ್ನು ತಯಾರುಗೊಳಿಸಬೇಕು ಎಂದರು.

ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷೆ ಲಿಲ್ಲಿ ಪಾಯಸ್ ಮಾತನಾಡಿ, ಶೈಕ್ಷಣಿಕವಾಗಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಗೌರವಿಸಲಾಗುತ್ತಿದೆ. ಆದರೆ ಕ್ರೀಡಾ ಕ್ಷೇತ್ರದಲ್ಲಿ ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಿದರೂ ಇಲಾಖೆಯಿಂದ ಗೌರವಿಸುವ ಕೆಲಸವಾಗುತ್ತಿಲ್ಲ. ಕ್ರೀಡೆಯಲ್ಲಿ ರಾಷ್ಟ್ರಮಟ್ಟದ ಸಾಧನೆ ಮಾಡುವುದು ಸಣ್ಣ ಕೆಲಸವಲ್ಲ. ಇದರಲ್ಲಿ ವಿದ್ಯಾರ್ಥಿಗಳ ಜೊತೆಗೆ ದೈಹಿಕ ಶಿಕ್ಷಣ ಕಠಿಣ ಪರಿಶ್ರಮವಿರುತ್ತದೆ. ಹೀಗಾಗಿ ಶೈಕ್ಷಣಿಕ ಸಾಧನೆಯ ಜೊತೆಗೆ ಕ್ರೀಡಾ ಕ್ಷೇತ್ರದ ಸಾಧಕರನ್ನು ಇಲಾಖೆಯಿಂದ ಸಮಾನಾಂತರವಾಗಿ ಗೌರವಿಸಬೇಕು ಎಂದರು.

ನರಿಮೊಗರು ಸಾಂದೀಪನಿ ಗ್ರಾಮೀಣ ವಿದ್ಯಾ ಸಂಸ್ಥೆಗಳ ಸಂಚಾಲಕ ಭಾಸ್ಕರ ಆಚಾರ್ ಹಿಂದಾರು ಮಾತನಾಡಿ, ಸಮಾಜಕ್ಕೆ ಶಿಸ್ತು ಬದ್ದವಾದ ಪ್ರಜೆಗಳ ತಯಾರಿಸುವ ಹೊಣೆ ದೈಹಿಕ ಶಿಕ್ಷಣ ಶಿಕ್ಷಕರದ್ದಾಗಿದೆ. ಮುತುವರ್ಜಿ ವಹಿಸಿ ಉತ್ತಮ ಪ್ರಜೆಗಳನ್ನು ತಯಾರುಗೊಳಿಸುವಲ್ಲಿ ಶಿಕ್ಷಕರ ಪಾತ್ರ ಪ್ರಮುಖವಾಗಿದ್ದರೂ ಶಿಕ್ಷಕರ ಭವನೆ ಹೇಳತೀರದು. ಸರಕಾರದ ಆದೇಶ ಪಾಲನೆಯಿಂದಾಗಿ ಪ್ರಾಮಾಣಿಕ ಸೇವೆ ನೀಡುವುದು ಅಸಾಧ್ಯವಾಗಿದ್ದು ಸಮಾಜ ಕಂಟಕರು ಹೆಚ್ಚಾಗುತ್ತಿದ್ದಾರೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಚಕ್ರಪಾಣಿ ಮಾತನಾಡಿ, ಸಂಘದಿಂದ ಪ್ರತಿ ವರ್ಷ ನಿವೃತ್ತ ಶಿಕ್ಷರನ್ನು ಹಾಗೂ ಕ್ರೀಡಾ ಕ್ಷೇತ್ರದ ಸಾಧಕರನ್ನು ಅಭಿನಂದಿಸಲಾಗುತ್ತಿದೆ. ಸಂಘದ ಎಲ್ಲ ಕಾರ್ಯಚಟುವಟಿಕೆಗಳಲ್ಲಿ ಎಲ್ಲರೂ ಸಹಕರಿಸುವಂತೆ ವಿನಂತಿಸಿದರು.
ಮುಖ್ಯ ಶಿಕ್ಷಕರ ಸಂಘ ಅಧ್ಯಕ್ಷ ವಸಂತ ಮೂಲ್ಯ, ಜಿಲ್ಲಾ ದೈಹಿಕ ಶಿಕ್ಷಕ ಸಂಘ ಕಾರ್ಯಾಧ್ಯಕ್ಷ ಮಾಮಚ್ಚನ್ ಮಾತನಾಡಿ, ದೈಹಿಕ ಶಿಕ್ಷಣ ಶಿಕ್ಷಕರು, ಶಿಕ್ಷಕರು ಪ್ರಸ್ತುತ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ತಿಳಿಸಿದರು.
ಸನ್ಮಾನ:
ದೈಹಿಕ ಶಿಕ್ಷಣ ಶಿಕ್ಷಕರಿಗೆ ಉತ್ತಮ ಪ್ರೋತ್ಸಾಹ ನೀಡುತ್ತಿರುವ ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್., ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕಕರು, ಮುಖ್ಯಗುರುಗಳೂ ಆಗಿರುವ ಉಪ್ಪಿನಂಗಡಿ ಸಂತ ಫಿಲೋಮಿನಾ ಹಿ.ಪ್ರಾ ಶಾಲಾ ಫಿಲೋಮಿನಾ ಪಾಯಸ್, ಅಥ್ಲೆಟಿಕ್‌ನಲ್ಲಿ ರಾಷ್ಟ್ರಮಟ್ಟದ ಕ್ರೀಡಾಪಟುಗಳನ್ನು ತರಬೇತುಗೊಳಿಸಿದ ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ದಾಮೋದರ, ಕಬಡ್ಡಿಯಲ್ಲಿ ರಾಷ್ಟ್ರ ಮಟ್ಟದ ತರಬೇತುದಾರ ಲಿಟ್ಲ್ ಫ್ಲವರ್ ಶಾಲಾ ಶಿಕ್ಷಕ ಬಾಲಕೃಷ್ಣ ರೈ ಪೊರ್ದಾಲ್, ಒಲಿಂಪಿಯಾಡ್ ಅಂತಾರಾಷ್ಟ್ರೀಯ ಪ್ರಶಸ್ತಿ ಪಡೆದ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಮುಖ್ಯಗುರು ಸತೀಶ್ ರೈ, ಪುತ್ತೂರು ತಾಲೂಕಿನ ಸಾಧಕ ಶಿಕ್ಷಕ ಪ್ರಶಸ್ರಿ ಪುರಸ್ಕೃತರಾದ ಶ್ರೀಲತಾ ರಾಜೇಶ್ ರೈ, ಕಬಡ್ಡಿಯಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ಲಿಟ್ಲ್ ಫ್ಲವರ್ ಶಾಲಾ ವಿದ್ಯಾರ್ಥಿಗಳಾದ ಜುವೆಹ್ನಾ ಡ್ಯಾಝಲ್ ಕುಟಿನ್ಹಾ, ಸನ್ನಿಧಿ, ಹಾರ್ದಿಕಾ, ಜೆನಿಟಾ ಸಿಂಧು ಪಸನ್ನ, ಸುಶ್ರಾವ್ಯ, ರಾಷ್ಟ್ರಮಟ್ಟದ ಹರ್ಡಲ್ಸ್‌ನಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಶ್ರೀವರ್ಣ, ಈಜು ಸ್ಪರ್ಧೆಯಲ್ಲಿ ಲಿಖಿತ್ ರಾಮಚಂದ್ರ, ಶಾಟ್‌ಪುಟ್‌ನಲ್ಲಿ ಪಟ್ಟೆ ಪ್ರತಿಭಾ ಪ್ರೌಢಶಾಲೆಯ ತನುಶ್ರೀ ರೈ, ಕಬಡ್ಡಿಯಲಿ ವಿವೇಕಾನಂದ ಕನ್ನಡ ಮಾಧ್ಯಮದ ಪುನೀತ್ ಹಾಗೂ ಈಜು ಸ್ಪರ್ಧೆಯಲ್ಲಿ ಸುದಾನದ ಅನಿಕಾ ಯು., ವಿಶೇಷ ಅಗತ್ಯವುಳ್ಳ ಮಕ್ಕಳ ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಾದ ಡಾ.ಕೆ.ಶಿವರಾಮ ಕಾರಂತ ಸರಕಾರಿ ಪ್ರೌಢಶಾಲೆಯ ರಕ್ಷಿತಾ, ಅಬ್ದುಲ್ ರಾಯೀಫ್, ಯಜ್ಞೇಶ್ ಡಾ.ಕೆ, ಶಾಂತಿನಗರ ಸರಕಾರಿ ಪ್ರೌಢಶಾಲೆಯ ಚೈತನ್ಯ, ಮಣಿಕ್ಕರ ಸರಕಾರಿ ಪ್ರೌಢಶಾಲೆಯ ಶಮಂತ್, ಉಪ್ಪಿನಂಗಡಿ ಸರಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದ ಮಹಮ್ಮದ್ ರಾಫಿ, ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಶ್ರೇಯರವರನ್ನು ಸನ್ಮಾನಿಸಲಾಯಿತು. ಜಿಲ್ಲಾ ಮಟ್ಟದ ಕ್ರೀಡಾ ಕೂಟದಲ್ಲಿ ಬಹುಮಾನ ಪಡೆದ ದೈಹಿಕ ಶಿಕ್ಷಣ ಶಿಕ್ಷರನ್ನು ಅಭಿನಂದಿಸಲಾಯಿತು.

ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷರು, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿಯಾಗಿರುವ ಚಕ್ರಪಾಣಿ ಅಧ್ಯಕ್ಷತೆ ವಹಿಸಿದ್ದರು. ಸಂತ ವಿಕ್ಟರಣ ಬಾಲಿಕಾ ಪ್ರೌಢಶಾಲಾ ಮುಖ್ಯಗುರು ರೋಸ್ಲಿನ್ ಲೋಬೋ, ಶಿಕ್ಷಣ ಸಮನ್ವಯಾಧಿಕಾರಿ ನವೀನ್ ಸ್ಟಿಫನ್ ವೇಗಸ್, ಗ್ರೇಡ್-2 ದೈಹಿಕ ಶಿಕ್ಷಣ ಶಿಕ್ಷಕರ ಜಿಲ್ಲಾ ಸಂಘದ ಕಾರ್ಯಾಧ್ಯಕ್ಷ ಸೀತಾರಾಮ ಗೌಡ, ಉಪಾಧ್ಯಕ್ಷ ಮೋನಪ್ಪ ಪಟ್ಟೆ, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಅಬ್ರಹಾಂ, ತಾಲೂಕು ಗ್ರೇಡ್-೨ ದೈಹಿಕ ಶಿಕ್ಷಣ ಶಿಕ್ಷರ ಸಂಘದ ಅಧ್ಯಕ್ಷ ಸುಧಾಕರ ರೈ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಂಘದ ಕಾರ್ಯದರ್ಶಿ ಸ್ಟ್ಯಾನಿ ಪ್ರವೀಣ್ ಸ್ವಾಗತಿಸಿದರು. ಕೋಶಾಧಿಕಾರಿ ವನಿತಾ ವಂದಿಸಿದರು. ಕುಂಬ್ರ ಕೆಪಿಎಸ್‌ನ ದೈಹಿಕ ಶಿಕ್ಷಣ ಶಿಕ್ಷಕ ಕೃಷ್ಣಪ್ರಸಾದ್ ಬೆಟ್ಟಂಪಾಡಿ ಕಾರ್ಯಕ್ರಮ ನಿರೂಪಿಸಿದರು.