ಸಂಸ್ಥೆಯ ಕೆಲಸ ಶ್ಲಾಘನೀಯ: ಸುಷ್ಮಾ ಜಿ.ಭಂಡಾರಿ
ಮನ ಮೆಚ್ಚುವ ಚಿನ್ನಾಭರಣಗಳ ಉತ್ತಮ ಸಂಗ್ರಹವಿದೆ: ಡಾ. ಶ್ವೇತಾ
ಆಲುಕ್ಕಾಸ್ ಗ್ರಾಹಕ ಸ್ನೇಹಿ ಮಳಿಗೆ: ಅರುಣಾ ಭಟ್
ಪುತ್ತೂರು: ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಿಳೆಯರನ್ನು ಅಂತರಾಷ್ಟ್ರೀಯ ಖ್ಯಾತಿಯ ಚಿನ್ನಾಭರಣ ಮಳಿಗೆ, ಪುತ್ತೂರಿನ ಕೆಎಸ್ ಆರ್.ಟಿ, ಸಿ. ಬಸ್ನಿಲ್ದಾಣದ ಕಮರ್ಷಿಯಲ್ ಕಾಂಪ್ಲೆಕ್ಸ್ನಲ್ಲಿರುವ ಜೋಸ್ ಅಲುಕ್ಕಾಸ್ ವತಿಯಿಂದ ಗೌರವಿಸಲಾಯಿತು.
ಅತಿಥಿಯಾಗಿ ಆಗಮಿಸಿದ ಸಂಪ್ಯ ಠಾಣಾ ಎಸ್ ಐ ಸುಷ್ಮಾ ಜಿ.ಭಂಡಾರಿ ರವರು ಮಾತನಾಡಿ, ಸ್ವಾತಂತ್ರ್ಯ ನಂತರ ದೇಶದಲ್ಲಿ ಬಹಳಷ್ಟು ಬದಲಾವಣೆಯಾಗಿದ್ದು ಮಹಿಳೆಯರನ್ನು ಕೀಳಾಗಿ ಕಾಣುವ ಹೋಗಿದೆ. ಮಹಿಳೆಯರು ಎಲ್ಲಾ ಕ್ಷೇತ್ರದಲ್ಲಿಯೂ ಮುಂದುವರಿಯುತ್ತಿದ್ದಾರೆ.
ಸರಕಾರ ಹಲವು ಕಾರ್ಯಕ್ರಮಗಳ ಮೂಲಕ ಮಹಿಳೆಯರ ಹಕ್ಕುಗಳ ರಕ್ಷಣೆ ಮಾಡುತ್ತಿದೆ. ಮಹಿಳೆಯರ ಸಾಧನೆಗೆ ಇನ್ನಷ್ಟು ಪ್ರೋತ್ಸಾಹ ನೀಡಬೇಕು ಎಂದ ಅವರು ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಜೋಸ್ ಅಲುಕ್ಕಾಸ್ ನಲ್ಲಿ ಮಹಿಳಾ ಸಾಧಕರನ್ನು ಗುರುತಿಸಿ ಗೌರವಿಸುವುದನ್ನು ಶ್ಲಾಘಿಸಿದರು.
ಸರಕಾರಿ ಆಸ್ಪತ್ರೆಯ ಡಾ.ಶ್ವೇತಾ ಮಾತನಾಡಿ, ಜೋಸ್ ಅಲುಕ್ಕಾಸ್ ಚಿನ್ನಾಭರಣ ಮಳಿಗೆಯು ನಮ್ಮ ಮೆಚ್ಚಿನ ಮಳಿಗೆಯಾಗಿದೆ. ಮಂಗಳೂರಿನ ಮಳಿಗೆಯಿಂದ ನಾನು ಪ್ರಥಮ ಬಾರಿಗೆ ಚಿನ್ನ ಖರೀದಿ ಮಾಡಿದ್ದೇನೆ. ಮಳಿಗೆಯಲ್ಲಿ ಹೊಸ ಹೊಸ ಮಾದರಿಯ ಮನ ಮೆಚ್ಚುವ ಚಿನ್ನಾಭರಣಗಳ ಉತ್ತಮ ಸಂಗ್ರಹವಿದೆ. ಇನ್ನಷ್ಟು ಮಳಿಗೆಗಳು ಪ್ರಾರಂಭವಾಗಲಿ ಎಂದರು.
ದರ್ಬೆ ಉಷಾ ಮೆಡಿಕಲ್ ಮ್ಹಾಲಕಿ ಅರುಣಾ ಭಟ್ ಮಾತನಾಡಿ, ಚಿನ್ನಾಭರಣಗಳ ಖರೀದಿಗೆ ಜೋಸ್ ಅಲುಕ್ಕಾಸ್ ನಲ್ಲಿ ಉತ್ತಮ ಅವಕಾಶಗಳಿದ್ದು ದೂರದ ಮಂಗಳೂರಿಗೆ ಹೋಗಬೇಕಾಗಿಲ್ಲ. ಗ್ರಾಹಕ ಸ್ನೇಹಿ ಮಳಿಗೆಯಾಗಿರುವ ಅಲುಕ್ಕಾಸ್ ನಲ್ಲಿ ಉತ್ತಮ ರಿಯಾಯಿತಿ ನೀಡುವುದರ ಜೊತೆಗೆ ಸಿಬ್ಬಂದಿಗಳಿಂದ ಗ್ರಾಹಕರಿಗೆ ಉತ್ತಮ ಸೇವೆ ದೊರೆಯುತ್ತಿದೆ ಎಂದರು.
ಪುತ್ತೂರು ಶಾಖಾ ವ್ಯವಸ್ಥಾಪಕರಾದ ರತೀಶ್ ಸಿ.ಪಿ. ಅತಿಥಿಗಳನ್ನು ಸನ್ಮಾನಿಸಿ, ಗೌರವಿಸಿದರು. ಸಿಬ್ಬಂದಿ ರಮ್ಯ ಸ್ವಾಗತಿಸಿ, ವಂದಿಸಿದರು.