ಕೆಯ್ಯೂರು: ಅಂತರ್ರಾಷ್ಟ್ರೀಯ ಮಹಿಳಾ ದಿನಾಚರಣೆ

0

ಕೆಯ್ಯೂರು: ಅಂತರ್ರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ, ವಿಧಾತ್ರಿ ಮಹಿಳಾ ಮಂಡಳಿ ಕೆಯ್ಯೂರು ಇದರ ವತಿಯಿಂದ ಮಹಿಳಾ ದಿನವನ್ನು ಆಚರಿಸಲಾಯಿತು.

ಮಂಡಳಿಯ ಸದಸ್ಯರು ಮತ್ತು ಪಾಲ್ಗೊಂಡ ಮಹಿಳಾ ಮಣಿಯರು ಮತ್ತು ಮಕ್ಕಳು ಒಟ್ಟು ಸೇರಿ ಹಾಡು,ಮುಂತಾದ ಮನರಂಜನಾ ಕಾರ್ಯಕ್ರಮವನ್ನು
ಹಮ್ಮಿಕೊಂಡಿದ್ದರು. ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಕೂಡಾ ಭಾಗವಹಿಸಿದ್ದರು. ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷರಾದ ಭವಾನಿ ಚಿದಾನಂದ, ಗ್ರಾಮ ಪಂಚಾಯತ್ ಸದಸ್ಯರಾದ ಜಯಂತಿ ಎಸ್ ಭಂಡಾರಿ, ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಸುಮಿತ್ರಾ ದಿವಾಕರ, ಸದಸ್ಯರಾದ ಸುಭಾಷಿನಿ ಸಣಂಗಳ, ಶಿಕ್ಷಕಿಯರಾದ ಸೌಮ್ಯ ರೈ, ಅರ್ಚನಾ ರೈ, ಜ್ಯೋತಿ, ದೃತಿ ರೈ, ಹರ್ಷಿತಾ, ಕಾವ್ಯ ರೈ, ಹಸ್ತಾಕ್ಷಿ, ವಿ.ಎಲ್.ಎ ರಶ್ಮಿತ ಮತ್ತು ಸದಸ್ಯೆಯರಾದ ಲಾವಣ್ಯ ರೈ, ಸಂಗೀತ, ಚಿತ್ರ ರೈ ಸಣಂಗಳ ,ಲತಾ,ರೂಪ ರೈ, ಮೋಹಿನಿ ರೈ ಮೊದಲಾದವರು ಭಾಗವಹಿಸಿದ್ದರು.

ಭವಾನಿ ಚಿದಾನಂದರವರು ಮತ್ತು ರೂಪ ರೈ ಯವರು ಮಹಿಳಾ ದಿನದ ಮಹತ್ವನ್ನು ವಿವರಿಸಿದರು. ದೃತಿ ರೈ ಕಾರ್ಯಕ್ರಮ ನಿರೂಪಿಸಿ,ಅರ್ಚನಾ ರೈ ಸ್ವಾಗತಿಸಿದರು ಮತ್ತು ಜ್ಯೋತಿ ವಂದನಾರ್ಪಣೆಗೈದರು .

LEAVE A REPLY

Please enter your comment!
Please enter your name here