ಯುವಕರಿಂದ ಸಮಾಜಮುಖಿ ಕೆಲಸ ಕಾರ್ಯಗಳು ನಡೆದಾಗ ಯಶಸ್ಸು ಕಾಣಲು ಸಾಧ್ಯ: ಡಾ. ಸೀತಾರಾಮ ಭಟ್
ಕೆಯ್ಯೂರು: ಷಣ್ಮುಖ ಪ್ರೆಂಡ್ಸ್ ಪಾಂಬಾರು ವತಿಯಿಂದ ರೋಟರಿ ಕ್ಯಾಂಪ್ಕೋ ಬ್ಲಡ್ ಬ್ಯಾಂಕ್ ಪುತ್ತೂರು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರ ಕೊಳ್ತಿಗೆ ಇವರ ಸಹಯೋಗದಲ್ಲಿ ರಕ್ತದಾನ ಶಿಬಿರ, ರಕ್ತದೊತ್ತಡ, ಮಧುಮೇಹ ತಪಾಸಣೆ ಮತ್ತು ಸನ್ಮಾನ ಕಾರ್ಯಕ್ರಮವು ಗ್ರಾಮ ಪಂಚಾಯತ್ ಸಮುದಾಯ ಭವನ ಪೆರ್ಲಂಪಾಡಿಯಲ್ಲಿ ಮಾ.9ರಂದು ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಸಂಪನ್ಮೂಲ ವ್ಯಕ್ತಿ ರೋಟರಿ ಕ್ಯಾಂಪ್ಕೋ ಬ್ಲಡ್ ಬ್ಯಾಂಕ್ ಪುತ್ತೂರು ಡಾ. ಸೀತಾರಾಮ್ ಭಟ್ ದೀಪ ಪ್ರಜ್ವಲಿಸುವ ಮೂಲಕ ಉದ್ಘಾಟಿಸಿ, ರಕ್ತದಾನ ಮಾಡುವುದು ಪುಣ್ಯದ ಕೆಲಸ, ಯುವಕರ ಒಗ್ಗಟಿನ ಪರಿಶ್ರಮದಿಂದ ಗ್ರಾಮೀಣ ಪ್ರದೇಶಗಳಲ್ಲಿ ಸಮಜಮುಖಿ ಕಾರ್ಯಗಳು ನಡೆದಾಗ ಯಶಸ್ಸು ಕಾಣಲು ಸಾದ್ಯ. ಜಾತಿ, ಮತ, ಬೇದವಿಲ್ಲದೆ ಎಲ್ಲರೂ ಸೌಹರ್ದತೆಯಿಂದ ಮುಂದೆ ಬಂದಾಗ ಸಂಘಟನೆ ಬೆಳೆಯಲು ಸಾದ್ಯ ಎಂದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಷಣ್ಮುಖ ಫ್ರೆಂಡ್ಸ್ ಪಾಂಬಾರು ಗೌರವಾಧ್ಯಕ್ಷ ಜಯ ಪ್ರವೀಣ ಪಾಂಬಾರು ವಹಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ ಕೊಳ್ತಿಗೆ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಪ್ರಮೋದ್ ಕೆ ಎಸ್, ಪ್ರಾಥಮಿಕ ಆರೋಗ್ಯ ಕೇಂದ್ರ ಕೊಳ್ತಿಗೆ ವೈದ್ಯಾಧಿಕಾರಿ ಡಾ. ಅಮಿತ್ ಕುಮಾರ್ ಟಿ, ಪುತ್ತೂರು ಒಕ್ಕಲಿಗ ಗೌಡ ಸಮುದಾಯ ಸಂಘ ನಿರ್ದೇಶಕ ಸತೀಶ್ ಪಾಂಬಾರು, ಷಣ್ಮುಖ ಫ್ರೆಂಡ್ಸ್ ಪಾಂಬಾರು ಅಧ್ಯಕ್ಷ ಚಿನ್ನಪ್ಪ ಕೆರೆಮೂಲೆ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಬೆಂಗಳೂರು ಹೈಕೋರ್ಟ್ ವಕೀಲರಾದ ಮೋಹಿತ್ ಕುಮಾರ್, ದೈವನರ್ತಕ ರಮೇಶ್ ಅಜಿಲ, ಗಾಯಕ ರವಿ ಪಾಂಬಾರು ಇವರಿಗೆ ಶಾಲು, ಸ್ಮರಣಿಕೆ, ನೀಡಿ ಸನ್ಮಾನಿಸಲಾಯಿತು.

ವೈದ್ಯಕೀಯ ಸಿಬ್ಬಂದಿಗಳಿಗೆ, ಮತ್ತು ಆಶಾ ಕಾರ್ಯಕರ್ತರಿಗೆ ಸ್ಮರಣಕ್ಕೆ ನೀಡಿ ಗೌರವಿಸಲಾಯಿತು ಸುಮಾರು 33 ಯೂನಿಟ್ ರಕ್ತ ಸಂಗ್ರಹಗೊಂಡು ಇಂದಿನ ರಕ್ತದಾನ ಶಿಬಿರ ಯಶಸ್ಸಿಗೊಳ್ಳಲು ಸಹಕಾರಿಯಾಯಿತು. ದೀಕ್ಷಿತಾ .ಪಿ,ವೀಕ್ಷಾ ಪಿ, ಪ್ರಾರ್ಥನೆಯೊಂದಿಗೆ ಷಣ್ಮುಖ ಫ್ರೆಂಡ್ಸ್ ಪಾಂಬಾರು ಸದಸ್ಯರಾದ ಯಕ್ಷೀತ್.ಪಿ, ಸ್ವಾಗತಿಸಿ, ಸ್ವಾತೀಕ್ ಜೆ.ಪಿ ವಂದಿಸಿ, ಷಣ್ಮುಖ ಫ್ರೆಂಡ್ಸ್ ಪಾಂಬಾರು ಪ್ರಧಾನ ಕಾರ್ಯದರ್ಶಿ ಕಿಶೋರ್ ಕುಮಾರ್. ಎಂ, ಪಾಂಬಾರು ಕಾರ್ಯಕ್ರಮ ನಿರೂಪಿಸಿದರು. ಷಣ್ಮುಖ ಫ್ರೆಂಡ್ಸ್ ಪಾಂಬಾರು ಇದರ ಗೌರವ ಸಲಹೆಗಾರರು ಸರ್ವ ಸದಸ್ಯರು ಸಹಕರಿಸಿದರು.