ಹೊಸಮಜಲು: ಮಕ್ಕಳ ಕುಣಿತ ಭಜನೆಯ ಭಜನಾ ಕಮ್ಮಟ ಉದ್ಘಾಟನೆ

0

ನೆಲ್ಯಾಡಿ: ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ತು ಕಡಬ ತಾಲೂಕು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಧರ್ಮಶ್ರೀ ಮಹಿಳಾ ಭಜನಾ ಮಂಡಳಿ ಕೌಕ್ರಾಡಿ ಇವರ ಸಂಯುಕ್ತ ಆಶ್ರಯದಲ್ಲಿ ಮಕ್ಕಳ ಕುಣಿತ ಭಜನೆಯ 27ನೇ ಭಜನಾ ಕಮ್ಮಟ ತರಬೇತಿಯು ಹೊಸಮಜಲು ಮುಂದುವರಿಕಾ ಕೇಂದ್ರದಲ್ಲಿ ಉದ್ಘಾಟನೆಗೊಂಡಿತು.

ಕಡಬ ತಾಲೂಕಿನ ಭಜನಾ ಪರಿಷತ್ ಅಧ್ಯಕ್ಷ ಬಿಳಿನೆಲೆ ಶ್ರೀ ಗೋಪಾಲಕೃಷ್ಣ ಭಜನಾ ಮಂಡಳಿ ಕಾರ್ಯದರ್ಶಿ ಸುಂದರ ಗೌಡ ಬಿಳಿನೆಲೆ ಉದ್ಘಾಟಿಸಿ ಭಜನೆಯ ಮಹತ್ವ ತಿಳಿಸಿದರು. ಅತಿಥಿಯಾಗಿದ್ದ ನೆಲ್ಯಾಡಿ ವಲಯ ಮೇಲ್ವಿಚಾರಕ ಆನಂದ ಡಿ.ಬಿ., ಮಾತನಾಡಿ, ಭಜನೆಯಲ್ಲಿ ತೊಡಗಿಸಿಕೊಂಡರೆ ಬೇರೆ ಕೆಟ್ಟ ಆಲೋಚನೆಗಳು ಬರಲು ಸಾಧ್ಯವಿಲ್ಲ ಎಂದು ಹೇಳಿದರು. ಶೌರ್ಯ ವಿಪತ್ತು ತಂಡದ ಪ್ರತಿನಿಧಿ ರಮೇಶ್ ಬಾಣಜಾಲು ಮಾತನಾಡಿ, ಇನ್ನಷ್ಟು ಭಜನಾ ತಂಡಗಳು ರಚನೆಯಾಗಲಿ. ಮಕ್ಕಳ ಭವಿಷ್ಯ ಉಜ್ವಲವಾಗಲಿ ಎಂದರು. ಕಟ್ಟೆಮಜಲು ಧೂಮಾವತಿ ರಕ್ತೇಶ್ವರಿ ಮತ್ತು ಪರಿವಾರ ದೈವಗಳ ಆಡಳಿತ ಸಮಿತಿಯ ಅಧ್ಯಕ್ಷ ಸದಾನಂದ ಗೌಡ ಕುಂಡಡ್ಕ ಮಾತನಾಡಿ, ಭಜನಾ ತಂಡವು ಸದಾ ಹರಿಯುವ ನೀರಾಗಲಿ ಎಂದು ಹೇಳಿ ಶುಭಹಾರೈಸಿದರು. ಒಕ್ಕೂಟದ ಅಧ್ಯಕ್ಷ ಬಾಲಕೃಷ್ಣ, ಧರ್ಮಶ್ರೀ ಮಹಿಳಾ ಭಜನಾ ಮಂಡಳಿಯ ಅಧ್ಯಕ್ಷೆ ಭಾರತಿ ಶುಭಹಾರೈಸಿದರು.

ತರಬೇತುದಾರ ತಿರುಮಲೇಶ್ವರ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮಕ್ಕಳು ಗುರುಗಳಿಗೆ ಗುರುದಕ್ಷಿಣೆ ನೀಡಿ ಆಶೀರ್ವಾದ ಪಡೆದುಕೊಂಡರು. ಧರ್ಮಶ್ರೀ ಮಹಿಳಾ ಭಜನಾ ಮಂಡಳಿ ಸದಸ್ಯೆ ನವ್ಯಪ್ರಸಾದ್ ನಿರೂಪಿಸಿದರು. ಕೋಶಾಧಿಕಾರಿ ಹೇಮಾ ವಿ., ಸ್ವಾಗತಿಸಿದರು. ಕಾರ್ಯದರ್ಶಿ ವಸಂತಿ ವಂದಿಸಿದರು. ಕಾರ್ಯಕ್ರಮದಲ್ಲಿ ಕೌಕ್ರಾಡಿ ಒಕ್ಕೂಟದ ಸೇವಾ ಪ್ರತಿನಿಧಿ ನಮಿತಾ ಶೆಟ್ಟಿ, ಭಜನಾರ್ಥಿಗಳು, ಪೋಷಕರು, ಧರ್ಮಶ್ರೀ ಮಹಿಳಾ ಭಜನಾ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here