ಕಾಣಿಯೂರು: ಇಸ್ಲಾಮಿಕ್ ಎಜ್ಯಕೇಶನಲ್ ಬೋರ್ಡ್ ಆಫ್ ಇಂಡಿಯಾ 2024-25 ಸಾಲಿನ 5 ಮತ್ತು 7 ಹಾಗೂ 10ನೇ ತರಗತಿ ಪಬ್ಲಿಕ್ ಪರೀಕ್ಷೆಯಲ್ಲಿ ಬೆಳಂದೂರು ಪಳ್ಳತ್ತಾರು ತಖ್ವಿಯತುಲ್ ಇಸ್ಲಾಂ ಸೆಕೆಂಡರಿ ಮದ್ರಸಕ್ಕೆ ಸತತ 11 ನೇ ಭಾರಿ ಶೇ.100 ಫಲಿತಾಂಶ ಸಾಧನೆ ಮಾಡಿದ್ದು, 5 ನೇ ತರಗತಿಯಲ್ಲಿ ಫಾತಿಮತ್ ಸಹ್ನ ಬನಾರಿ (595) ಅಂಕ ಪಡೆದು ಪ್ರಥಮ ಸ್ಥಾನ ಶಝಾ ಫಾತಿಮಾ ಪಾರೆ (588) ಅಂಕ ಪಡೆದು ದ್ವಿತೀಯ ಸ್ಥಾನ ಎಲ್ಲಾ ವಿಷಯದಲ್ಲೂ A+ ಪಡೆದ ಅಬ್ದುಲ್ ರಾಝಿಕ್ ಕೂಂಕ್ಯ (572) ಜಸೀಲ ಪುಲಿತ್ತಡಿ (587) ಫಾತಿಮತ್ ಜೌಹರ (581) ಟಾಪ್ ಗ್ರೇಡ್ ನಲ್ಲಿ ಪಾಸಾಗಿದ್ದಾರೆ.7ನೇ ತರಗತಿಯ ಸಲ್ವ ಕೂಂಕ್ಯ (583) ಅಂಕ ಪಡೆದು ಪ್ರಥಮ ಸ್ಥಾನ ಆಇಶತ್ ರಿಶಾ ಪಟ್ಟೆ (582) ಅಂಕ ಪಡೆದು ದ್ವಿತೀಯ ಸ್ಥಾನ ಪಡೆದು ಎಲ್ಲಾ ವಿಷಯದಲ್ಲೂ A+ ಪಡೆದ ಆಮಿನತ್ ಇಹ್ಸಾನ ಕೊಡಂಕೀರಿ (581) ಟಾಪ್ ಗ್ರೇಡ್ ನಲ್ಲಿ ತೇರ್ಗಡೆ ಹೊಂದಿದ್ದಾರೆ.10 ನೇ ತರಗತಿಯಲ್ಲಿ ಮುಹಮ್ಮದ್ ರಾಶಿದ್ ಪುಲಿತ್ತಡಿ ,ಕುಬ್ರಾ ಪಟ್ಟೆ,ಫಾತಿಮತ್ ಇರ್ಫಾನ ಕೊಡಂಕೀರಿ 400 ರಲ್ಲಿ 400 ಅಂಕ ಪಡೆದು ಪ್ರಥಮ ಸ್ಥಾನ ಅಸ್ನ ಗುಂಡಿನಾರು (399) ದ್ವಿತೀಯ ಸ್ಥಾನ ಪಡೆದು ಎಲ್ಲಾ ವಿಷಯದಲ್ಲೂ A++ ಪಡೆದ ಮುಹಮ್ಮದ್ ರಿಝ್ವಾನ್ ಪಳ್ಳತ್ತಾರು (392) ಹನ್ನತ್ ಗುಂಡಿನಾರು (395) ಶಾಹಿನ ಬನಾರಿ (392) A+ ಪಡೆದ ರಸೀನ ನಸ್ರೀಮ (390) ಅಂಕ ಪಡೆದು ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ.