ಕೆಯ್ಯೂರು: ಕರ್ಣಾಟಕ ಬ್ಯಾಂಕಿನಿಂದ ರೂ.15 ಲಕ್ಷದ ಕೆಬಿಎಲ್ ಸುರಕ್ಷಾ ವಿಮೆ ಮೊತ್ತ ಫಲಾನುಭವಿಗಳಿಗೆ ವಿತರಣೆ

0

ಕೆಯ್ಯೂರು : ಕೆಯ್ಯೂರು ಗ್ರಾಮದ ಕರ್ಣಾಟಕ ಬ್ಯಾಂಕ್ ಶಾಖೆ 7 ವರ್ಷ ಪೂರೈಸಿ 8ನೇ ವರ್ಷಕ್ಕೆ ಪಾದಾರ್ಪಣೆ ಮತ್ತು ಕೆಬಿಎಲ್ ಸುರಕ್ಷಾ ವಿಮೆ ಮೊತ್ತದ ವಿತರಣಾ ಕಾರ್ಯಕ್ರಮದ ಉದ್ಘಾಟನೆಯನ್ನು ಕೆಯ್ಯೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶರತ್ ಕುಮಾರ್ ಅವರು ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಇದೆ ಸಂದರ್ಭದಲ್ಲಿ ಎ ಕೆ ಜಯರಾಮ್ ಹಾಗೂ ಇತರ ಊರಿನ ಪ್ರಮುಖ ಗಣ್ಯರು ಬ್ಯಾಂಕಿನ ಸಿಬ್ಬಂದಿಯ ಸೇವೆಯನ್ನು ಶ್ಲಾಘಿಸಿದರು. ಈ ಸಂದರ್ಭದಲ್ಲಿ ಅಪಘಾತದಲ್ಲಿ ಮೃತಪಟ್ಟ ಕೆಯ್ಯೂರು ಗ್ರಾಮದ ಸತ್ಯನಾರಾಯಣ ರೈ ಮತ್ತು ಮಂಜುನಾಥ ಅವರ ಕುಟುಂಬಕ್ಕೆ ಕರ್ಣಾಟಕ ಬ್ಯಾಂಕ್ ನ ಕೆ ಬಿ ಎಲ್ ಸುರಕ್ಷಾ ವಿಮಾ ಮೊತ್ತವನ್ನು 10 ಲಕ್ಷದ 15 ಸಾವಿರ ಹಾಗೂ 5 ಲಕ್ಷ ರೂಗಳ ಚೆಕ್ಕನ್ನು ಬ್ಯಾಂಕ್ ಮ್ಯಾನೇಜರ್ ಸುಬ್ರಹ್ಮಣ್ಯ ಎಂ ಮತ್ತು ಯುನಿವರ್ಸಲ್ ಸೊಂಪೂ ಜನರಲ್ ಇನ್ಸೂರೆನ್ಸ್ ಕಂಪನಿ ಲಿಮಿಟೆಡ್ ನ್ಯಾಷನಲ್ ಹೆಡ್ ನಿವೇದಿತಾ ಹಸ್ತಾಂತರಿಸಿ ಬ್ಯಾಂಕಿನ ಇತರೆ ವಿಮೆಗಳ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಪುತ್ತೂರು ಶಾಖೆಯ ಸೀನಿಯರ್ ಮ್ಯಾನೇಜರ್ ಶ್ರೀಶಾ, ಟಿಪಿಪಿ ಹೆಡ್ ಶಿವಶಂಕರ್ ಭಟ್ ಬ್ಯಾಂಕಿನ ಸಿಬ್ಬಂದಿಗಳು ಹಾಗೂ ಊರ ಗ್ರಾಮಸ್ಥರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here