ಕಾರ್ಮಾರು ಶ್ರೀ ಮಹಾವಿಷ್ಣು ದೇವರ ಬ್ರಹ್ಮಕಲಶದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವೈಷ್ಣವಿ ನಾಟ್ಯಾಲಯ (ರಿ) ಪುತ್ತೂರು ವಿದ್ಯಾರ್ಥಿಗಳಿಂದ ಭರತನಾಟ್ಯ ಹಾಗೂ ನೃತ್ಯರೂಪಕ ಶ್ರೀರಾಮ ಪುನರಾಗಮನ ನಡೆಯಿತು.
ನೃತ್ಯ ರೂಪಕದ ಸಾಹಿತ್ಯವನ್ನು ಡಾ. ರಾಜೇಶ್ ಬೆಜ್ಜಂಗಳ ರಚಿಸಿದ್ದು ನಟವಾಂಗದಲ್ಲಿ ಸಹಕರಿಸಿದ ವಿದುಷಿ ಯೋಗೀಶ್ವರಿ ಜಯಪ್ರಕಾಶ್ ರೂಪಕದ ನೃತ್ಯ ನಿರ್ದೇಶನವನ್ನು ಮಾಡಿದ್ದಾರೆ. ಹಾಡುಗಾರಿಕೆಯಲ್ಲಿ ವಿದ್ವಾನ್ ವೆಳ್ಳಿಕ್ಕೋತ್ ವಿಷ್ಣು ಭಟ್, ವಸಂತ ಕುಮಾರ್ ಗೋಸಾಡ, ಸವಿತಾ ಅವಿನಾಶ್ ಪುತ್ತೂರು ಮೃದಂಗದಲ್ಲಿ ಗಿತೇಶ್ ಕುಮಾರ್ ನೀಲೇಶ್ವರ, ಕೊಳಲಿನಲ್ಲಿ ರಾಜಗೋಪಾಲ್ ನೀಲೇಶ್ವರ, ಕೀಬೋರ್ಡ್ ನಲ್ಲಿ ಬಾಬಣ್ಣ ಪುತ್ತೂರು ರಿದಂನಲ್ಲಿ ರವಿಕಾಂತ್ ಮಾನ್ಯ ಸಹಕರಿಸಿದರು. ಪ್ರಸಾದನದಲ್ಲಿ ಭಾವನಾ ಕಲಾ ಆರ್ಟ್ಸ್ ಪುತ್ತೂರು ಸಹಕರಿಸಿದರು.