ಮೊಟ್ಟೆತ್ತಡ್ಕ ಗೇರು ಸಂಶೋಧನಾ ನಿರ್ದೇಶನಾಲಯದಲ್ಲಿ ಗೇರು ದಿನಾಚರಣೆ

0

ಪುತ್ತೂರು: ಮೊಟ್ಟೆತ್ತಡ್ಕ ಗೇರು ಸಂಶೋಧನಾ ನಿರ್ದೇಶನಾಲಯದಲ್ಲಿ ಗೇರು ದಿನಾಚರಣೆ-2025 ಕಾರ್ಯಕ್ರಮ ಆಚರಿಸಲಾಯಿತು.


ಮುಖ್ಯ ಅತಿಥಿಯಾಗಿ ಭಾಗವಹಿಸಿದ ಭೋಪಾಲ್ ಸೆಂಟ್ರಲ್ ಇನ್‌ಸ್ಟಿಟ್ಯೂಟ್ ಆಫ್ ಅಗ್ರಿಕಲ್ಚೂರಲ್ ಇಂಜಿನಿಯರಿಂಗ್‌ನ ನಿರ್ದೇಶಕ ಡಾ.ಸಿ.ಆರ್. ಮೆಹತಾ ಮಾತನಾಡಿ, ಬೆಳೆಯುತ್ತಿರುವ ಆಧುನಿಕ ತಂತ್ರಜ್ಞಾನದ ಮೂಲಕ ಕೃಷಿಯಲ್ಲಿ ಯಂತ್ರೋಪಕರಣಗಳ ಬಳಸುವಿಕೆಯು ಮಹತ್ವವನ್ನು ಪಡೆದುಕೊಂಡಿದೆ. ಗೇರು ಕೃಷಿಯಲ್ಲಿಯೂ ಕೂಡ ಇದರ ಬಳಕೆ ಪ್ರಮುಖವಾಗಿದೆ. ಗೇರು ಗಿಡಗಳ ನರ್ಸರಿ, ಗೇರು ಹಣ್ಣಿನ ಕೊಯ್ಲು ಮಾಡಲು ಹಾಗೂ ಕೊಯ್ಲೋತ್ತರ ಕ್ಷೇತ್ರಗಳಲ್ಲಿಯೂ ತಂತ್ರಜ್ಞಾನಗಳನ್ನು ಅಭಿವೃದ್ಧಿ ಪಡಿಸಲು ಸಲಹೆ ನೀಡಿದರು.

ಬೆಂಗಳೂರು ATARI ನಿರ್ದೇಶಕ ಡಾ. ವೆಂಕಟಸುಬ್ರಹ್ಮಣ್ಯನ್ ಮಾತನಾಡಿ ಕೃಷಿಯಲ್ಲಿ ತಂತ್ರಜ್ಞಾನಗಳ ಬಳಕೆಯ ಬಗ್ಗೆ ಮಾಹಿತಿ ನೀಡಿ ಯಂತ್ರೋಪಕರಣಗಳ ಬಳಕೆಯಿಂದ ಕೃಷಿಯಲ್ಲಿ ಉತ್ತಮ ಲಾಭ ಗಳಿಸಬಹುದೆಂದು ತಿಳಿಸಿದರು. ಕೃಷಿ ಉತ್ಪನ್ನಗಳ ಗುಣಮಟ್ಟ ಹಾಗೂ ಉತ್ಪಾದಕತೆ ಹೆಚ್ಚಿಸಲು ಯಂತ್ರೋಪಕರಣಗಳ ಬಳಕೆ ಅತಿ ಮುಖ್ಯವಾಗಿರುತ್ತದೆ. ಯಂತ್ರೋಪಕರಣಗಳನ್ನು ಬಳಸುವುದರಿಂದ ಕೃಷಿ ಉದ್ಯಮದಲ್ಲಿಯೂ ಕೂಡ ಹೆಚ್ಚಿನ ಲಾಭ ಗಳಿಸಬಹುದೆಂದು ಸೂಚಿಸಿದರು.

New Delhi Agrinnovate India Ltd CEO ಡಾ. ಪ್ರವೀಣ್ ಮಲ್ಲಿಕ್ ಮಾತನಾಡಿ ತಂತ್ರಜ್ಞಾನಗಳ ಬಳಕೆಯಿಂದ ರೈತನ ಆದಾಯ ದ್ವಿಗುಣಗೊಳಿಸಬಹುದೆಂದು ಮಾಹಿತಿ ನೀಡಿ ಗೇರು ದಿನಾಚರಣೆಯು ಒಂದು ದಿನದ ಕಾರ್ಯಕ್ರಮವಾದರೂ ಕೂಡ ಸಂಸ್ಥೆಯು ಇತರ ದಿನಗಳಲ್ಲಿ ತೆರೆದ್ದಿದ್ದು ರೈತರು ಯಾವುದೇ ಸಮಯದಲ್ಲಿಯೂ ಬಂದು ವಿಜ್ಞಾನಿಗಳ ಸಲಹೆ ಪಡೆಯಬಹುದೆಂದು ತಿಳಿಸಿದರು.


ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ನಿರ್ದೇಶಕ ಡಾ. ದಿನಕರ ಅಡಿಗ ಮಾತನಾಡಿ ಗೇರು ಕೃಷಿಯಲ್ಲಿ ಯಂತ್ರೋಪಕರಣಗಳ ಬಗ್ಗೆ ರೈತರಿಗೆ ಮಾಹಿತಿ ನೀಡಿ ಸಾಂಪ್ರದಾಯಿಕ ಪದ್ಧತಿಯಲ್ಲಿ ಗೇರು ಹಣ್ಣಿನಿಂದ ಬೀಜ ಬೇರ್ಪಡಿಸಲು ಶೇ.40 ಖರ್ಚು ಬರುತ್ತದೆ. ಗೇರು ಕೃಷಿಯಲ್ಲಿ ನೀರಿನ ಬಳಕೆಯನ್ನು ಶೇ.80ರಿಂದ 90ರಷ್ಟು ಹಾಗೂ ಕೀಟನಾಶಕ ಸಿಂಪಡಣೆಯನ್ನು ಶೇ.40ರಿಂದ 50ರಷ್ಟು ಕಡಿಮೆಗೊಳಿಸಬಹುದೆಂದು ತಿಳಿಸಿದರು. ಗೇರು ಮೊಳಕೆಯಲ್ಲಿರುವ ಪೋಷಕಾಂಶಗಳು ಹಾಗೂ ನಾರಿನಾಂಶಗಳ ಉಪಯುಕ್ತತೆಯ ಬಗ್ಗೆ ತಿಳಿಸಿದರು. ಸಂಸ್ಥೆಯ ವಿಜ್ಞಾನಿ ಡಾ. ಮಂಜುನಾಥರವರು ಸಂಸ್ಥೆಯು ಗೇರು ಬೆಳೆಯಲ್ಲಿ ಬಳಸಿದ ಯಂತ್ರೋಪಕರಣಗಳ ಬಗ್ಗೆ ವಿಷಯ ಮಂಡಿಸಿದರು.

ಸನ್ಮಾನ:
ಪ್ರಗತಿಪರ ಗೇರು ಕೃಷಿಕ ಬ್ರಿಜಿತ್ ಕೃಷ್ಣ ಹಾಗೂ ಪ್ರವೀಣ್ ನಾಯಕ್ ರವರನ್ನು ಸನ್ಮಾನಿಸಲಾಯಿತು.

ಪುಸ್ತಕೆ ಬಿಡುಗಡೆ:
ಸಂಸ್ಥೆಯ ಪ್ರಕಟಣೆಗಳಾದ Cashew News, Farmer Tracking System ಹಾಗೂ ಕಿರು ಪುಸ್ತಕಗಳಾದ Value added products of Cashew Apple, ನೇತ್ರಾ ಜಂಬೋ 2 ಮತ್ತು Nutrient Deficiency in Cashew ಗಳನ್ನು ಬಿಡುಗಡೆಗೊಳಿಸಲಾಯಿತು.

ಪುತ್ತೂರಿನ ಐಸಿಎಆರ್-ಡಿಸಿಆರ್‌ನಲ್ಲಿ ಅಭಿವೃದ್ಧಿಪಡಿಸಲಾದ 3-ಇನ್-1 ಗೋಡಂಬಿ ಹಣ್ಣು ಮತ್ತು ಬೀಜ ಬಿಡಿಸುವ ಯಂತ್ರ ತಂತ್ರಜ್ಞಾನವನ್ನು ಫಿಸನ್ ಅಗ್ರಿಟೆಕ್ ಪ್ರೈ. ಲಿಮಿಟೆಡ್‌ಗೆ ಪರವಾನಗಿ ನೀಡಲಾಯಿತು.

ಸಂಸ್ಥೆಯ ಹಿರಿಯ ವಿಜ್ಞಾನಿ ಡಾ. ಈರದಾಸಪ್ಪ ಇ., ಸ್ವಾಗತಿಸಿದರು. ವಿಜ್ಞಾನಿ ಡಾ. ಅಸ್ವತಿ, ಸಿ. ವಂದಿಸಿದರು. ಮುಖ್ಯತಾಂತ್ರಿಕ ಅಧಿಕಾರಿ ಪ್ರಕಾಶ್ ಜಿ. ಭಟ್ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here