ಪುತ್ತೂರು: ಸಾಮೆತ್ತಡ್ಕದಲ್ಲಿ ಕೃಷಿ ಜಮೀನಿಗೆ ಬೆಂಕಿ ತಗುಲಿ ಕೃಷಿ ಹಾನಿಗೊಂಡ ಘಟನೆ ಮಾ.11ರಂದು ನಡೆದಿದ್ದು, ಬೆಂಕಿಯಿಂದಾಗಿ ಸಾವಿರಾರು ರೂಪಾಯಿ ನಷ್ಟ ಸಂಭವಿಸಿದೆ ಎಂದು ಕೃಷಿ ಜಮೀನು ಮಾಲಕರು ತಿಳಿಸಿದ್ದಾರೆ.

ಸಾಮೆತ್ತಡ್ಕ ಕರಿಯಾಲ ದಿನೇಶ್ ಪ್ರಸನ್ನ ಅವರಿಗೆ ಸೇರಿದ ಕೃಷಿ ಜಮೀನಿಗೆ ಬೆಂಕಿ ತಗುಲಿತ್ತು. ಪಕ್ಕದ ಲೇಔಟ್‌ನಿಂದ ಬೆಂಕಿ ಪಕ್ಕದ ಕೃಷಿ ಜಮೀನಿಗೆ ಹರಡಿದೆ. ಬೆಂಕಿಯಿಂದಾಗಿ ತೆಂಗಿನ ಕಾಯಿಗಳು ಬೆಂಕಿಗಾಹುತಿ ಆಗಿದೆ. ದಿನೇಶ್ ಪ್ರಸನ್ನ ಅವರ ಮನೆ ಮಂದಿ ಸೇರಿ ಬೆಂಕಿಯನ್ನು ನಂದಿಸಿದ್ದಾರೆ. ಜೊತೆಗೆ ಪಕ್ಕದ ಲೇ ಔಟ್‌ನಿಂದ ಕಾರ್ಮಿಕರು ತಮ್ಮ ಕೃಷಿ ಜಮೀನಿಗೆ ಏಣಿ ಬಳಸಿ ಬಂದು ಕೃಷಿ ಉತ್ಪನ್ನ ಕಳವು ಮಾಡುತ್ತಿದ್ದಾರೆ. ತಮ್ಮ ಕೃಷಿ ಜಮೀನಿಗೆ ಮದ್ಯದ ಬಾಟಲಿಗಳು ಪತ್ತೆಯಾಗಿವೆ ಎಂದು ತಿಳಿಸಿದ್ದಾರೆ.