5 ವರ್ಷದ ಮಕ್ಕಳ ಮನಸ್ಥಿತಿಯನ್ನು ಹೊಂದಿರುವ ಈ ಮಕ್ಕಳು ದೇವರಿಗೆ ಸಮಾನ – ಗಂಗಾಧರ ರೈ

ಪುತ್ತೂರು: ಪುತ್ತೂರು ಮುಕ್ರಂಪಾಡಿ ನಿವಾಸಿ ನಿವೃತ್ತ ಬ್ಯಾಂಕ್ ಮ್ಯಾನೇಜರ್ ಗಂಗಾಧರ ರೈ ತಮ್ಮ ಹುಟ್ಟುಹಬ್ಬವನ್ನು ಅವರ ಮಕ್ಕಳು ಮತ್ತು ಸ್ನೇಹಿತರ ಜೊತೆ ಬಿರುಮಲೆ ಬೆಟ್ಟದಲ್ಲಿರುವ ಪ್ರಜ್ಞಾ ಆಶ್ರಮದ ಮಕ್ಕಳೊಂದಿಗೆ ಇತ್ತೀಚೆಗೆ ಆಚರಿಸಿದರು. ಆಶ್ರಮದ ವಿಶೇಷ ಚೇತನ ಮಕ್ಕಳ ಸಂಗೀತ, ನೃತ್ಯ ಮುಂತಾದ ಸಾಂಸ್ಕ್ರತಿಕ ಕಾರ್ಯಕ್ರಮ ನಡೆಯಿತು.
5 ವರ್ಷದ ಮಕ್ಕಳ ಮನಸ್ಥಿತಿಯನ್ನು ಹೊಂದಿರುವ ಇಲ್ಲಿರುವ ಮಕ್ಕಳು ದೇವರ ಸಮಾನರು. ಇಂತಹ ಮುಗ್ದ ಮನಸ್ಸು ಹೊಂದಿರುವ ಇವರೊಂದಿಗೆ ಕಳೆದ ಈ ಸಮಯ ನನ್ನ ಜೀವನದ ಅತ್ಯುನ್ನತ ಕ್ಷಣವಾಗಿದೆ ಇವರ ಈ ಸಂತಸ ಹೀಗೆ ಇರಲಿ ಆಶ್ರಮವನ್ನು ಮುನ್ನಡೆಸುತ್ತಿರುವ ಅಣ್ಣಪ್ಪ ದಂಪತಿಗಳಿಗೆ ದೇವರ ಆಶೀರ್ವಾದ ಸದಾ ಇರಲಿ ಎಂದು ಗಂಗಾಧರ ರೈ ಹೇಳಿದರು.

ಆಶ್ರಮದಲ್ಲಿರುವ ಮಕ್ಕಳಿಗೆ ಟಿ ಶರ್ಟ್ ವಿತರಿಸಲಾಯಿತು. ಈ ಸಂಧರ್ಭದಲ್ಲಿ ಆಶ್ರಮವನ್ನು ಮುನ್ನಡೆಸುತ್ತಿರುವ ಅಣ್ಣಪ್ಪ ದಂಪತಿಗಳನ್ನು ಸನ್ಮಾನಿಸಲಾಯಿತು. ಮತ್ತು ಸಂಸ್ಥೆಗೆ ಕಿರು ದೇಣಿಗೆಯನ್ನು ನೀಡಲಾಯಿತು.
ಗಂಗಾಧರ್ ರೈಗಳ ಪುತ್ರಿ ಅನಿತಾ ಕಿರಣ್ ಶೆಟ್ಟಿ ಬಂದ ಅತಿಥಿಗಳನ್ನು ಹೂ ನೀಡಿ ಸ್ವಾಗತಿಸಿದರು, ಈ ಸಂದರ್ಭದಲ್ಲಿ ಎ.ಜೆ ರೈ,ಕೆ.ಬಾಲಕೃಷ್ಣ ಆಚಾರ್ಯ, ಜಯರಾಜ್ ಭಂಡಾರಿ,ಆಸ್ಕರ್ ಆನಂದ್,ಲೊವಲ್ ಮೆವಾಡ ಹಾಗೂ ಮತ್ತಿತರರು ಉಪಸ್ಥಿತರಿದ್ದರು.