ಸಂತ ವಿಕ್ಟರನ ಆ.ಮಾ ಶಾಲೆಯಲ್ಲಿ ದೈಹಿಕ ಶಿಕ್ಷಕ ಜಯರಾಜ್ ಕೆ ಅವರ ಬೀಳ್ಕೊಡುಗೆ ಸಮಾರಂಭ

0

ಪುತ್ತೂರು: ಸಂತ ವಿಕ್ಟರನ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕಳೆದ 25 ವರ್ಷಗಳಿಂದ ಸುಧೀರ್ಘ ಕಾಲ ದೈಹಿಕ ಶಿಕ್ಷಕರಾಗಿ ಸೇವೆ ಸಲ್ಲಿಸಿ ಇತ್ತೀಚೆಗೆ ಸೇವಾ ನಿವೃತ್ತರಾದ ಜಯರಾಜ ಕೆ. ಅವರ ಬೀಳ್ಕೊಡುಗೆ ಸಮಾರಂಭವು ಮಾರ್ಚ್ 17 ರಂದು ಸೈಂಟ್ ವಿಕ್ಟರ್ ಗರ್ಲ್ಸ್ ಹೈ ಸ್ಕೂಲ್ ಇದರ ಸಭಾಂಗಣದಲ್ಲಿ ನಡೆಯಿತು.


ಕಾರ್ಯಕ್ರಮದಲ್ಲಿ ಮೈದೆ ದೇವಸ್ ಸಂಸ್ಥೆಯ ಮುಖ್ಯ ಸಂಚಾಲಕ ವಂದನೀಯ ಫಾದರ್ ಲಾರೆನ್ಸ್ ಜೆ ಮಸ್ಕರೇನಸ್ ಅಧ್ಯಕ್ಷತೆ ವಹಿಸಿದ್ದರು.ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಜೆರಾಲ್ ಡಿ’ಕೋಸ್ತಾ ,ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷ ಮೌರಿಸ್ ಕುಟಿನ್ಹ ಶಾಲಾ ಮುಖ್ಯೋಪಾಧ್ಯಾಯ ಹ್ಯಾರಿ ಡಿ’ಸೋಜ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಮುಖ್ಯ ಗುರು ಹ್ಯಾರಿ ಡಿಸೋಜಾ ಇವರು ಜಯರಾಜ್ ಅವರ ಅಭಿನಂದನಾ ಪತ್ರವನ್ನು ವಾಚಿಸಿದರು. ಶಾಲಾ ಸಂಚಾಲಕರು ಶಾಲು ಹೊಂದಿಸಿ ಸನ್ಮಾನಿಸಿ ಫಲ ಪುಷ್ಪಗಳನ್ನು ನೀಡಿದರು. ಜಯರಾಜ್ ಪತ್ನಿ ಮಲ್ಲಿಕಾ ಜಯರಾಜ್ ಹಾಗು ಮಗಳು ಪ್ರೇರಣಾ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.


ಜಯರಾಜ್‌ ಅವರು ನಾಲ್ಕು ವರ್ಷಗಳ ಕಾಲ ಭಕ್ತಕೋಡಿ ಶಾಲೆ ಹಾಗು 25 ವರ್ಷಗಳ ಕಾಲ ಸೈಂಟ್ ವಿಕ್ಟರ್ಸ್ ಶಾಲೆಯ ಸೇವಾವಧಿಯಲ್ಲಿನ ಕ್ಷಣಗಳನ್ನು ನೆನಪಿಸಿ, ಸಹೋದ್ಯೋಗಿಗಳ ಅಚಲವಾದ ಬೆಂಬಲವೇ ಸಮರ್ಪಕ ಕಾರ್ಯನಿರ್ವಹಣೆಗೆ ಕಾರಣವೆಂದು ಇಷ್ಟು ವರ್ಷಗಳ ಕಾಲ ಸೇವೆ ಸಲ್ಲಿಸಲು ಪ್ರೋತ್ಸಾಹಿಸಿದ ಸಂಚಾಲಕರು, ಶಾಲಾ ಆಡಳಿತ, ಮಂಡಳಿ ಮುಖ್ಯ ಶಿಕ್ಷಕರು ಶಿಕ್ಷಕೇತರ ವರ್ಗ ಹಾಗೂ ಮಕ್ಕಳಿಗೆ ಕೃತಜ್ಞತೆ ಸಲ್ಲಿಸಿದರು.


ಶಾಲಾ ಸಂಚಾಲಕರು ಮಾತನಾಡಿ, ಮಕ್ಕಳ ಮನಸ್ಸಿಗೆ ತೃಪ್ತಿ ನೀಡುವ ದೈಹಿಕ ಚಟುವಟಿಕೆಗಳನ್ನು ನಡೆಸಿ ಆಟೋಟ ಸ್ಪರ್ಧೆಗಳನ್ನೇರ್ಪಡಿಸಿ ಪ್ರೋತ್ಸಾಹ ನೀಡುತ್ತಿದ್ದ ಜಯರಾಜ್ ಸರ್ ಇಷ್ಟು ವರ್ಷಗಳ ಕಾಲ ಸೇವೆ ಸಲ್ಲಿಸಿ ಅನುಭವದ ಬಂಡಾರವನ್ನೇ ಹೊಂದಿದ್ದಾರೆ ಅವರ ಮುಂದಿನ ಜೀವನವು ಸುಖಮಯವಾಗಿರಲಿ ಎಂದು ಹರಸಿ ಹಾರೈಸಿದರು.


2024-25 ನೇ ಸಾಲಿನ ರಕ್ಷಕ ಶಿಕ್ಷಕ ಸಂಘದ ವತಿಯಿಂದ ಗೌರವದ ಸನ್ಮಾನವನ್ನು ನೀಡಲಾಯಿತು. ಕಾರ್ಯಕ್ರಮದಲ್ಲಿ ಜಯರಾಜ್‌ ಅವರ ಕುಟುಂಬಸ್ಥರು, ರಕ್ಷಕ ಶಿಕ್ಷಕ ಸಂಘದ ಆಡಳಿತ ಮಂಡಳಿ,ಪೋಷಕರು ಭಾಗಿಯಾಗಿದ್ದರು.ಸಹ ಶಿಕ್ಷಕಿ ಒಲಿವಿಯಾ ಸಿಕ್ವೇರಾ ಸ್ವಾಗತಿಸಿದರು. ಸಹಶಿಕ್ಷಕಿ ಲೀನಾ ಪಾಯಸ್ ಇವರು ಕಾರ್ಯಕ್ರಮ ನಿರೂಪಿಸಿದರು. ಪ್ರೀತಿ ವಂದಿಸಿದರು.

LEAVE A REPLY

Please enter your comment!
Please enter your name here