ಪುತ್ತೂರು:ತಿಂಗಳ ಹಿಂದೆ ಬೊಳುವಾರಿನಲ್ಲಿ ಟ್ರಕ್ ಚಾಲಕರೋರ್ವರಿಗೆ ಹಲ್ಲೆ ನಡೆಸಿದ್ದ ಆರೋಪಿಯನ್ನು ನ್ಯಾಯಾಲಯ ಜಾಮೀನಿನ ಮೇಲೆ ಬಿಡುಗಡೆಗೊಳಿಸಿದೆ.
‘ಫೆ.12ರಂದು ರಾತ್ರಿ ಬೊಳುವಾರು ಅಲಂಕಾರ್ ವೈನ್ಸ್ ಎಂಬಲ್ಲಿ ಮದ್ಯ ಖರೀದಿಸಿ ತನ್ನ ಮೋಟಾರ್ ಸೈಕಲ್ ಮೇಲೆ ಕುಳಿತಿದ್ದ ಸಮಯ ಆರೋಪಿಗಳಾದ ನರ್ಮೇಶ್ ರೈ ಮತ್ತಾತನ ಸಹಚರನೋರ್ವ ಅಲ್ಲಿಗೆ ಬಂದಿದ್ದ ವೇಳೆ, ವಿಕ್ಕಿ ಎಂಬಾತನಿಗೆ ಹೊಡೆದದ್ದು ಯಾಕೆ ಎಂದು ತಾನು ನರ್ಮೇಶ್‌ನಲ್ಲಿ ಕೇಳಿದೆ.ಅದನ್ನು ಕೇಳಲು ನೀನು ಯಾರು?ನಿಂದು ಬಾರಿ ಆಯ್ತು ಎಂದು ಹೇಳಿ ಆತನ ಕೈಲಿದ್ದ ಸೋಡಾ ಬಾಟ್ಲಿಯಿಂದ ನನ್ನ ಮುಖಕ್ಕೆ ಹಲ್ಲೆ ನಡೆಸಿದ್ದು ಆತನ ಜೊತೆಗಿದ್ದ ಇನ್ನೋರ್ವ ಕೂಡಾ ಸೋಡಾ ಬಾಟಲಿಯಿಂದ ಹಲ್ಲೆ ನಡೆಸಿರುವುದಾಗಿ’ ಆರೋಪಿಸಿ ಟ್ರಕ್ ಚಾಲಕ,ಬಾಳುಗೋಡು ಬೆಥಮುಖಿ ನಿವಾಸಿ ಉಮೇಶ್ ಬಿ.ಎಂಬವರು ಪೊಲೀಸರಿಗೆ ದೂರು ನೀಡಿದ್ದರು.
ಪೊಲೀಸರು ಕಲಂ 115(2),109,352,351(3),3(5) ಬಿಎನ್‌ಎಸ್‌ನಡಿ ಪ್ರಕರಣ(ಅ.ಕ್ರ.0011/2025) ದಾಖಲಿಸಿಕೊಂಡು ಆರೋಪಿಗಳನ್ನು ಬಂಽಸಿದ್ದರು.ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ನರ್ಮೇಶ್‌ನನ್ನು ನ್ಯಾಯಾಲಯ ಜಾಮೀನಿನ ಮೇಲೆ ಬಿಡುಗಡೆಗೊಳಿಸಿದೆ.ಆರೋಪಿ ಪರ ವಕೀಲರಾದ ಮಾಧವ ಪೂಜಾರಿ, ರಾಕೇಶ್ ಬಲ್ನಾಡ್ ಮತ್ತು ಮೋಹಿನಿ ಕೆ.ವಾದಿಸಿದ್ದರು.