ಪುತ್ತೂರು: ಕುರಿಯ ಏಳ್ನಾಡುಗುತ್ತು ದೈವಸ್ಥಾನದಲ್ಲಿ ಮಾ.15 ಮತ್ತು 16 ರಂದು ಪ್ರತಿಷ್ಠಾ ವಾರ್ಷಿಕೋತ್ಸವದ ಸಲುವಾಗಿ ವೈದಿಕ ಕಾರ್ಯಕ್ರಮ ಹಾಗೂ ಕಾಲದಿ ತಂಬಿಲಸೇವೆ ಕಾರ್ಯಕ್ರಮವು ನಡೆಯಿತು.

ಮಾ.15 ರಂದು ಬೆಳಿಗ್ಗೆ ಗಣಹೋಮದೊಂದಿಗೆ ಪ್ರಾರಂಭಗೊಂಡು ಶ್ರೀ ಲಕ್ಷ್ಮಿ ಸತ್ಯನಾರಾಯಣ ಪೂಜೆ, ಶ್ರೀ ಶಕ್ತಿ ಮಹಮ್ಮಯಿ ದೇವಿಯ ಪೂಜೆ, ಹರಿಸೇವೆ, ಕುಟುಂಬದ ಮೂಲನಾಗ ದೇವರಿಗೆ ತಂಬಿಲ ಸೇವೆ, ಮಜಾಲ್ಮರು ನಾಗದೇವರಿಗೆ ತಂಬಿಲ ಸೇವೆಯು ಅರ್ಚಕರಾದ ಸುಬ್ರಹ್ಮಣ್ಯ ನಕ್ಷತ್ರಿತ್ತಾಯ ಕುರಿಯ ರವರ ನೇತೃತ್ವದಲ್ಲಿ ವಿಜೃಂಭಣೆಯಿಂದ ನಡೆಯಿತು.
ಮಾ. 16ರಂದು ಬೆಳಿಗ್ಗೆ ಕಾಲದಿ ತಂಬಿಲ ಸೇವೆ ರಾತ್ರಿ ಕಲ್ಲುರ್ಟಿ ದೈವ ಮತ್ತು ಕೊರತಿ ದೈವ ಹಾಗೂ ಗುರುಕಾರ್ನವರಿಗೆ ಅಗೆಲು ಸೇವೆಯು ನಡೆಯಿತು. ಈ ಸಂದರ್ಭದಲ್ಲಿ ಕುರಿಯ, ಮಾಡಾವು,ನಂಜೆ, ಏಳ್ನಾಡುಗುತ್ತು ಕುಟುಂಬದ ಯಜಮಾನರುಗಳು, ಹಿರಿಯರು, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರು,ಕಾರ್ಯದರ್ಶಿ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷರು,ಕಾರ್ಯದರ್ಶಿ ಸಹಿತ ಕುಟುಂಬದ ಸಮಸ್ತ ಸದಸ್ಯರು ಹಾಗೂ ಬಂಧುಮಿತ್ರರು ಉಪಸ್ಥಿತರಿದ್ದರು.