ಪುತ್ತೂರು: ಶ್ರೀ ಮಹಾಲಿಂಗೇಶ್ವರ ದೇವರ ಆರಾಧನ ಸಮಿತಿ ಕುರಿಯ ಏಳ್ನಾಡುಗುತ್ತು ಇದರ ಕುರಿಯ ಏಳ್ನಾಡುಗುತ್ತಿನ ಆರಾಧನಾ ಸಮಿತಿಯ ಅಧ್ಯಕ್ಷರಾಗಿ ಎಂ ಬಿ ಚೆನ್ನಪ್ಪ ರೈ ಬಳಜ್ಜ, ಪ್ರಧಾನ ಕಾರ್ಯದರ್ಶಿಯಾಗಿ ಎಸ್ ಮಾಧವ ರೈ ಕುಂಬ್ರ, ಜೊತೆ ಕಾರ್ಯದರ್ಶಿಯಾಗಿ ಕೆ ಸತೀಶ್ ರೈ ಕುರಿಯ ಏಳ್ನಾಡುಗುತ್ತು ಹಾಗೂ ಕೋಶಾಧಿಕಾರಿಯಾಗಿ ಜಯಶೀಲ ರೈ ಕುರಿಯ ಏಳ್ನಾಡುಗುತ್ತುರವರನ್ನು ಪುನರಾಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಗೌರವರಾಧ್ಯಕ್ಷರಾದ ಕೆ ಎಂ ವಿಶ್ವನಾಥ ರೈ ಮಾಡಾವು, ಸಂಚಾಲಕರಾದ ಕೆ ಸೀತಾರಾಮ ರೈ ಕುರಿಯ ಹಾಗೂ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ರಾಧಾಕೃಷ್ಣರೈ ಕುರಿಯ, ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರಾದ ಎಸ್ ಬಿ ಜಯರಾಮರೈ ಬಳಜ್ಜ ಹಾಗೂ ಏಳ್ನಾಡುಗುತ್ತಿನ ಸರ್ವ ಸದಸ್ಯರು ಹಾಗೂ ಬಂಧು ಮಿತ್ರರು ಉಪಸ್ಥಿತರಿದ್ದರು . ರವಿಕಿರಣ್ ರೈ ಕುರಿಯ ಸ್ವಾಗತಿಸಿದರು. ಅಧ್ಯಕ್ಷರಾದ ಚೆನ್ನಪ್ಪ ರೈ ಬಳಜ್ಜ ಸಂದರ್ಭೋಚಿತವಾಗಿ ಮಾತನಾಡಿ ಎಲ್ಲರ ಸಹಕಾರ ಕೋರಿದರು ,ಪ್ರಧಾನ ಕಾರ್ಯದರ್ಶಿ ಎಸ್ ಮಾಧವ ರೈ ಕುಂಬ್ರ ವಂದಿಸಿದರು.
3 ವರ್ಷಗಳಲ್ಲಿ ಉತ್ತಮ ಸೇವೆ
ಈ ಸಂದರ್ಭದಲ್ಲಿ ಮಾತನಾಡಿದ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಎಸ್.ಬಿ.ಜಯರಾಮ ರೈ ಬಳಜ್ಜರವರು ಆರಾಧನಾ ಸಮಿತಿಯ ಜವಬ್ದಾರಿಯು ಕಳೆದ 3 ವರ್ಷಗಳಲ್ಲಿ ಉತ್ತಮ ರೀತಿಯಲ್ಲಿ ನಡೆದಿದ್ದು ಆದ್ದರಿಂದ 4 ನೇ ಬಾರಿಯೂ ಇದೇ ಸಮಿತಿಯನ್ನು ಮುಂದುವರಿಸೋಣ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಅದರಂತೆ 4 ನೇ ಬಾರಿಗೆ ಸಮಿತಿಯನ್ನು ಪುನರಾಯ್ಕೆ ಮಾಡಲಾಯಿತು.