ಪಾಣಾಜೆ: ಇಲ್ಲಿನ ದೇವತಲಡ್ಕ ಶ್ರೀ ರಕ್ತೇಶ್ವರಿ ಗುಳಿಗ, ಭೈರವ ಪರಿವಾರ ದೈವಸ್ಥಾನದಲ್ಲಿ ವರ್ಷಾವಧಿ ತಂಬಿಲ ಹಾಗೂ ಸಾರ್ವಜನಿಕ ಶ್ರೀ ದುರ್ಗಾಪೂಜೆ ಮಾ. 19 ರಂದು ಜರಗಿತು.

ಬೆಳಿಗ್ಗೆ ಗಣಪತಿ ಹವನ, ಸಂಜೆ ವಾರ್ಷಿಕ ತಂಬಿಲ, ಭಜನೆ, ಶ್ರೀ ದುರ್ಗಾಪೂಜೆ ನೆರವೇರಿತು. ಇದೇ ವೇಳೆ ಪುತ್ತೂರಿನ ಗಾನಸಿರಿ ಕಲಾಕೇಂದ್ರದ ಡಾ. ಕಿರಣ್ ಕುಮಾರ್ ತಂಡದಿಂದ ಭಕ್ತಿ ಭಾವ ಜಾನಪದ ಗೀತೆಗಳ ‘ಸ್ವರ ಮಾಧುರ್ಯ’ ನಡೆಯಿತು.

ಪೂಜೆಯ ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ನೆರವೇರಿತು. ರಣಮಂಗಲ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಶ್ರೀಕೃಷ್ಣ ಬೋಳಿಲ್ಲಾಯ ಕಡಮಾಜೆ ಸೇರಿದಂತೆ ಊರ ಪರವೂರ ಭಕ್ತರು ಪಾಲ್ಗೊಂಡರು.
