ಭದ್ರಕಾಳಿ ಗುಡಿಯಲ್ಲಿ ವಿಶೇಷ ಪೂಜೆ -ಶಿರಾಡಿ ಮತ್ತು ಗುಳಿಗ ದೈವಗಳ ನೇಮೋತ್ಸವ
ಆಲಂಕಾರು: ಸೀಮಾ ದೇವಸ್ಥಾನ ಶ್ರೀ ಕ್ಷೇತ್ರ ಶರವೂರು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಮಾ.14 ರಿಂದ 24 ರ ವರೆಗೆ ವಿಜೃಂಭಣೆಯಿಂದ ಜಾತ್ರೋತ್ಸವ ನಡೆದಿದ್ದು ಊರ ಪರವೂರ ಸಾವಿರಾರು ಭಕ್ತಾದಿಗಳು ಅಗಮಿಸಿ ಶ್ರೀ ದೇವಿಯ ಪ್ರಸಾದ ಸ್ವೀಕರಿಸಿ ಅನ್ನಸಂತರ್ಪಣೆಯಲ್ಲಿ ಪಾಲ್ಗೊಂಡರು.
ಮಾ.23ರಂದು ಬೆಳಿಗ್ಗೆ 8ರಿಂದ ಕವಾಟೋದ್ಘಾಟನೆ, ಪ್ರಸನ್ನ ಪೂಜೆ, ಶಯನ ಪ್ರಸಾದ ವಿತರಣೆ, 10ರಿಂದ ಯಾತ್ರಾ ಹೋಮ, ಮಧ್ಯಾಹ್ನ 12ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಅಪರಾಹ್ನ 3:30 ರಿಂದ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘ ಇವರ ಪ್ರಾಯೋಜಕತ್ವದಲ್ಲಿ ಸೌಪರ್ಣಿಕ ಮ್ಯೂಸಿಕಲ್ ಕಡಬ ಇವರಿಂದ ಭಕ್ತಿ ರಸಮಂಜರಿ ಕಾರ್ಯಕ್ರಮ ನಡೆದು ಸಂಜೆ 5ರಿಂದ ಅವಭೃತ ಮೆರವಣಿಗೆ, ಕಟ್ಟೆಪೂಜೆಗಳು, ಶಾಂತಮೊಗರು ಕುಮಾರಧಾರೆಯಲ್ಲಿ ಅವಭೃತ, ಬಳಿಕ ಧ್ವಜಾವರೋಹಣ ನಡೆಯಿತು.
ಮಾ.24ರಂದು ಬೆಳಿಗ್ಗೆ ಭದ್ರಕಾಳಿ ಅಮ್ಮನವರ ಗುಡಿಯಲ್ಲಿ ವಿಶೇಷ ಪೂಜೆ, ಶಿರಾಡಿ ಮತ್ತು ಗುಳಿಗ ದೈವಗಳ ನೇಮೊತ್ಸವ ನಡೆಯಿತು ಮಧ್ಯಾಹ್ನ ಶರವೂರು, ರಾಮಕುಂಜ ಹಾಗೂ ಆಲಂಕಾರು ಅಯ್ಯಪ್ಪ ಭಕ್ತವೃಂದದಿಂದ ಅನ್ನಸಂತರ್ಪಣೆ ನಡೆಯಿತು.

ಈ ಸಂಧರ್ಭದಲ್ಲಿ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಕೆ.ಸುಬ್ರಹ್ಮಣ್ಯ ರಾವ್ , ವ್ಯವಸ್ಥಾಪನ ಸಮಿತಿಯ ಸದಸ್ಯರಾದ ಕೆ.ಹರಿಪ್ರಸಾದ ಉಪಾಧ್ಯಾಯ,ರಾಧಾಕೃಷ್ಣ ರೈ ಪರಾರಿಗುತ್ತು, ಸೇಸಪ್ಪ ಪೂಜಾರಿ ನೆಕ್ಕಿಲಾಡಿ, ವಿಠಲ ರೈ ಪೆರಾಬೆ,ಪಟ್ಟೆ,ಮೋಹನ ಶರವೂರು, ಪುಷ್ಪಾಲತಾ.ಕೆ,ರೋಹಿಣಿ ಬಿ.ಯನ್,ವಾಸಪ್ಪ ಗೌಡ ಕೆದ್ದೊಟ್ಟೆ,ಗೌರವ ಸದಸ್ಯರಾದ ದಾಮೋದರ ಗೌಡ ಶರವೂರು, ಪ್ರಮುಖರಾದ ಹರೀಶ ಆಚಾರ್ಯ ನಗ್ರಿಗುತ್ತು ,ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಹೇಮಂತ್ ರೈ ಮನವಳಿಕೆ ಗುತ್ತು ಮತ್ತು ಸದಸ್ಯರು ಹಾಗು ಆದಿಶಕ್ತಿ ಭಜನಾ ಮಂಡಳಿಯ ಅಧ್ಯಕ್ಷರಾದ ನೋಣಯ್ಯ ,ಶ್ರೀ ದುರ್ಗಾಂಬಾ ಕಲಾಸಂಗಮದ ಅಧ್ಯಕ್ಷರಾದ ಚಂದ್ರದೇವಾಡಿಗ ಶ್ರೀ ದುರ್ಗಾಂಬಾ ಆಲಂಕಾರ ಸಮಿತಿಯ ಅಧ್ಯಕ್ಷ ಗಣರಾಜ್ ಆಲಂಕಾರು ಸ್ವಯಂ ಸೇವಾ ಸಮಿತಿಯ ಅಧ್ಯಕ್ಷ ಚೆನ್ನಪ್ಪ ಗೌಡ ಶರವೂರು,ಪದಾಧಿಕಾರಿಗಳು, ಸದಸ್ಯರು, ಆರ್ಚಕರು, ಸಿಬ್ಬಂದಿವರ್ಗದವರು ,ಊರ,ಪರವೂರ ಭಕ್ತಾದಿಗಳು ಜಾತ್ರೋತ್ಸವದಲ್ಲಿ ಸಹಕರಿಸಿದರು.
ಸುದ್ದಿ ಚಾನೆಲ್ ನಲ್ಲಿ ಲೈವ್
ದರ್ಶನ ಬಲಿ ಮತ್ತು ಮಹಾರಥೋತ್ಸವ ವನ್ನು ಸುದ್ದಿ ಚಾನೆಲ್ ನಲ್ಲಿ ಲೈವ್ ಮಾಡುವುದರ ಮೂಲಕ ದೇಶ ವಿದೇಶಗಳಲ್ಲಿ ನೆಲೆಸಿರುವ ಸೀಮೆಯ ಅಪಾರ ಭಕ್ತಾದಿಗಳು ವೀಕ್ಷಣೆ ಮಾಡಿ ಸಂತಸ ವ್ಯಕ್ತಪಡಿಸಿ ಕೃತಜ್ಞತೆ ಸಲ್ಲಿಸಿದರು.