ಪುತ್ತೂರು ದೇವಸ್ಥಾನದ ವಠಾರದಲ್ಲಿ  ಆರೋಗ್ಯ ಏರುಪೇರಾಗಿ ಕಚ್ಚುತ್ತಿದ್ದ ನಾಯಿ ಮಂಗಳೂರು ಅನಿಮಲ್ ಕ್ಯಾರ್ ಸೆಂಟರ್ ಗೆ !

0

 

ಪುತ್ತೂರು : ಆರೋಗ್ಯ ಏರುಪೇರಾಗಿ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಸಿಕ್ಕ ಸಿಕ್ಕವರಿಗೆ ಕಚ್ಚುತ್ತಿದ್ದ ನಾಯಿಯನ್ನು ಅನಿಮಲ್ ಕೇರ್ ಟ್ರಸ್ಟ್ ನಿಂದ ರಕ್ಷಣೆ ಮಾಡಿ ಮಂಗಳೂರಿಗೆ‌ ಕೊಂಡೊಯ್ಯಲಾಗಿದೆ.

ಮಾ.27 ರಂದು ದೇವಳದ ವಠಾರದಲ್ಲಿ ಇತರ ನಾಯಿ ಹಾಗು ಭಕ್ತರಿಗೆ ನಾಯಿ ಕಚ್ಚಿದ ಬಗ್ಗೆ ವರದಿಯಾಗಿತ್ತು. ಈ ಕುರಿತು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆಯವರು ಭಕ್ತರಿಗೆ ಎಚ್ಚರಿಕೆ ವಹಿಸುವಂತೆ ತಿಳಿಸಿದ್ದರು. ಮಾ.28 ರಂದು ಅನಿಮಲ್ ಕೇರ್ ಟ್ರಸ್ಟ್ ನ ಮಮತಾ ರಾವ್ ಅವರು ಬೆಳಗ್ಗೆ ದೇವಳದ ವಠಾರಕ್ಕೆ ಬಂದು ಆರೋಗ್ಯ ಏರುಪಾಗಿ ಅಡ್ಡಾದಿಡ್ಡಿಯಾಗಿ ಓಡಾಡುತ್ತಿದ್ದ ನಾಯಿಯನ್ನು ರಕ್ಷಣೆ ಮಾಡಿ ಅದರ ಆರೈಕೆಗಾಗಿ ಮತ್ತು ಸೂಕ್ತ ಚಿಕಿತ್ಸೆ ನೀಡಲು ಮಂಗಳೂರಿಗೆ ಕೊಂಡೊಯ್ದಿದ್ದಾರೆ.

LEAVE A REPLY

Please enter your comment!
Please enter your name here