ಪುತ್ತೂರು: 1965ರಲ್ಲಿ ಪುತ್ತೂರಿನ ಸುಮಾರು 34 ಹಿರಿಯ ಗಣ್ಯ ವ್ಯಕ್ತಿಗಳ ದೂರದೃಷ್ಟಿಯಿಂದ ಹುಟ್ಟಿ ಬೆಳೆದು ಬಂದ ಪುತ್ತೂರು ರೋಟರಿ ಸಂಸ್ಥೆ ತನ್ನದೇ ಆದ ಕೊಡುಗೆಯನ್ನು ಪುತ್ತೂರಿನ ಜನತೆಗೆ ನೀಡುತ್ತಾ ಬಂದಿದೆ. ಪುತ್ತೂರು ಕ್ಲಬ್ ಕಳೆದ ಹತ್ತುಹದಿನೈದು ವರ್ಷಗಳಿಂದ ಸುಮಾರು 5 ಕೋಟಿ ವೆಚ್ಚದ ಬೇರೆ ಬೇರೆ ಗ್ಲೋಬಲ್ ಗ್ರ್ಯಾಂಟ್ ಮಾಡಿದ್ದಾರೆ. ಜಿಲ್ಲೆಯಲ್ಲಿ ರೂ. 7 ಕೋಟಿ ವೆಚ್ಚದ ಗ್ಲೋಬಲ್ ಗ್ರ್ಯಾಂಟ್ ಕಾರ್ಯಕ್ರಮ ಆಗಿದೆ. ಮುಂದಕ್ಕೆ ರೂ. 1 ಕೋಟಿ ವೆಚ್ಚದ ಅಭಿವೃದ್ಧಿ ಕಾರ್ಯಕ್ರಮದ ಯೋಜನೆ ಹಾಕಿದ್ದೇವೆ. ಪುತ್ತೂರಿನಲ್ಲಿ ರೂ. 60 ಲಕ್ಷ ವೆಚ್ಚದಲ್ಲಿ ಸ್ತನ ಕ್ಯಾನ್ಸರ್‌ಗೆ ಸಂಬಂಧಿಸಿ ಮೆಮೋಗ್ರಾಪಿ ಕೇಂದ್ರ ಬರಲಿದೆ ಎಂದು ರೋಟರಿ ಕ್ಲಬ್ ಡಿಸ್ಟ್ರಿಕ್ಟ್ ಗವರ್ನರ್ ವಿಕ್ರಮ್ ದತ್ತ ಅವರು ಹೇಳಿದರು.
ಪತ್ರಿಕಾಗೋಷ್ಟಿಯಲ್ಲಿ ಅವರು ಮಾತನಾಡಿ ಜಿಲ್ಲೆಯಲ್ಲಿ ರೋಟರಿಯ 87 ಕ್ಲಬ್‌ಗಳಿವೆ. ಈ ವರ್ಷ ಇನ್ನೂ ೬ ಕ್ಲಬ್ ಹೆಚ್ಚಾಗಲಿದೆ. ಈ ನಡುವೆ ಹಲವು ಉತ್ತಮ ಯೋಜನೆಗಳನ್ನು ಸಮಾಜಕ್ಕೆ ನೀಡುವ ಉದ್ದೇಶದಿಂದ ಈ ಭಾರಿ ೯ ಜಿಲ್ಲಾ ಯೋಜನೆಗಳಾದ ಸಂದ್ಯಾಸುರಕ್ಷಾ,ಸರ್ವೈಕಲ್ ಕ್ಯಾನ್ಸರ್ ವ್ಯಾಕ್ಸಿನ್ ಜಾಗೃತಿ ಕಾರ್ಯಕ್ರಮ, ಲಸಿಕೆಯನ್ನು ರೋಟರಿ ಮೂಲಕ ರೂ. 500ಕ್ಕೆ ನೀಡುತ್ತೇವೆ. ಪ್ರೊಜೆಕ್ಟ್ ಪೊಸಿಟಿವ್ ಮೂಲಕ ಆರೋಗ್ಯದ ಜಾಗೃತಿ, ಅಂಗನವಾಡಿಗಳ ಪುನಶ್ಚೇತನ, ಜಲಸಿರಿ ಯೋಜನೆ, ರೋಡ್ ಶೇಪ್ಟಿ, ವನಸಿರಿ ಹೀಗೆ ಹಲವು ಕಾರ್ಯಕ್ರಮಗಳು ರೋಟರಿ ಮೂಲಕ ಮಾಡುತ್ತಿದ್ದೇವೆ. ಪುತ್ತೂರು ಕ್ಲಬ್ ಕಳೆದ ಹತ್ತು ಹದಿನೈದು ವರ್ಷಗಳಿಂದ ಸುಮಾರು ರೂ. ೫ ಕೋಟಿಯಷ್ಟು ಬೇರೆ ಬೇರೆ ಗ್ಲೋಬಲ್ ಗ್ರ್ಯಾಂಟ್ ಪಡೆದು ಕೊಂಡಿದ್ದಾರೆ. ಪುತ್ತೂರಿನಲ್ಲಿ ರೂ. ೬೦ಲಕ್ಷ ವೆಚ್ಚದಲ್ಲಿ ಮೆಮೋಗ್ರಾಪಿ ಸೆಂಟರ್ ಬರಲಿಕ್ಕಿದೆ. ಪುತ್ತೂರು ಪ್ರಗತಿ ಸ್ಪೆಷಾಲಿಟಿ ಆಸ್ಪತ್ರೆಯ ಒಂದು ವಿಭಾಗದಲ್ಲಿ ಈ ಸೆಂಟರ್ ತೆರೆಯಲಿದೆ. ಇದರಲ್ಲಿ ಬಿಪಿಎಲ್ ಕಾರ್ಡ್‌ದಾರರಿಗೆ ಉಚಿತ ತಪಾಸಣೆ ನಡೆಸಲಾಗುತ್ತದೆ ಎಂದ ಅವರು ಪುತ್ತೂರು ರೋಟರಿ ಕ್ಲಬ್‌ನಿಂದ ನಿರಂತರ ಕಾರ್ಯಕ್ರಮ ನಡೆಯುತ್ತಿದೆ ಎಂದರು.
ರೋಟರಿಯಿಂದ ಜನಪರ ಕಾರ್ಯಕ್ರಮ:
ಪುತ್ತೂರು ರೋಟರಿ ಕ್ಲಬ್ ಅಧ್ಯಕ್ಷ ಡಾ. ಶ್ರೀಪತಿ ರಾವ್ ಅವರು ಮಾತನಾಡಿ ಕಳೆದ 60 ವರ್ಷಗಳಿಂದ ರೋಟರಿ ಕ್ಲಬ್ ಹಲವು ಜನಪರ ಕಾರ್ಯಕ್ರಮ ಮಾಡಿಕೊಂಡು ಬಂದಿದೆ. ಪರಿಸರ ಪ್ರಾಥಮಿಕ ಅವಶ್ಯಕತೆಗೆ ಸದಾ ಸ್ಪಂದಿಸುತ್ತಾ ಬಂದಿದೆ. ಆರೋಗ್ಯ ಕ್ಷೇತ್ರದಲ್ಲಿ ಚಿಕ್ಕಮಕ್ಕಳಿಂದ ಹಿಡಿದು ಎಲ್ಲಾ ವಯೋಮಾನದವರಿಗೆ ಉಚಿತ ಆರೋಗ್ಯ ಶಿಬಿರವನ್ನು ಮಾಡಿದೆ. ಹಲವಾರು ಶಿಕ್ಷಣ ಸಂಸ್ಥೆಗಳಿಗೆ ಪ್ರಾಥಮಿಕ ಅವಶ್ಯಕತೆಗಳನ್ನು ಪೂರೈಸುವಲ್ಲಿ ತನ್ನ ಪ್ರಾಮಾಣಿಕ ಪ್ರಯತ್ನ ಮಾಡಿದೆ. ಆರ್ಥಿಕವಾಗಿ ತೀರಾ ಹಿಂದುಳಿದವರಿಗೆ ಮನೆ ನಿರ್ಮಾಣವನ್ನು ಮಾಡಿಕೊಡಲಾಗಿದೆ. ರೋಟರಿ ಬ್ಲಡ್ ಬ್ಯಾಂಕ್, ರೋಟರಿ ಡಯಾಲಿಸಿಸ್ ಕೇಂದ್ರ, ರೋಟರಿ ಕಣ್ಣಿನ ಅಸ್ಪತ್ರೆ ಬಹಳಷ್ಟು ಮಂದಿಗೆ ಪ್ರಯೋಜನ ಆಗಿದೆ. ಕೃತಕ ಅಂಗಾಂಗ ಜೋಡಣೆ ಕಾರ್ಯಕ್ರಮವನ್ನೂ ಮಾಡಲಾಗಿದೆ. ಮಹಾಲಿಂಗೇಶ್ವರ ದೇವಸ್ಥಾನದ ಮುಂಭಾಗದಲ್ಲಿರುವ ಹಿಂದು ರುದ್ರ ಭೂಮಿಯನ್ನು ನವೀಕರಣಗೊಳಿಸಲಾಗಿದೆ. ಶಾಶ್ವತ ಯೋಜನೆಯಾಗಿ ಪ್ರತಿ ತಿಂಗಳು ಕೆಎಂಸಿ ದಂತ ವಿದ್ಯಾಲಯದ ಸಹಯೋಗದೊಂದಿಗೆ ಉಚಿತ ದಂತ ಚಿಕಿತ್ಸಾ ಶಿಬಿರ, ಪ್ರಗತಿ ಮತ್ತು ಚೇತನಾ ಆಸ್ಪತ್ರೆ ಹಾಗು ನಝೀರ್ ಕ್ಲಿನಿಕ್‌ನಲ್ಲಿ ಪ್ರತಿ ತಿಂಗಳು ಉಚಿತ ಆರೋಗ್ಯ ಶಿಬಿರ ನಡೆಯುತ್ತಿದೆ. ಈ ವರ್ಷ ಪ್ರಗತಿ ಆಸ್ಪತ್ರೆಯಲ್ಲಿ ಮೆಮೋಗ್ರಾಪಿ ಸೆಂಟರ್ ತೆರಯಲಿದೆ. ನೆಲ್ಲಿಕಟ್ಟೆಯಲ್ಲಿ ರೋಟರಿ ಪೂರ್ವದ ಸಹಕಾರದೊಂದಿಗೆ ಮಕ್ಕಳಿಗಾಗಿ ಪ್ಲೇ ಹೋಮ್ ನಿರ್ಮಾಣಗೊಂಡಿದೆ. . ದರ್ಬೆ ನಯಾ ಚಪ್ಪಲ್ ಬಜಾರ್ ಸಹಯೋಗದೊಂದಿಗೆ ರೂ. ೪೦ ಸಾವಿರ ವೆಚ್ಚದಲ್ಲಿ ಸಾರ್ವಜನಿಕ ಶುದ್ದ ಕುಡಿಯುವ ನೀರಿನ ಘಟಕ, ಹೀಗೆ ೨೦೨೪-೨೫ರ ಅವಧಿಯಲ್ಲಿ ಸುಮಾರು ರೂ. ೬೫ ಲಕ್ಷ ವೆಚ್ಚದಲ್ಲಿ ಸಮಾಜ ಸೇವಾ ಕಾರ್ಯಕ್ರಮ ನಡೆಯಲಿದೆ. ಮುಂದೆ ೬೦ ಅಂಗನವಾಡಿ ಕೇಂದ್ರಗಳಿಗೆ ಚಪ್ಪಲು ವಿತರಣೆ, ೬೦ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಮತ್ತು ೬೦ ಪ್ರಾಥಮಿಕ, ಪ್ರೌಢಶಾಲೆಯ ಶಿಕ್ಷಕರನ್ನು ಗುರುತಿಸಿ ಗೌರವಿಸಲಾಗುವುದು, ಎನ್‌ಆರ್‌ಸಿಸಿ ಬಳಿ ಸಾಮಾಜಿಕ ಚಟುವಟಿಕೆಯ ತರಬೇತಿ ಕೇಂದ್ರ ನಿರ್ಮಾಣ ಮಾಡಲು ಸುಮಾರು ರೂ. ೬೦ಲಕ್ಷದ ಭೂಮಿ ಖರೀದಿಸಲು ಯೋಜನೆ ಹಾಕಲಾಗಿದೆ ಎಂದು ಡಾ. ಶ್ರೀಪತಿ ರಾವ್ ತಿಳಿಸಿದರು.
ಪತ್ರಿಕಾಗೋಷ್ಟಿಯಲ್ಲಿ ರೋಟರಿ ಕ್ಲಬ್‌ನ ಕಾರ್ಯದರ್ಶಿ ದಾಮೋದರ್ ಕೆ.ಎ, ಐಪಿಪಿ ಜೈರಾಜ್ ಭಂಡಾರಿ, ಉಪಾಧ್ಯಕ್ಷ ಡಾ.ಶ್ರೀಪ್ರಕಾಶ್, ರೋಟರಿ ಸಂಸ್ಥೆಯ ಮಾಜಿ ಅಧ್ಯಕ್ಷರಾದ ಚಿದಾನಂದ ಬೈಲಾಡಿ, ಝೇವಿಯರ್ ಡಿಸೋಜ, ಶ್ರೀಧರ್ ಕಣಜಾಲು, ಮಂಗಳೂರು ರೋಟರಿ ಕ್ಲಬ್‌ನ ಶಿವಪ್ರಸಾದ್ ಉಪಸ್ಥಿತರಿದ್ದರು.
ನಾನು ರೋಟರಿ ಕ್ಲಬ್ ಅಧ್ಯಕ್ಷನಾಗುವಾಗ ಕೆಲವರಿಗೆ ಡಾಕ್ಟರ್ ಆಸ್ಪತ್ರೆಯಿಂದ ಹೊರಗೆ ಬರಲಿಕ್ಕಿಲ್ಲ ಎಂಬ ಸಂದೇಹವಿತ್ತು. ಆದರೆ ಸಂದೇಹವನ್ನು ಬದಿಗಿಟ್ಟು ಎಲ್ಲಾ ಸೇವಾ ಕಾರ್ಯಕ್ರಮಗಳಿಗೆ ನುಗ್ಗಿ ಈ ವರ್ಷ ನಮ್ಮ ರೋಟರಿ ಕ್ಲಬ್ ರಾಜ್ಯೋತ್ಸವ ಪ್ರಶಸ್ತಿ ಪಡೆದಿದೆ. ರೋಟರಿ ಕ್ಲಬ್ ಪುತ್ತೂರು ಕಳೆದ 60 ವರ್ಷಗಳಿಂದ ಹಲವು ಸೇವಾ ಕಾರ್ಯಗಳನ್ನು ಮಾಡುತ್ತಾ ಬಂದಿದೆ.
ಡಾ. ಶ್ರೀಪತಿ ರಾವ್ ಅಧ್ಯಕ್ಷರು, ರೋಟರಿ ಕ್ಲಬ್ ಪುತ್ತೂರು