ಪುತ್ತೂರು: ಕರ್ನಾಟಕ ರಾಜ್ಯ ಸಹಕಾರ ಪಟ್ಟಣ ಬ್ಯಾಂಕುಗಳ ಮಹಾಮಂಡಳವು ರಾಜ್ಯದಲ್ಲಿರುವ ಪಟ್ಟಣ ಸಹಕಾರ ಬ್ಯಾಂಕುಗಳ ಸಿಬ್ಬಂದಿಗಳಿಗೆ ನೀಡುತ್ತಿರುವ ಡಿಪ್ಲೊಮಾ ಇನ್ ಅರ್ಬನ್ ಕೋ-ಆಪರೇಟಿವ್ ಬ್ಯಾಂಕಿಂಗ್ ಮ್ಯಾನೇಜ್‌ಮೆಂಟ್ ಕೋರ್ಸ್‌ನಲ್ಲಿ ಆಶಿಕ ಎ ಕುಮಾರ್ ಬಿ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ.
ಪ್ರಸ್ತುತ ಪುತ್ತೂರು ಕೋ ಆಪರೇಟಿವ್ ಟೌನ್ ಬ್ಯಾಂಕ್‌ನ ಉದ್ಯೋಗಿಯಾಗಿರುವ ಇವರು ಅಶೋಕ್ ಕುಮಾರ್ ಬಿ ಮತ್ತು ಸಂಧ್ಯಾ ಕೆ ಯವರ ಪುತ್ರಿ ಹಾಗೂ ಶ್ರೀಪಾದ ನಾಯಕ್, ಶಶಿಕಲಾ ಹಾಗೂ ಸುಬ್ರಾಯ, ಲಲಿತಾರವರ ಮೊಮ್ಮಗಳು.