ಪುತ್ತೂರು: ಜೆಸಿಐ ಪುತ್ತೂರು ಘಟಕದ ಸಾಮಾನ್ಯ ಸಭೆಯು ಅಧ್ಯಕ್ಷರಾದ ಭಾಗ್ಯೇಶ್ ರೈ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಾಮಾನ್ಯ ಸಭೆಯಲ್ಲಿ ಜೆಸಿಐ ಸದಸ್ಯರಿಗೆ ಅನುಕೂಲವಾಗುವಂತೆ ಸೈಬರ್ ಅಪರಾಧಗಳ ಬಗ್ಗೆ ಮಾಹಿತಿ ಕಾರ್ಯಗಾರವನ್ನು ಆಯೋಜಿಸಲಾಗಿತ್ತು. ಸಂಪನ್ಮೂಲ ವ್ಯಕ್ತಿಯಾಗಿ ಮಂಜುನಾಥ್ ಆರ್.ಜಿ. DySP Cyber Economic and Narcotics Police Station ದಕ್ಷಿಣ ಕನ್ನಡ ಇವರು ಭಾಗವಹಿಸಿ ವಿಸ್ತಾರವಾಗಿ ಮಾಹಿತಿಯನ್ನು ಹಂಚಿಕೊಂಡರು. ಪ್ರಸ್ತುತ ಸೈಬರ್ ಅಪರಾಧಿಗಳು ಮೊಬೈಲ್ ಲಿಂಕ್ ಗಳ ಮೂಲಕ ಹಾಗೂ ಒಟಿಪಿ ಇತ್ಯಾದಿಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿರುವ ಬಗ್ಗೆ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅತಿ ಹೆಚ್ಚು ಪುತ್ತೂರು ಭಾಗದಿಂದ ಸೈಬರ್ ಅಪರಾಧಗಳ ದೂರುಗಳು ಬರುತ್ತಿರುವ ಬಗ್ಗೆ ಜೆಸಿಐ ಸದಸ್ಯರ ಜೊತೆ ಅವರು ಮುಕ್ತ ಸಂವಾದ ನಡೆಸಿದರು. ಜೆಸಿಐ ಪುತ್ತೂರು ವತಿಯಿಂದ ಮಂಜುನಾಥ್ ಆರ್.ಜಿ.ರವರನ್ನು ಗೌರವಿಸಲಾಯಿತು. ಶಾಲಾ-ಕಾಲೇಜುಗಳಲ್ಲಿ ಜೆಸಿಐ ಪುತ್ತೂರು ವತಿಯಿಂದ ಮುಂದೆ ನಡೆಸಲು ಯೋಜಿಸಿರುವ ಸೈಬರ್ ಅಪರಾಧಗಳ ಜಾಗೃತಿ ಕಾರ್ಯಕ್ರಮಗಳಿಗೆ ಇಲಾಖೆಯ ಸಹಕಾರವನ್ನು ಜೆಸಿಐ ಅಧ್ಯಕ್ಷ ಭಾಗ್ಯೇಶ್ ರೈ ಅವರು ಕೋರಿದರು.
ಕಾರ್ಯಕ್ರಮದಲ್ಲಿ ಜೆಸಿಐ ನಿಕಟಪೂರ್ವ ಅಧ್ಯಕ್ಷ ಜೆಸಿ ಮೋಹನ್ ಕೆ. ಜಂಟಿ ಕಾರ್ಯದರ್ಶಿ ಜೆಸಿ ರಂಜಿನಿ ಶೆಟ್ಟಿ, ಮಹಿಳಾ ಸಂಯೋಜಕಿ ಆಶಾ ಮುತ್ಲಾಜೆ, ಜೂನಿಯರ್ ಜೆಸಿ ಸ್ವಸ್ತಿ ಶೆಟ್ಟಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ನ ಮೌನೇಶ್ ವಿಶ್ವಕರ್ಮ, ಹೆಡ್ ಕಾನ್ಸ್ಟೇಬಲ್ ಅಜಿತ್, ಕಾನ್ಸ್ಟೇಬಲ್ ನಾಗಪ್ಪರವರನ್ನು ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಜೆಸಿಐನ ಮಾಜಿ ರಾಷ್ಟ್ರೀಯ ಉಪಾಧ್ಯಕ್ಷರಾದ ಮುರಳಿಶ್ಯಾಮ್, ಪೂರ್ವ ಅಧ್ಯಕ್ಷ ಜಗನ್ನಾಥ ರೈ, ಸ್ವಾತಿ ಜೆ. ರೈ, ಶಶಿರಾಜ್ ರೈ, ವಸಂತ ಜಾಲಾಡಿ ಶರತ್ ರೈ, ಪುರುಷೋತ್ತಮ ಶೆಟ್ಟಿ, ವಲಯ ಉಪಾಧ್ಯಕ್ಷರಾದ ಸುಹಾಸ್ ಮರಿಕೆ ಮತ್ತಿತರರು ಭಾಗವಹಿಸಿದ್ದರು